ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಬೆಳವಣಿಗೆಗಳು ನಡೆಯುತ್ತಿದ್ದು, ಹಲವು ವಿಚಾರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ವಿರೋಧಿಗಳ ಟಾರ್ಗೆಟ್ ಆಗಿದ್ದಾರೆ. ಸ್ವಪಕ್ಷೀಯರು ಮತ್ತು ವಿಪಕ್ಷೀಯರು ಇಬ್ಬರಿಂದಲೂ ಸದ್ಯ ಡಿಕೆ ಟಾರ್ಗೆಟ್ ಆದಂತೆ ಕಾಣುತ್ತಿದೆ.

ಹೌದು ರಾಜ್ಯದಲ್ಲಿ ಹನಿಟ್ರ್ಯಾಪ್ (Honey trap), ಫೋನ್ ಟ್ಯಾಪಿಂಗ್ (Phobe taping), ಸಂವಿಧಾನ ಬದಲಾವಣೆ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ (Bjp) ನಾಯಕರು ಮಾಸ್ಟರ್‌ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಅದ್ರಲ್ಲೂ ವ್ಪೀಕ್ಷಗಳಿಗೆ ಡಿಕೆಶಿ ಮೇನ್ ಟಾರ್ಗೆಟ್ ಆಗಿದ್ದಾರೆ.

ರಾಜ್ಯದಲ್ಲಿ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪ ಮಾಡಿದ್ರು.ಆ ನಂತರ ಆರ್.ಅಶೋಕ್ ಫೋನ್ ಟ್ಯಾಪಿಂಗ್ ಬಗ್ಗೆ ಸ್ಫೋಟಕ ಆರೋಪ ಮಾಡಿದ್ರು.ಈ ಎರಡೂ ಆರೋಪಕಗಳು ಪರೋಕ್ಷವಾಗಿ ಡಿಕೆಶಿ ಕಡೆಯೇ ಬೊಟ್ಟು ಮಾಡಿದಂತಿದೆ.

ಈ ಮಧ್ಯೆ ಡಿಸಿಎಂ ಶಿವಕುಮಾರ್ ಸಂವಿಧಾನ ಬದಲಾವಣೆಯ ಮಾತ್ನಾಡಿರೋದು ಬಿಜೆಪಿಗೆ ಮತ್ತೊಂದು ಅಸ್ತ್ರವಾಗಿ ಪರಿಣಮಿಸಿದೆ.ಹೀಗಾಗಿ ಈ ಮೂರೂ ಅಸ್ತ್ರಗಳು ಈಗ ಬಿಜೆಪಿಯವರ ಕೈಯಲ್ಲಿದ್ದು, ಇದನ್ನೆ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ಮಾಸ್ಟರ್‌ಪ್ಲಾನ್ ಮಾಡಿದ್ದಾರೆ.