• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

MB Patil: ಹೋಂಡಾದ ₹600 ಕೋಟಿ ಹೂಡಿಕೆಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕ ಶೀಘ್ರ ಕಾರ್ಯಾರಂಭ.

ಪ್ರತಿಧ್ವನಿ by ಪ್ರತಿಧ್ವನಿ
September 8, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಕೈಗಾರಿಕಾ ಸಚಿವ ಎಂ. ಬಿ. ಪಾಟೀಲರ ನೇತೃತ್ವದಲ್ಲಿ ರಾಜ್ಯದ ನಿಯೋಗದ ಜಪಾನ್‌ ಭೇಟಿ, ಜಪಾನ್‌ ಜೊತೆ ಕರ್ನಾಟಕದ ವಾಣಿಜ್ಯ ಬಾಂಧವ್ಯ ವೃದ್ಧಿ.

ADVERTISEMENT
  • ಹೂಡಿಕೆ ಆಕರ್ಷಣೆ ಹಾಗೂ ವಹಿವಾಟು ವಿಸ್ತರಣೆಗೆ ಟೋಕಿಯೊ ಎಲೆಕ್ಟ್ರಾನ್‌, ಮಿತ್ಸುಬಿಸಿ ಎಲೆಕ್ಟ್ರಿಕ್‌, ಯೋಕೊಗವಾ ಎಲೆಕ್ಟ್ರಿಕ್‌ ಮತ್ತು ರೆಸ್ಟರ್‌ ಕಂಪನಿಗಳ ಜೊತೆ ಫಲಪ್ರದ ಮಾತುಕತೆ

ಸುಮಾರು ₹600 ಕೋಟಿ ಬಂಡವಾಳ ಹೂಡಿಕೆಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕವು ಶೀಘ್ರದಲ್ಲಿಯೇ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಜಪಾನಿನ ಹೋಂಡಾ ಕಂಪನಿಯು, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗಕ್ಕೆ ತಿಳಿಸಿದೆ.

ಭಾರತದಲ್ಲಿನ ತನ್ನ ಮೊದಲ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ಬೆಂಗಳೂರಿನ ಸಮೀಪದ ನರಸಾಪುರದಲ್ಲಿ ಕಾರ್ಯಾರಂಭ ಮಾಡಲಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಈ ಒಪ್ಪಂದಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಕಂಪನಿಯು ರಾಜ್ಯದ ನಿಯೋಗಕ್ಕೆ ಮಾಹಿತಿ ನೀಡಿದೆ.

ʼಹೋಂಡಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರ ಜೊತೆಗಿನ ಭೇಟಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆʼ ಎಂದು ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.

ಸಚಿವರ ನೇತೃತ್ವದಲ್ಲಿ ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗವು, ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಸೋಮವಾರ ಫಲಪ್ರದ ಮಾತುಕತೆ ನಡೆಸಿದೆ.
ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡುತ್ತಿದೆ. ಟೋಕಿಯೊ ಎಲೆಕ್ಟ್ರಾನ್‌, ಮಿತ್ಸುಬಿಸಿ ಎಲೆಕ್ಟ್ರಿಕ್‌, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್‌ ಮತ್ತು ರೆಸ್ಟರ್‌ ಹೋಲ್ಡಿಂಗ್ಸ್‌ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.

ಸೆಮಿಕಂಡಕ್ಟರ್‌ ವಲಯದ ಬೆಳವಣಿಗೆಗೆ ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆಯೂ ಸೇರಿದಂತೆ ರಾಜ್ಯದಲ್ಲಿ ಪೂರಕ ಪರಿಸರ ಇದೆ. ಕಂಪನಿಯ ಭವಿಷ್ಯದ ಬೆಳವಣಿಗೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ಟೋಕಿಯೊ ಎಲೆಕ್ಟ್ರಾನ್‌ನ ಉನ್ನತ ಅಧಿಕಾರಿಗಳಿಗೆ ಸಚಿವರು ಮನದಟ್ಟು ಮಾಡಿಕೊಟ್ಟರು.

ಮಿತ್ಸುಬಿಸಿ ಎಲೆಕ್ಟ್ರಿಕ್‌ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿರುವುದಾಗಿ ಯೋಕೊಗವಾ ಎಲೆಕ್ಟಿಕ್‌ ತಿಳಿಸಿದೆ.

ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಸೇವೆಗಳನ್ನು (ಇಎಂಎಸ್‌) ಆರಂಭಿಸಲು ಮುಂದಾಗಬೇಕು ಎಂದು ಸಚಿವರು, ಜಪಾನಿನ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್‌ ಹೋಲ್ಡಿಂಗ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಉನ್ನತ ಮಟ್ಟದ ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಇದ್ದಾರೆ.

Tags: HK PatilM B Patilm b patil exclusive talksm b patil newsm b patil son engagementm b patil vs shivananda patilmb patil​MB Patilmb patil bhashanmb patil bijapurmb patil congressmb patil familymb patil fansmb patil housemb patil latestmb patil latest newsmb patil livemb patil meetingmb patil mlamb patil newsmb patil oathmb patil sonmb patil son basanmb patil songmb patil speechmb patil statementmb patil videomb patil videosmbpatilMinister MB Patil
Previous Post

CM Siddaramaiah: ಎಲ್ಲಾ ಧರ್ಮದ ಮೂಲ ಮಾನವೀಯತೆ: ಇದೇ ಸಂವಿಧಾನದ ಆಶಯ..!!

Next Post

ಧರ್ಮದ ಕಣ ಮದ್ದೂರು ನೆನೆಯುತ್ತ..!

Related Posts

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
0

ನವದೆಹಲಿ: ಗಿಗ್ ಕಾರ್ಮಿಕರ ಮುಷ್ಕರ ಹಾಗೂ ಅವರ ಸುರಕ್ಷತೆ ಕುರಿತ ಗಂಭೀರ ಕಳವಳಗಳ ಹಿನ್ನೆಲೆಯಲ್ಲಿ ತ್ವರಿತ ವಿತರಣಾ ಸೇವೆ ನೀಡುತ್ತಿದ್ದ ಬ್ಲಿಂಕಿಟ್ (Blinkit) ತನ್ನ 10 ನಿಮಿಷಗಳಲ್ಲಿ...

Read moreDetails
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

January 13, 2026
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
Next Post
ಧರ್ಮದ ಕಣ ಮದ್ದೂರು ನೆನೆಯುತ್ತ..!

ಧರ್ಮದ ಕಣ ಮದ್ದೂರು ನೆನೆಯುತ್ತ..!

Recent News

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು
Top Story

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

by ಪ್ರತಿಧ್ವನಿ
January 13, 2026
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
Top Story

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

by ಪ್ರತಿಧ್ವನಿ
January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!