ಚಳಿಗಾಲದ ಗಾಳಿ ತುಂಬಾನೇ ತಂಪಾಗಿರುತ್ತದೆ. ಹಾಗಾಗಿ ದೇಹದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತದೆ. ಕೆಲವರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಶೀತ ನೆಗಡಿ, ಕೆಮ್ಮು ಜ್ವರ ಇವೆಲ್ಲವೂ ಕೂಡ ಚಳಿಗಾಲದಲ್ಲಿ ತುಂಬಾನೇ ಕಾಮನ್, ಇದರ ಜೊತೆಗೆ ಕೆಲವರಿಗೆ ಚರ್ಮ ಒಡೆಯುತ್ತದೆ ಹಾಗೂ ಚರ್ಮ ಸುಕ್ಕುಗಟ್ಟುವುದು ಕೂಡ ಹೆಚ್ಚಾಗುತ್ತದೆ. ಹಿಮ್ಮಡಿಯಲ್ಲಿ ಬಿರುಕು ಬೀಳುವುದು,ತುಟಿ ಡ್ರೈಯಾಗುವುದು ಹೀಗೆ ಚರ್ಮಕ್ಕೆ ಸಂಬಂಧಪಟ್ಟ ಒಂದಿಷ್ಟು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಂದರ್ಭದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಾಗಿ ಕಾಳಜಿಯನ್ನ ವಹಿಸಬೇಕು ಹಾಗೂ ತಪ್ಪದೆ ತ್ವಚೆಯನ್ನ ಮಾಯಿಶ್ಚರೈಸ್ ಮಾಡುವುದು ಕೂಡ ಒಳ್ಳೆಯದು. ಸ್ಪೆಷಲಿ ಚಳಿಗಾಲದಲ್ಲಿ ತ್ವಚೆಯನ್ನ ನ್ಯಾಚುರಲ್ ಆಗಿ ಮಾಯಿಶ್ಚರೈಸ್ ಮಾಡಲು ಈ ಸಿಂಪಲ್ ಹೋಮ್ ರೆಮಿಡೀಸ್ ಟ್ರೈ ಮಾಡಿ.
ಜೇನು ಮತ್ತು ಮೊಸರು
ಎರಡು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರು ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ಮಿಶ್ರಣವನ್ನ ತ್ವಚೆಗೆ ಹಚ್ಚಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ನ್ಯಾಚುರಲ್ ಆಗಿ ಸ್ಕಿನ್ ಮಾಯ್ಶ್ಚರೈಸಾಗುತ್ತದೆ.
ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ
ಒಂದು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ, ಎರಡು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆ ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ತ್ವಚೆ ಮಾಯಿಶ್ಚರೈಸ್ ಆಗುತ್ತದೆ ಹಾಗೂ ಕಲೆಗಳು ನಿವಾರಣೆ ಆಗುತ್ತದೆ.
ಬಾಳೆಹಣ್ಣು ಮತ್ತು ಆವಕಾಡೊ
ಒಂದು ಮಾಗಿದ ಬಾಳೆಹಣ್ಣು ಹಾಗೂ ಒಂದು ಮಾಗಿದ ಆವಕಾಡೊ ಜೊತೆಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಸ್ಮಾಷ್ ಮಾಡಿ.ನಂತರ ಆ ಮಿಶ್ರಣವನ್ನು ತ್ವಚೆಗೆ ಹಚ್ಚಿ ಬೆಚ್ಚಿಗಿನ ನೀರಿನಿಂದ ಮುಖವನ್ನ ತೊಳೆಯುವುದರಿಂದ ಮುಖ ಮಾಯಿಶ್ಚರೈಸ್ ಆಗುವುದರ ಜೊತೆಗೆ ತ್ವಚೆಯ ಹೊಳಪು ಹೆಚ್ಚಾಗುತ್ತದೆ.