PSI ಹಗರಣವನ್ನು ಕಂಡು ಹಿಡಿದಿದ್ದೇ ಗೃಹ ಸಚಿವರು ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗಿಮಿಕ್ ಮಾಡುವುದು ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣವನ್ನು ಕಂಡು ಹಿಡಿದಿದ್ದೇ ಗೃಹ ಸಚಿವರು, ಹಾಗಾಗಿ ಅವರನ್ನು ಅಭಿನಂದಿಸಬೇಕಿತ್ತು, ಆದರೆ ಪ್ರಕರಣವನ್ನು ಬೆಂಗಳೂರಿಗೆ ತಂದು ಅಶ್ವಥ್ ನಾರಾಯಣ್ ಮೇಲೆ ದಾಖಲೆಗಳಿಲ್ಲದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಸಂಬಂಧ ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ. ಚುನಾವಣೆ ಸಮೀಪಿಸುತ್ತಿದ್ದಂತೆ ಗಿಮಿಕ್ ಮಾಡುವುದು ಕಾಂಗ್ರೆಸ್ ಗೆ ರಕ್ತಗತವಾಗಿದೆ ಎಂದು ಹೇಳಿದ್ದಾರೆ.