ಕರೋನ ಎರಡನೆ ಅಲೆಯಲ್ಲಿ ಹೋಮ್ ಐಸೋಲೇಷನ್‍ನಲ್ಲಿದ್ದ ಹೆಚ್ಚು ಮಂದಿ ಮೃತಪಟ್ಟಿರುವುದರಿಂದ ಇನ್ನು ಮುಂದೆ ಪಾಸಿಟಿವ್ ರೋಗಿಗಳು ಹೋಮ್ ಐಸೋಲೇಷನ್‍ನಲ್ಲಿ ಇರಬೇಕೆ ಬೇಡವೇ ಎಂಬುದನ್ನು ಬಿಬಿಎಂಪಿಯೇ ನಿರ್ಧರಿಸಲಿದೆ ಎನ್ನಲಾಗಿದೆ.
ಕರೋನ ಸೋಂಕು ಕಾಣಿಸಿಕೊಂಡ ನಂತರ ಹತ್ತು ಹದಿನೈದು ದಿನಗಳವರೆಗೆ ಮನೆಯಲ್ಲೇ ಚಿಕಿತ್ಸೆ ಪಡೆದು ಪರಿಸ್ಥಿತಿ ಬಿಗಡಾಯಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಾದವರು ಹೆಚ್ಚಾಗಿ ಸಾವನ್ನಪ್ಪಿರುವವುದನ್ನು ಕಂಡು ಈ ಹಿನ್ನಲೆಯಲ್ಲಿ ಬಿಬಿಎಂಪಿ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಹಿಂದೆ ಹೊಂ ಐಸೋಲೇಷನ್ ನಿರ್ಧಾರವನ್ನು ಸೋಂಕಿತರಿಗೆ ಬಿಡಲಾಗಿತ್ತು. ಅತೀ ಹೆಚ್ಚು ಬಿಗಡಾಯಿಸಿತುವ ಸಂಖ್ಯೆ ಹೆಚ್ಚು ಇರುವ ಕಾರಣ ಇನ್ನೂ ಮುಂದೆ ಈ ಹೊಂ ಐಸೋಲೇಷನ್ ನಿರ್ಧಾರವನ್ನು ಬಿಬಿಎಂಪಿ ಕೈಕೊಂಡಿದೆ.
ಬಿಬಿಎಂಪಿಗೆ ಈಗಾಗಲೇ ಸೂಚನೆ ನೀಡಿದ್ದು ಬಿಬಿಎಂಪಿ ಅಡಿಯಲ್ಲಿ ಬರುವ ಸಂಚಾರಿ ವೈದ್ಯರ ತಂಡ ಕಡ್ಡಾಯವಾಗಿ ಕರೋನ ಸೋಂಕಿತರ ಮನೆಗೆ ಹೋಗಿ ಪರಿಶೀಲನೆ ನಡೆಸಲಿದ್ದಾರೆ. ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.
ಸೊಂಕು ಕಾಣಿಸಿಕೊಂಡ ತಕ್ಷಣ ಸ್ಥಳೀಯ ಕರೋನ ಪರೀಕ್ಷೆ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಪಾಸಿಟಿವ್ ಬಂದರೆ. ಯಾರ ರೋಗಿಗೆ ಯಾವತರಹದ ಚಿಕಿತ್ಸೆ ನೀಡಬೇಕು. ಹೊಂ ಐಸೋಲೇಷನ್ ನಲ್ಲಿ ಇರಬೇಕು, ಅಥವಾ ಪರಿಸ್ಥಿತಿ ಬಿಗಡಾಯಿಸಿದರೆ ಏನು ಮಾಡಬೇಕು ಎಂಬುದನ್ನು ವೈದ್ಯರು ಮತ್ತು ಬಿಬಿಎಂಪಿ ನಿಯೋಜಿಸಲಾದ ಅಧಿಕಾರಿಗಳು ಸೂಚಿಸಲಾಗುವುದು. ಇದರಿಂದ ಹೊಂ ಐಸೋಲೇಷನ್ ನಲ್ಲಿ ಮೃತರಾಗುವವರನ್ನು ತಡೆಯಬಹುದು ಎನ್ನಲಾಗಿದೆ.








