
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ₹165 ಕೋಟಿ ವ್ಯಯಿಸಿ ಕಾಂತರಾಜು ಆಯೋಗ (Kantharaju commission) ನಡೆಸಿದ್ದ ಜಾತಿ ಗಣತಿಯನ್ನು (Caste census ) 10 ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದೆ. ಇದೀಗ ಮತ್ತೆ ₹425 ಕೋಟಿ ರೂ ವ್ಯಯಿಸಿ ಜಾತಿ ಗಣತಿ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿಗಳೇ, ಕಾಂತರಾಜು ಆಯೋಗದ ವರದಿಯಂತೆ ಇದೂ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ ಎಂದು ಬಿ.ವೈ ವಿಜಯೇಂದ್ರ ವ್ಯಂಗ ಮಾಡಿದ್ದಾರೆ.

ಅತ್ಯಲ್ಪ ಅವಧಿಯಲ್ಲಿ 7 ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ ಆದರೆ ಕೇವಲ ಪರಿಶಿಷ್ಟರ ಜಾತಿಗಣತಿ ನಡೆಸಲು ನಾಗಮೋಹನ್ ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಪಡೆದಿತ್ತು, ಈಗ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಮೊದಲು ಕಾಂತರಾಜು ಆಯೋಗಕ್ಕೆ ವ್ಯಯಿಸಿದ್ದ ₹165 ಕೋಟಿ ರೂ ನಂತೆ ಈಗಿನ ₹425 ಕೋಟಿ ರೂ. ಹಣ ನೀರಿಗೆ ಹೋಮವಾಗದಿರಲಿ.. ಈ ಹಿಂದಿನ ವರದಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಸರಿಯಾದ ರೀತಿಯಲ್ಲಿ ಜಾತಿ ಗಣತಿ ನಡೆಸುವುಸು ರಾಜ್ಯ ಸರ್ಕಾರದ ಹೊಣೆಗಾರಿಕೆ ಎಂದು ವಿಜಯೇಂದ್ರ ಕಾಂಗ್ರೆಸ್ ಸರ್ಕಾರವನ್ನು ಕುಟುಕಿದ್ದಾರೆ.











