ಮಂಡ್ಯದ ಮಳವಳ್ಳಿಯಲ್ಲಿ ಫುಡ್ ಪಾಯ್ಸನ್ನಿಂದ ವಿದ್ಯಾರ್ಥಿ ಸಾವು ಪ್ರಕರಣ, ಹೋಳಿ ಬಣ್ಣದಿಂದ ಫುಡ್ ಪಾಯಿಸನ್ ಆಗಿ ಮಗು ಸತ್ತಿದೆ ಎಂದು ಮಳವಳ್ಳಿ ಮಾಜಿ ಶಾಸಕ ಡಾ. ಕೆ ಅನ್ನದಾನಿ ಹೇಳಿದ್ದಾರೆ. ಹೋಳಿ ಹಬ್ಬದ ವೇಳೆ ಆಹಾರಕ್ಕೆ ಬಣ್ಣ ಹಾಕಲಾಗಿದೆ. ಬಣ್ಣ ಬಿದ್ದ ಆಹಾರ ತಿಂದು ಮಕ್ಕಳು ಅಸ್ವಸ್ಥರಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮ ಆಗಬೇಕು. ಮಕ್ಕಳ ಈ ಪರಿಸ್ಥಿತಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣ. ಮೃತ ಮಗುವಿನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಕ್ಷೇತ್ರದಲ್ಲಿ ಇಂತಹ ಗಂಭೀರ ಪ್ರಕರಣ ನಡೆದರೂ ಶಾಸಕರು ನಾಪತ್ತೆ ಆಗಿರುವ ವಿಚಾರದ ಬಗ್ಗೆ ಮಾತನಾಡಿ, ಇಂತಹ ವಿಚಾರ ನಡೆದಾಗ ಶಾಸಕರು ಬೇಗ ಹೋಗಲ್ಲ. ಯಾವುದಾದರೂ ಅಧಿಕಾರ ಸಿಗತ್ತೆ ಅಂದ್ರೆ ಬೇಗ ಹೋಗ್ತಾರೆ. ಏನಾದ್ರೂ ಅಧಿಕಾರ ಸಿಗುತ್ತದೆ ಅಂದ್ರೆ ರಾತ್ರಿಯೆಲ್ಲಾ ಕಾದು ಹೋಗ್ತಾರೆ. ಅವರಿಗೆ ಅಧಿಕಾರದ ಅರ್ಜೆಂಟ್ ಮಾತ್ರ ಇದೆ. ಕೋವಿಡ್ ಸಮಯದಲ್ಲಿ ಇರಲೇ ಇಲ್ಲ. ಚುನಾವಣೆ ಟೈಮಲ್ಲಿ ಬಂದು ಗೆದ್ದು ನಾಪತ್ತೆಯಾದ್ರು. ಹಣ ಅಂತಸ್ತು ಅಷ್ಟೆ ಅವರಿಗೆ ಬೇಕಾಗಿರೋದು ಎಂದು ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ವಿರುದ್ದ ವ್ಯಂಗ್ಯವಾಡಿದ್ದಾರೆ.

ಮಗು ಸಾವನ್ನಪ್ಪಿದ ಬಳಿಕ ಮಿಮ್ಸ್ಗೆ ಭೇಟಿ ನೀಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಮೇಘಾಲಯದಿಂದ ಮಕ್ಕಳನ್ನ ಅಡಪ್ಟ್ ಮಾಡಿಕೊಳ್ಳಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಅನುಮತಿ ಇದ್ಯಾ..? ಅನ್ನೋದರ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ. ಆ ಶಾಲೆಯಲ್ಲಿ ಮಕ್ಕಳು ಇರಲು ಯೋಗ್ಯವಾಗಿಲ್ಲ.
ಸಾಕಷ್ಟು ತಪ್ಪುಗಳು ನಡೆದಿದೆ. ಶಾಲಾ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದ್ದೇನೆ. ಮೃತ ಮಗುವಿನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರ, ಸಿಎಂ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮಕ್ಕಳ ಚಿಕಿತ್ಸಾ ವೆಚ್ಚವನ್ನ ನಾವೇ ಭರಿಸಲಿದ್ದೇವೆ ಎಂದಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ವಿಷಹಾರ ಸೇವಿಸಿ ವಿದ್ಯಾರ್ಥಿ ಸಾವಿನ ಬಗ್ಗೆ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ ಸಿಎಂ ಸಿದ್ದರಾಮಯ್ಯ. ಅಸ್ವಸ್ಥರಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಈ ಘಟನೆಗೆ ಕಾರಣೀಕರ್ತ ಆದವರಿಗೆ ಕಠಿಣ ಕ್ರಮಕ್ಕೆ ಸೂಚಿಸಿದ್ದು, ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದೆಂದು ಸಿಎಂ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ಮಂಡ್ಯದಲ್ಲಿ ವಿಷ ಆಹಾರ ಸೇವನೆಯಿಂದ ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ವಸತಿ ಶಾಲೆ ಆಡಳಿತ ಮಂಡಳಿ ವಿರುದ್ದ FIR ದಾಖಲು ಮಾಡಿರುವುದಾಗಿ ಮಂಡ್ಯ ಡಿ.ಸಿ ಡಾ ಕುಮಾರ್ ಮಾಹಿತಿ ನೀಡಿದ್ದಾರೆ. ವಸತಿ ಶಾಲೆ ನಡೆಸಲು ಯಾವುದೇ ಅನುಮತಿ ಪಡೆದಿಲ್ಲ. ಅನಧಿಕೃತವಾಗಿ ವಸತಿ ಶಾಲೆ ನಡೆಸಲಾಗ್ತಿತ್ತು. ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮ ತೆಗೆದುಕೊಳ್ಳಲಿದ್ದೇವೆ. ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹೋಳಿ ಬಣ್ಣ ಊಟದ ಜೊತೆ ಸೇರಿತ್ತು ಎಂದು ಹೇಳಲಾಗ್ತಿದೆ. ಇದರ ಬಗ್ಗೆ ಸೂಕ್ತ ತನಿಖೆಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಮಂಡ್ಯದಲ್ಲಿ ವಿಷ ಆಹಾರ ಸೇವಿಸಿ ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಆಹಾರ ತಯಾರು ಮಾಡಿದ್ದ ಹೋಟೆಲ್ ಮಾಲೀಕನ ಬಂಧನ ಆಗಿದೆ ಎಂದು ಮಂಡ್ಯದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಸಾವಿನ ಬಗ್ಗೆ ಸೂಕ್ತ ತನಿಖೆ ಮಾಡಲಾಗ್ತಿದೆ. ಮೇಲ್ನೋಟಕ್ಕೆ ಫುಡ್ ಪಾಯಿಸನ್ ರೀತಿ ಕಾಣಿಸ್ತಿದೆ. ಆಹಾರಕ್ಕೆ ಬಣ್ಣ ಮಿಕ್ಸ್ ಆಗಿತ್ತಾ ಎಂಬ ಬಗ್ಗೆ ತನಿಖೆ ಮಾಡ್ತಿದ್ದೇವೆ. ಬಿಇಒ ಅವರಿಂದ ನಾವು ದೂರು ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಅಡುಗೆ ಮಾಡಿದ ಹೋಟೆಲ್ ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದೇವೆ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಘಟನೆ ಬಗ್ಗೆ ಬೇಸರ ಹೊರ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಳವಳ್ಳಿ ವಸತಿ ಶಾಲೆಯ ದುರ್ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಮೃತ ವಿದ್ಯಾರ್ಥಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಳವಳ್ಳಿ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥ ಮಕ್ಕಳ ಆರೋಗ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.