ಆಮ್ ಆದ್ಮಿ ಪಕ್ಷ ಸಮಾಜಕ್ಕೆ ಕಾಲಿಟ್ಟು ಒಂಭತ್ತು ವರ್ಷ ತುಂಬಿದೆ. ಹೀಗಾಗಿ ಬೆಂಗಳೂರಿನ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಿಡಿದು ತಿರಂಗಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ, ಗೋಪಿನಾಥ್ ನೇತೃತ್ವದಲ್ಲಿ ಚಿಕ್ಜಪೇಟೆಯ ಗಲ್ಲಿ ಗಲ್ಲಿಯಲ್ಲೂ ಪಕ್ಷದ ಬಗ್ಗೆ ಪ್ರಚಾರ ಮಾಡಿದರು. ಅಲ್ಲದೇ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ರಸ್ತೆ ಗಂಡಿಗಳ ಕಾಟ ಹೆಚ್ಚಾಗಿದೆ. ಕಳೆದೆ ಹತ್ತು ವರ್ಷಗಳಿಂದ ಇಲ್ಲಿ ಬಂದು ಹೋಗಿರುವ ಕಾರ್ಪೊರೇಟರ್ ಗಳು ಯಾವುದೇ ರೀತಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಜೊತೆಗೆ ಕೂಡಲೇ ರಸ್ತೆಗುಂಡಿಗಳನ್ನು ಸರಿ ಪಡಿಸಬೇಕು ಇಲ್ಲವಾದ್ರೆ ಎಎಪಿ ಪಕ್ಷ ಖಂಡಿಸಿ ಪ್ರತಿಭಟನೆಗೆ ಮುದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರೈತರು..!
https://youtu.be/_EJbc7kZ5uU
Read moreDetails


