ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ರನ್ನ ವೈಭವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿಯಲ್ಲಿ ರನ್ನ ವೈಭವ ಆರಂಭಗೊಂಡಿದೆ.

ಇಂದಿನಿಂದ(ಫೆ 22) ಮೂರು ದಿನಗಳ ಕಾಲ ರನ್ನ ವೈಭವ ನಡೆಯಲಿದೆ. ಮೊದಲ ರನ್ನ ಬೆಳಗಲಿಯಲ್ಲಿ , ಎರಡು ದಿನ ಮುಧೋಳದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇಂದಿನ ಉದ್ಘಾಟನೆಯ ವೇಳೆ ವೇದಿಕೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಕಾಶಪ್ಪನವರ, ಜೆ.ಟಿ.ಪಾಟೀಲ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸೇರಿದಂತೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.