ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ನಟಿಸುತ್ತಿರುವ ಹಿರಣ್ಯ ಚಿತ್ರದ ಪೋಸ್ಟರ್ ಗಣೇಶ ಚತುರ್ಥಿ ಪ್ರಯುಕ್ತ ಬಿಡುಗಡೆಯಾಗಿದ್ದು ನೋಡುಗರ ಕುತೂಹಲವನ್ನ ಹೆಚ್ಚಿಸಿದೆ.
ಬಿಚ್ಚುಗತ್ತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜವರ್ಧನ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ತಮ್ಮದಾಗಿಸಿಕೊಂಡಿದ್ದರು. ಸದ್ಯ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜವರ್ಧನ್ ಗೆ ಜೋಡಿಯಾಗಿ ಮಾಡಲ್ ರಿಹಾನಾ ಚಂದನವನ ಪ್ರವೇಶಿಸುತ್ತಿದ್ದಾರೆ.
ಸದ್ಯ ಹಿರಣ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಚಿತ್ರಕ್ಕೆ ಯೋಗೇಶ್ವರನ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು. ವಿಶೇಷ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಟಿಸುತ್ತಿದ್ದಾರೆ. ಈ ಮೊದಲು ಹಿರಣ್ಯ ಸಿನಿಮಾದ ಟೈಟಲ್ ಡಾಲಿ ಧನಂಜಯ್ ಬಳಿ ಇತ್ತು. ಪ್ರೀತಿಯಿಂದ ಡಾಲಿ ಗೆಳೆಯ ರಾಜವರ್ಧನ್ ಗೆ ಸಿನಿಮಾದ ಟೈಟಲ್ಅನ್ನು ಬಿಟ್ಟು ಕೊಟ್ಟಿದ್ದಾರೆ.
