• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಹಿಂದೂ vs ಹಿಂದುತ್ವ: ಜೇನುಗೂಡಿಗೆ ಕಲ್ಲೆಸೆದರೇ ರಾಹುಲ್ ಗಾಂಧಿ?

Shivakumar A by Shivakumar A
November 15, 2021
in ಅಭಿಮತ
0
ಹಿಂದೂ vs ಹಿಂದುತ್ವ: ಜೇನುಗೂಡಿಗೆ ಕಲ್ಲೆಸೆದರೇ ರಾಹುಲ್ ಗಾಂಧಿ?
Share on WhatsAppShare on FacebookShare on Telegram

ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಮೃದು ಹಿಂದುತ್ವದ ಕಾರಣಕ್ಕೆ ಟೀಕೆಗೊಳಗಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಹಿಂದುತ್ವದ ಕುರಿತು ಇಷ್ಟು ಸ್ಪಷ್ಟವಾದ ಮತ್ತು ಕಠಿಣವಾದ ವ್ಯಾಖ್ಯಾನವನ್ನು ನೀಡಿರುವುದು ನಿಜಕ್ಕೂ ಆಶ್ಚರ್ಯ.

ADVERTISEMENT

“ಹಿಂದೂಗಳಿಗೆ ಹಿಂದುತ್ವದ ಅಗತ್ಯವೇನಿದೆ? ಸಿಖ್ಖರು ಮತ್ತು ಮುಸ್ಲೀಮರನ್ನು ಥಳಿಸುವುದು ಹಿಂದುತ್ವವೇ? ಅಖ್ಲಾಕ್’ನಂತಹವರನ್ನು ಕೊಲ್ಲುವುದು ಹಿಂದುತ್ವವೇ?” ಎಂದು ರಾಹುಲ್ ಪ್ರಶ್ನಿಸಿದ್ದರು. ಇದನ್ನು ಬಿಜೆಪಿಯ ವಿರುದ್ದದ ವಾಗ್ದಾಳಿ ಎಂದು ಮಾತ್ರ ಪರಿಗಣಿಸುವ ಬದಲು, ವಿಶಾಲವಾದ ರಾಜಕೀಯ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. 

ಕಳೆದ ಸುಮಾರು ಒಂದು ದಶಕದಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಭಾರತದಲ್ಲಿ ‘ತಮ್ಮ ವ್ಯವಸ್ಥಿತವಾದ ಅಜೆಂಡಾಗಳ ಮೂಲಕ ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ಇರುವಂತಹ ವ್ಯತ್ಯಾಸವನ್ನು ಇಲ್ಲವಾಗಿಸುವಲ್ಲಿ ಸಫಲರಾಗಿದ್ದಾರೆ. ಹಿಂದುತ್ವ ಎಂದರೆ ಹಿಂದು, ಹಿಂದೂ ಎಂದರೆ ಹಿಂದುತ್ವ ಎಂಬ ಭಾವನೆ ದೇಶದ ಬಹುತೇಕರ ಮನಸ್ಸಿನಲ್ಲಿ ಬೇರೂರಿದೆ. ಹಿಂದುತ್ವದ ಹಿಂದೆ ಇರುವಂತಹ ರಾಜಕೀಯ ಅಜೆಂಡಾಗಳನ್ನು ಹಿಂದೂ ಧರ್ಮದೊಂದಿಗೆ ಬೆರೆಸಿ ಜನರಿಗೆ ಧರ್ಮದ ಅಮಲಿನ Cocktail ಅನ್ನು ಬಿಜೆಪಿ ಮತ್ತು ಆರ್‌ಎಸ್ಎಸ್ ಉಣಬಡಿಸುತ್ತಿದೆ. ಹಿಂದುತ್ವವನ್ನು ಟೀಕಿಸುವವರು ಹಿಂದೂಗಳನ್ನು ಟೀಕಿಸಿದಂತೆ ಎಂಬ ಭ್ರಮೆ ಎಲ್ಲರಲ್ಲಿಯೂ ಆವರಿಸಿದೆ. 

ಈ ಎರಡರ ನಡುವಿನ ವ್ಯತ್ಯಾಸವನ್ನು ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವೆ ಸ್ಪಷ್ಟವಾದ ರೇಖೆಯನ್ನು ಎಳೆಯುವ ಪ್ರಯತ್ನ ಇದಾಗಿದೆ. 

“ನಾನು ಉಪನಿಷದ್’ಗಳನ್ನು ಓದಿದ್ದೇನೆ. ಎಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೊಲ್ಲು ಎಂದು ಬರೆದದ್ದು ಕಾಣಿಸಿಲ್ಲ. ಆದರೆ, ಇದು ಹಿಂದುತ್ವದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನಮಗೆ ಶಿವ, ಸಂತ ಕಬೀರ, ಗುರು ನಾನಕ್, ಮಹಾತ್ಮ ಗಾಂಧಿಯಿಂದ ಮಾರ್ಗದರ್ಶನ ಸಿಗುತ್ತದೆ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು? ಈ ಹೊಸ ಹೆಸರಿನ ಅಗತ್ಯವಾದರೂ ಏನು?” ಎಂದು ರಾಹುಲ್ ಪ್ರಶ್ನಿಸಿದ್ದಾರೆ. 

ಇಲ್ಲಿಯೂ ತನ್ನ ವರಸೆ ಬಿಡದ ಬಿಜೆಪಿ, ಹಿಂದೂ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಮತ್ತೆ ಮರೆಮಾಚುವ ಕೆಲಸ ಮಾಡಿದೆ. ರಾಹುಲ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ರಾಹುಲ್ ಗಾಂಧಿಗೆ ಹಿಂದೂಗಳ ಮೇಲೆ ವೈಷಮ್ಯವಿದೆ,” ಎಂದು ಹೇಳಿದ್ದಾರೆ. ಇದು ನಿರೀಕ್ಷಿಸಿದ ಬೆಳವಣಿಗೆ. ಆದರೆ, ಅನಿರೀಕ್ಷಿತ ಏನೆಂದರೆ, ರಾಹುಲ್ ಗಾಂಧಿಯ ಬಾಯಿಯಿಂದ ಹಿಂದುತ್ವದ ಕುರಿತು ಬಂದಿರುವ ಪದಗಳು. 

ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯೆಂದು ಬಿಂಬಿಸಲು ಆರಂಭಿಸಿದ ದಿನಗಳಿಂದಲೇ ಹಿಂದುತ್ವ ಎಂಬುದು ರಾಜಕೀಯ ಸಿದ್ದಾಂತಗಳಲ್ಲಿ ಒಂದಾಗಿಬಿಟ್ಟಿತು. ಇದು ದೇಶದಲ್ಲಿ ಈಗಾಗಲೇ ಆಳವಾಗಿ ಬೇರೂರಿದ್ದ, ಜಾತ್ಯಾತೀತವಾದ ಹಾಗೂ ಎಡಪಂಥೀಯ ವಿಚಾರಧಾರೆಯನ್ನು ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಒಂದು ಕಾಲದಲ್ಲಿ ಸಾಮಾಜಿಕವಾಗಿ ನಿರಾಕರಿಸಲ್ಪಟ್ಟಿದ್ದ ಹಾಗೂ ಹಿಮ್ಮುಖ ಚಲನೆಯ ಸಿದ್ದಾಂತವೆಂದು ಬಿಂಬಿತವಾಗಿದ್ದ ಹಿಂದುತ್ವ, ಈಗ ಪ್ರಮುಖ ರಾಜಕೀಯ ಅಸ್ತ್ರವಾಗಿ ಬೆಳದು ನಿಂತಿದೆ. ಮುಖ್ಯವಾಹಿನಿ ಮಾಧ್ಯಮಗಳ ಬೆಂಬಲದಿಂದ ಭಿನ್ನಮತೀಯರ ಧ್ವನಿಯನ್ನು ಮುಚ್ಚಿಹಾಕುವ ಪ್ರಯತ್ನ ಹಿಂದುತ್ವದ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಸಂದರ್ಭದಲ್ಲಿ ಹಿಂದುತ್ವದ ವಿರುದ್ದ ಮಾತನಾಡುವುದು ರಾಜಕೀಯವಾಗಿ ಆತ್ಮಹತ್ಯೆಗೆ ಸರಿಸಮಾನ ಎಂಬ ಭಾವನೆಯೂ ಬೆಳೆದು ನಿಂತಿದೆ. ಹಿಂದುತ್ವದ ವಿರುದ್ದ ಮಾತನಾಡುವುದೆಂದರೆ, ನೇರವಾಗಿ ಆರ್‌ಎಸ್ಎಸ್ ಅನ್ನು ಎದುರು ಹಾಕಿಕೊಂಡಂತೆ ಎಂಬ ಗುಮ್ಮ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ತಲೆಯಲ್ಲಿ ಆಳವಾಗಿ ಬೇರೂರಿದೆ. 

ಈ ಕಾರಣದಿಂದಾಗಿ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಸೋಲಿಸಲು ಎಲ್ಲಾ ರಾಜಕೀಯ ಪಕ್ಷಗಳು ಅಭಿವೃದ್ದಿಯ ಹೆಸರಿನಲ್ಲಿ ಬಿಜೆಪಿ ವಿರುದ್ದ ಟೀಕೆಗೆ ಮುಂದಾಗಿದ್ದವು. ಹಿಂದುತ್ವದ ವಿಚಾರದಲ್ಲಿ ಮಾತನಾಡಿದರೆ, ಎಲ್ಲಿ ಬಹುಸಂಖ್ಯಾತರ ಮತಗಳು ಕೈತಪ್ಪುವುದು ಎಂಬ ಭಯ ಸಾಮಾನ್ಯವಾಗಿ ಆವರಿಸಿತ್ತು. ಹಿಂದೆ ಮುಸ್ಲಿಂ ನಾಯಕರನ್ನು ಅಪ್ಪಿ ಮುದ್ದಾಡುತ್ತಿದ್ದವರು ಏಕಾಏಕಿ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. 

ಇದಕ್ಕಿಂತ ದೊಡ್ಡ ದುರಂತ ಏನೆಂದರೆ, ಬಿಜೆಪಿ ನಾಯಕರಿಗಿಂತ ತಾನು ಶ್ರೇಷ್ಠ ಹಿಂದೂ ಎಂದು ತೋರಿಸಿಕೊಳ್ಳಲು ಇತರೆ ರಾಜಕೀಯ ನಾಯಕರು ಹೆಣಗಾಡತೊಡಗಿದರು. ಬಿಜೆಪಿಯ ಅಂಗಳದಲ್ಲಿಯೇ ಬಿಜೆಪಿಯನ್ನು ಮಣಿಸುತ್ತೇವೆ ಎಂಬ ಹಠ ಇವರದ್ದಾಗಿತ್ತು. ರಾಹುಲ್ ಗಾಂಧಿಯ ಟೆಂಪಲ್ ರನ್, ಅರವಿಂದ ಕೇಜ್ರೀವಾಲರ ಹನುಮಾನ್ ಚಾಲೀಸ ಪಠಣ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸದ ಭರವಸೆ, ಮಮತಾ ಬ್ಯಾನರ್ಜಿಯ ‘ಬ್ರಾಹ್ಮಣ ಮಹಿಳೆ’ ಹೇಳಿಕೆ ಹೀಗೆ ಬಹುತೇಕ ಮೊದಲ ಸಾಲಿನ ನಾಯಕರು ಬಿಜೆಪಿ ಬೀಸಿದ ಬಲೆಗೆ ಸಿಕ್ಕ ಮಿಕಗಳೆಂತೆ ಒದ್ದಾಡಿದ್ದರು.

ಇದನ್ನು ರಾಜಕೀಯ ಅವಕಾಶವಾದಿತನ ಅಥವಾ ಮೃದು ಹಿಂದುತ್ವ ಎಂಬ ಹೆಸರಿನಲ್ಲಿ ಕರೆಯಲಾಗಿತ್ತು. ವಿಪಕ್ಷ ನಾಯಕರನ್ನು ಮುಸ್ಲಿಂ ಪ್ರೇಮಿಗಳು ಎಂದು ಅಣಕಿಸುತ್ತಿದ್ದ ಬಿಜೆಪಿಯ ಬಾಯಿ ಮುಚ್ಚಿಸುವುದು ಬಿಟ್ಟರೆ, ಬೇರಾವ ಲಾಭವೂ ಇದರಿಂದ ಸಿಗಲಿಲ್ಲ. ಈ ಕಾರಣದಿಂದಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ, ಶಹೀನ್ ಬಾಘ್ ಹೋರಾಟದ ಸಂದರ್ಭದಲ್ಲಿ ಅಥವಾ ದೆಹಲಿ ಗಲಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೆ ದೃಢವಾದ ನಿಲುವನ್ನು ತಾಳಲು ಸಾಧ್ಯವೇ ಆಗಲಿಲ್ಲ. ಏಕಾಏಕಿ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಅನಾಥರನ್ನಾಗಿಸಿದ ವಿಪಕ್ಷಗಳು, ಅವರನ್ನು ನಡುನೀರಿನಲ್ಲಿ ಕೈಬಿಟ್ಟವು. 

ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಹಿಂದೂ vs ಹಿಂದುತ್ವ ಹೇಳಿಕೆ ನಿಜಕ್ಕೂ ಮಹತ್ವ ಪಡೆಯುತ್ತದೆ. ಅವಕಾಶವಾದಿ ರಾಜಕಾರಣದ ನೆರಳಿನಿಂದ ಹೊರಬಂದು ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಪಕ್ಷದ ಬೇರುಗಳನ್ನು ಸದೃಢಗೊಳಿಸದಿದ್ದರೆ ಮುಂದಾಗುವ ಅಪಾಯದ ಅರಿವು ಮನದಟ್ಟಾಗಿರುವಂತೆ ಕಾಣುತ್ತದೆ. ಬಿಜೆಪಿಯ ಮನೆಯೊಳಗೆ ತನ್ನ ಮನೆ ನಿರ್ಮಿಸಲು ಹೊರಟಿದ್ದ ವಿಪಕ್ಷಗಳಿಗೆ ಅದು ಅಸಾಧ್ಯ ಹಾಗೂ ಮೂರ್ಖತನ ಎಂಬ ಅರಿವು ಮೂಡದಿದ್ದಲ್ಲಿ ಇಂತಹ ಹೇಳಿಕೆ ಬರುವುದು ಬಹುಶಃ ಸಾಧ್ಯವಿಲ್ಲವೇನೋ. 

ಎಂತಹ ಮಹತ್ವದ ಸತ್ಯವನ್ನು ಬೇಕಾದರೂ ಸುಳ್ಳಾಗಿಸುವ ವ್ಯವಸ್ಥಿತವಾದ ಗುಂಪು ಬಿಜೆಪಿಯ ಬೆನ್ನಿಗೆ ನಿಂತಿದೆ. ಎಂತಹ ಸುಳ್ಳಿಗೆ ಬೇಕಾದರೂ ಸತ್ಯದ ಲೇಪನ ಹಚ್ಚಲು ಮುಖ್ಯವಾಹಿನಿ ಮಾಧ್ಯಮಗಳು ತಯಾರಾಗಿವೆ. ಇಂತಹ ಸಂದರ್ಭದಲ್ಲಿ ಹಿಂದುತ್ವವೆಂಬ ಸಿದ್ದಾಂತದ ವಿರುದ್ದ ಸೆಣಸಾಡುವುದು ಸುಲಭವಲ್ಲ. ಆದರೆ, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗಿರುವ ಭಾರತದಲ್ಲಿ, ಸೈದ್ಧಾಂತಿಕವಾಗಿಯೇ ರಾಜಕೀಯ ಎದುರಾಳಿಗಳನ್ನು ಎದುರಿಸುವ ಅಗತ್ಯವಿದೆ. ಅದಕ್ಕಾಗಿ ಕಾಂಗ್ರೆಸ್ ತನ್ನ ಸಿದ್ಧಾಂತ ಏನು ಎಂಬುದನ್ನು ಮೊದಲು ಜನರಿಗೆ ಸ್ಪಷ್ಟಪಡಿಸಬೇಕಾಗಿದೆ. ಹಿಂದುತ್ವವೆಂಬ ‘ಭ್ರಮೆ’ಯಲ್ಲಿ ತೇಲಾಡುತ್ತಿರುವ ಕೋಟ್ಯಾಂತರ ಜನರಿಗೆ ಅದರ ಹಿಂದಿನ ರಾಜಕೀಯ ಷಡ್ಯಂತ್ರ, ಸುಳ್ಳುಗಳ ಸರಮಾಲೆಯನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ತೋರಿಸಬೇಕಾಗಿದೆ. ಇಲ್ಲವಾದರೆ, ಐತಿಹಾಸಿಕವಾದ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ದಿವಾಳಿತನ ದೃಷ್ಟಿಸಿದ ಬಿಜೆಪಿಗೆ ಮತ್ತೆ ಮತಗಳ ಆಶೀರ್ವಾದ ಲಭಿಸುತ್ತದೆ. 

ಸದ್ಯಕ್ಕೆ ಭಾರತವು ಕಾಂಗ್ರೆಸ್ ಮುಕ್ತವಾಗಿಲ್ಲವಾದರೂ, ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಬಳಿ ಹೆಚ್ಚಿನ ವಿಕಲ್ಪಗಳು ಉಳಿದಿಲ್ಲ. ಪಕ್ಷದ ಸಿದ್ದಾಂತಗಳನ್ನು ಬಲಪಡಿಸಿಕೊಂಡು ಸಂಘಟನೆ ಮಾಡದಿದ್ದರೆ ಸದ್ಯಕ್ಕಿರುವ ಸ್ಥಾನವನ್ನೂ ಕಾಂಗ್ರೆಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇವತ್ತಿನ ದಿನದಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಬಳಿ ವ್ಯಥೆಪಡುವಷ್ಟು ಕಳೆದುಕೊಳ್ಳಲು ಏನೂ ಉಳಿದಿಲ್ಲ. ಉಳಿದಿರುವಷ್ಟನ್ನು ಉಳಿಸಿಕೊಂಡು ಇನ್ನಷ್ಟು ಪಡೆಯಲು, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುವುದು ಒಂದೇ ದಾರಿ. 

Tags: BJPCongress PartyHinduismHindutvarahulgandhiನರೇಂದ್ರ ಮೋದಿಬಿಜೆಪಿ
Previous Post

ಎಲ್ಲಾ ನಾಯಕರು ತನಿಖೆಗೆ ಸಹಕರಿಸುವ ಮೂಲಕ ಸತ್ಯಾ ಸತ್ಯತೆಯನ್ನು ಬಯಲಿಗೆಳೆಯುವುದಕ್ಕೆ ಸಹಾಯ ಮಾಡಿ: ಪ್ರತಾಪ ಸಿಂಹ

Next Post

ರಾಜ್ಯದ ಕೆಳಮನೆ-ಮೇಲ್ಮನೆ ಎರಡರಲ್ಲೂ ಮಹಿಳಾ ಶಾಸಕರ ಸಂಖ್ಯೆ ನಗಣ್ಯ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ರಾಜ್ಯದ ಕೆಳಮನೆ-ಮೇಲ್ಮನೆ ಎರಡರಲ್ಲೂ ಮಹಿಳಾ ಶಾಸಕರ ಸಂಖ್ಯೆ ನಗಣ್ಯ

ರಾಜ್ಯದ ಕೆಳಮನೆ-ಮೇಲ್ಮನೆ ಎರಡರಲ್ಲೂ ಮಹಿಳಾ ಶಾಸಕರ ಸಂಖ್ಯೆ ನಗಣ್ಯ

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada