ದುಬೈನಿಂದ (Dubai) ಅಕ್ರಮವಾಗಿ ಭಾರತಕ್ಕೆ (India) ಚಿನ್ನ ತರಲು (Gold smuggling) ಪ್ರಯತ್ನಿಸಿ ತಗಲಾಕೊಂಡ ನಟಿ ರನ್ಯಾ ರಾವ್ ಗೆ (Actress RANYA rao) ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ನಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು ಹಲವು ಮಾಹಿತಿಗಳು ಹೊರಬರುತ್ತಿವೆ.

ಈಗಾಗಲೇ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ DRI, CBI, CID ತನಿಖೆ ಕೈಗೊಂಡಿದ್ದು ಈ ಮಧ್ಯೆ ಈಗ ED ಗೆ ಕೂಡ ದೂರು ದಾಖಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆಗೆ ಕೋರಿ ಹಿಂದೂಪರ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಶಾಂತಿನಗರ ಇ.ಡಿ ಕಚೇರಿಗೆ ತೇಜಸ್ ಗೌಡ ದೂರು ನೀಡಿದ್ದು, ಈ ಪ್ರಕರಣ 2020 ರ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಹೋಲಿಕೆಯಿದ್ದು, ಈ ಕೇಸ್ ನಲ್ಲಿ ಯಾವುದೇ ರಾಜಕಾರಣಿ ಅಥವಾ ಇನ್ಯಾರದ್ದೇ ಪ್ರಭಾವ ಬೀರಬಹುದಾದ ಸಾಧ್ಯತೆ ಇರುವ ಕಾರಣ, ED ಈ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳಬೇಕು ಎಂದು ದೂರು ಸಲ್ಲಿಸಲಾಗಿದ್ದು, ED ಎಂಟ್ರಿ ಕೊಡುತ್ತಾ ಎಂಬ ಕುತೂಹಲ ಮನೆ ಮಾಡಿದೆ.