
ಉಡುಪಿಯ ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿಯ ಬ್ಲಡ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ರಕ್ತದಲ್ಲಿ ಮಾದಕ ವಸ್ತುಗಳು ಸೇರಿರುವ ಬಗ್ಗೆ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ಆದರೆ ಮೊದಲ ಆರೋಪಿ ಅಲ್ತಾಫ್ ಬ್ಲಡ್ ರಿಪೋರ್ಟ್ ನೆಗೆಟಿವ್ ಇದೆ. 2ನೇ ಆರೋಪಿ ರಿಚರ್ಡ್ ಬ್ಲಡ್ ರಿಪೋರ್ಟ್ ಕೂಡ ನೆಗೆಟಿವ್ ಇದೆ.
ಕಾರಿನಲ್ಲಿ ಪತ್ತೆಯಾದ ಡ್ರಗ್ಸ್ ಬಗ್ಗೆ ಅಲ್ತಾಫ್‌ನನ್ನು ವಿಚಾರಣೆ ಮಾಡಲಾಗ್ತಿದ್ದು, ಯುವತಿಗೆ ಡ್ರಗ್ಸ್ ನೀಡಿರುವ ಬಗ್ಗೆ ಪೊಲೀಸರ ಬಳಿ ಆರೋಪಿ ಅಲ್ತಾಫ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿ ಪತ್ತೆಯಾದ ಡ್ರಗ್ಸ್ ಪುಡಿಯನ್ನು FSLಗೆ ರವಾನಿಸಲಾಗಿದೆ. ಆದಷ್ಟು ಬೇಗ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಹೇಳಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳನ್ನ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯ ಪರ ಭೋವಿ ಸಮುದಾಯ ಬೆಂಬಲವಾಗಿ ನಿಂತಿದೆ.. ಸಂತ್ರಸ್ತ ಯುವತಿ ಭೋವಿ ಸಮುದಾಯಕ್ಕೆ ಸೇರಿದ್ದು, ನೊಂದ ಕುಟುಂಬದ ಪರವಾಗಿ ನಮ್ಮ ಸಂಘಟನೆ ಇರುತ್ತೆ ಎಂದಿದ್ದಾರೆ. ಈ ಮಧ್ಯೆ ಕಾರ್ಕಳದಲ್ಲಿ ಹಿಂದೂ ಸಂಘಟನೆಗಳು ಖಂಡನಾ ಸಭೆ ಹಾಗೂ ಪ್ರತಿಭಟನೆಗೆ ನಡೆಸಲು ಮುಂದಾಗಿದ್ದಾರೆ.
