ಹಿಮಾಚಲ:ಪ್ರದೇಶದಲ್ಲಿ ಮೇಘಸ್ಫೋಟವಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪಾರ್ವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವ ಭಯಾನಕ ವಿಡಿಯೊ ವೈರಲ್ ಆಗಿದೆ.ಕೇರಳದ ವಯನಾಡು ಭೂಕುಸಿತದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮ್ಲಾ, ಮಂಡಿ, ಕುಲು ಜಿಲ್ಲೆಯ ಕೆಲವೆಡೆ ಮೇಘಸ್ಫೋಟವಾಗಿದ್ದು, ಈ ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
Building Collapses In Himachal's Manikaran After Cloudburst
— Mehak Dongre (@Mehak_Dingre) August 1, 2024
Stay Alert ⚠️ #uttarkhand #Kedarnath#HimachalPradesh #Manikaran pic.twitter.com/SFJdCdpqR1
ಮಣಿಕರಣ್‌ನಲ್ಲಿ ಗುರುವಾರ ನದಿ ತೀರದ ಬಳಿ ಇದ್ದ ಕಟ್ಟಡವು ಇದ್ದಕ್ಕಿದ್ದಂತೆ ಬೃಹತ್ ಗಾತ್ರದ ಕಟ್ಟಡವೊಂದು ನೆಲಸಮವಾಗಿದ್ದು.ಕ್ಷಣಾರ್ಧಲ್ಲಿಯೇ ನದಿಯಲ್ಲಿ ನದಿಯಲ್ಲಿ ಕೊಚ್ಚಿಹೋಗಿದೆ,ಸದ್ಯ ಈ ವಿಡಿಯೋ ಅಲ್ಲದೇ ವೈರಲ್ ಆಗುತ್ತಿದ್ದು, ಎದೆ ಝಲ್ ಎನಿಸುವಂತಿದೆ.
Parvati River is flowing furiously near Gurudwara Manikaran Sahib, with water levels reaching their highest. Praying for everyone's safety.#HimachalPradesh pic.twitter.com/KbImDkBO3s
— Nikhil saini (@iNikhilsaini) August 1, 2024
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಅದರಂತೆಯೇ ಪಾರ್ವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗುರುದ್ವಾರ ಮಣಿಕರಣ್ ಸಾಹಿಬ್ ಸಂಪೂರ್ಣ ಜಲಾವೃತವಾಗಿದೆ.