ಬಾಗಲಕೋಟ ಜಿಲ್ಲೆಯಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ ತೀವ್ರಗೊಂಡಿದ್ದು, ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ಬಣಗಳ ಮಧ್ಯೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆದಿದೆ.
ವಿದ್ಯಾರ್ಥಿಗಳನ್ನೊಳಗೊಂಡ ಎರಡು ಕೋಮಿನ ಸಂಘಟನೆಯ ಯುವಕರ ಗುಂಪುಗಳ ನಡುವೆ ಘರ್ಷಣೆ ನಡೆದು, ಪೋಲಿಸರ ಲಾಠಿ ಚಾರ್ಜ್ ಮಾಡಿದ್ದಾರೆ. ಏಕಾಏಕಿ ಕಾಲೇಜ್ ಗೇಟ್ ಹೊಡೆದಾಕಿ ಕಲ್ಲು ತೂರಾಟ ನಡೆಸಿದ್ದಾರೆ. ಜನರನ್ನು ಚದುರಿಸಲು ಪೋಲಿಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೊಕೇಶ ಜಗಲಸಾರ್ ಭೇಟಿ ನೀಡಿ, ಪ್ರಕ್ಚುಬ್ಧ ವಾತವರಣವನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.
ಈ ಕುರಿತು ಎಸ್ಪಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯಿಸಿ, “ತಮ್ಮ ಬೇಡಿಕೆ ಇದ್ದರೆ ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲಾದರೆ ಭವಿಷ್ಯ ಹಾಳಾಗುತ್ತದೆ. ಅದನ್ನ ಗಮನದಲ್ಲಿ ಇಟ್ಟುಕೊಳಬೇಕು, ಪೋಷಕರು ಸಹ ತಿಳಿಹೇಳಬೇಕು. ಒಮ್ಮೆ ಕ್ರಿಮಿನಲ್ ಮೊಕದ್ದಮೆ ದಾಖಲಾದರೆ, ಆ ವ್ಯಕ್ತಿ ಗುಣ ನಡತೆ ಇಲಾಖೆಯಿಂದ ಯಾವತ್ತೂ ಕ್ಲಿಯರ್ ಆಗಲ್ಲ. ಇದನ್ನ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನ ಹಾಳು ಮಾಡಿಕೊಳ್ಳವಾರದು ಎಂದು ಕಿವಿಮಾತು ಹೇಳಿದ್ದಾರೆ.
ಸದ್ಯಕ್ಕೆ 144 ಜಾರಿ ಇಲ್ಲ
ಬೆಳವಣಿಗೆ ನೋಡಿಕೊಂಡು ಅವಶ್ಯಕತೆ ಇದ್ದಲ್ಲಿ ಮಾಡ್ತೀವಿ. ಒಮ್ಮೆ ಜಾರಿ ಮಾಡಿದ್ರೆ ಬೇರೆ ಬೇರೆ ಹೊಡೆತಗಳು ಬಿಳುತ್ತೆ. ಚಿಕ್ಕ ಘಟನೆಗಳಿಗೆ ನಾವೇ ದೊಡ್ಡ ಘಟನೆ ಅನ್ನೋ ರೀತಿ ಮಾಡಬಾರದು. ಇಂತಹ ಘಟನೆಗಳಿಗೆ ಸಂಚು ರೂಪಿಸುವ ಕಿಡಿಗೇಡಿಗಳಿಗೆ ಉತ್ತೇಜನ ಕೊಟ್ಟಂತೆ ಆಗುತ್ತೆ. ಮುಂದಿನ ಬೆಳವಣಿಗೆ ನೋಡಿಕೊಂಡು ಡಿಸಿ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.