
ಮಂಡ್ಯ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ( ಮನ್ಮುಲ್) ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೀತು. ಹೈವೋಲ್ಟೇಜ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ನಡೆದಿದೆ.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಯಾವ ಪಕ್ಷದ ಪರವಾದ ಫಲಿತಾಂಶ ಹೊರಬೀಳಲಿದೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. ಮಂಡ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಮನ್ಮುಲ್ ಆಗಿದ್ದು, ಇದರಲ್ಲಿ ಹಿಡಿತ ಸಾಧಿಸಿದವರು ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸಲಿದ್ದಾರೆ ಎನ್ನುವ ಪ್ರತೀತಿ ಇದೆ.
ತೀವ್ರ ಕುತೂಹಲ ಮೂಡಿಸಿದ ಮನ್ಮುಲ್ ನಿರ್ದೇಶಕರ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕ ಆಯ್ಕೆಗೆ ಚುನಾವಣೆ ನಡೆದಿದೆ. ಮನ್ಮುಲ್ ಗೆಲ್ಲಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗು ಬಿಜೆಪಿ ಮೈತ್ರಿಕೂಟ ಫೈಟ್ ಮಾಡಿದೆ. ಪಕ್ಷದ ಚಿಹ್ನೆಯಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಮತ್ತೆ ಮನ್ಮುಲ್ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಕಳೆದ ಬಾರಿ ಕೈ ತಪ್ಪಿರುವ ಮನ್ಮುಲ್ ವಶಕ್ಕೆ ಪಡೆಯಲು ಮೈತ್ರಿ ನಾಯಕರು ಕಸರತ್ತು ಮಾಡ್ತಿದ್ದಾರೆ. ಇವತ್ತು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮನ್ಮುಲ್ ಎಲೆಕ್ಷನ್ ನಡೆದಿದ್ದು, ಮತದಾನದ ಪ್ರಕ್ರಿಯೆ ಮುಗಿದ ಬಳಿಕ ಮತ ಎಣೆಕೆ ಕಾರ್ಯ ಆರಂಭವಾಗಿದೆ.

ಮನ್ಮುಲ್ ಚುನಾವಣೆಯಲ್ಲಿ ಮತದಾನ ಮುಕ್ತಾಯವಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಸಿದ್ದತೆ ನಡೆದಿದೆ. 12 ನಿರ್ದೇಶಕ ಸ್ಥಾನಗಳಿಗೆ ಭರ್ಜರಿಯಾಗಿ ನಡೆದಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. 12 ನಿರ್ದೇಶಕ ಸ್ಥಾನಗಳಿಗೆ 26 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಎಲ್ಲರ ಹಣೇ ಬರಹ ಕೆಲವೇ ಗಂಟೆಗಳಲ್ಲಿ ಬಯಲಾಗಲಿದೆ.













