ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವು ಕೊಲೆ ಕೇಸ್‌ಗೆ (Biklu shivu murder case) ಸಂಬಂಧಪಟ್ಟಂತೆ ಇಂದು ಶಾಸಕ ಬೈರತಿ ಬಸವರಾಜ್ (Byrati Basavaraj) ಪೊಲೀಸರ ಮುಂದೆ ತನಿಖೆಗೆ ಹಾಜರಾಗಬೇಕಿದೆ.ಮಾಜಿ ಸಚಿವ,ಶಾಸಕ ಬೈರತಿ ಬಸವರಾಜ್ ವಿಚಾರಣೆಗೆ ಹಗರಾಜಬೇಕು ಎಂದು ಹೈಕೋರ್ಟ್ (Highcourt) ಸೂಚನೆ ಕೊಟ್ಟಿದೆ.ಇನ್ನು ಆರೋಪಿಗಳ ಗ್ಯಾಂಗ್ ಒಂದಡೆ ಆದ್ರೆ, ಪೊಲೀಸರು ಕೂಡಾ ಈ ಕೇಸಲ್ಲಿ ಶಾಮೀಲಾಗಿರೋ ಬಗ್ಗೆಯೂ ಈಗ ತನಿಖೆ ನಡೆಸಲಾಗ್ತಿದೆ.

ಬಿಕ್ಲು ಶಿವು ಮರ್ಡರ್ ಗೆ ಪ್ರೀಪ್ಲಾನ್ ಮಾಡಿದ ದಿನದಿಂದಲೂ ಕೆಲ ಪೊಲೀಸರ ಸಂಪರ್ಕದಲ್ಲಿ ಆರೋಪಿಗಳು ಇದ್ದಾರೆ ಅನ್ನೋ ವಿಚಾರ ಗೊತ್ತಾಗಿದೆ.ಅಲ್ಲೆ ಹೊಸಕೋಟೆ ಮಾರ್ಗವಾಗಿ ತಮಿಳುನಾಡಿಗೆ ಎಸ್ಕೆಪ್ ಆಗ್ತಿದ್ದ ಆರೋಪಿಗಳು ರಾತ್ರೋ ರಾತ್ರಿ ಸರೆಂಡರ್ ಆಗಿದ್ದಾರೆ.

ಈ ಹಿಂದೆ ಬಿಕ್ಲ ಕೊಟ್ಟ ಕೇಸ್‌ನಲ್ಲೂ ಪೊಲೀಸ್ರು ಕ್ರಮ ಕೈಗೊಂಡಿಲ್ಲ.ಅವತ್ತೆ ಜಗ್ಗನ ಮೇಲೆ ಕ್ರಮ ಕೈಗೊಂಡಿದ್ರೆ ಮರ್ಡರ್ ಆಗ್ತಿರಲಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ಬಗ್ಗೆ ಯಾರೇ ಕೇಸ್‌ನಲ್ಲಿ ಸಹಾಯ ಮಾಡಿದ್ರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ.