ಬೆಂಗಳೂರು (Bengaluru): ರಾಜ್ಯದಲ್ಲಿ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಲ್ಲಿ 8 ಮತ್ತು 9ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ (Board Exam) ನಡೆಸಬೇಕಾ..? ಬೇಡ್ವಾ..? ಅನ್ನೋ ಬಗ್ಗೆ ವಿಚಾರಣೆ ನಡೆಸಿ ಹೈಕೋರ್ಟ್ (HighCourt) ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ.
5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರದ ಬಗ್ಗೆ ಹೈಕೋರ್ಟ್ನಲ್ಲಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಬೋರ್ಡ್ ಪರೀಕ್ಷೆ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು ರುಪ್ಸಾ ಸಂಸ್ಥೆ.
ಸರ್ಕಾರ (Government) ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಮಾಡಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿ ಏಕಸದಸ್ಯಪೀಠ ಆದೇಶ ಮಾಡಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗಿದ್ದ ಸರ್ಕಾರ, ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆ ತಂದು ಪರೀಕ್ಷೆ ಆರಂಭ ಮಾಡಿತ್ತು.
ದ್ವಿಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ (Supreme court) ರುಪ್ಸಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಅಷ್ಟರಲ್ಲಿ ಸರ್ಕಾರ 2 ವಿಷಯಗಳಿಗೆ ಪರೀಕ್ಷೆ ನಡೆಸಿತ್ತು. ರುಪ್ಸಾ ಸಂಸ್ಥೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದ್ವಿಸದಸ್ಯ ಪೀಠದ ತಡೆಯಾಜ್ಞೆ ನೀಡಿದ ಕೂಡಲೇ ಪರೀಕ್ಷೆ ನಡೆಸುವುದು ಸೂಕ್ತವಲ್ಲ, ವಿಚಾರಣೆ ಪೂರ್ಣ ಆಗುವ ತನಕ ಕಾಯುವುದಕ್ಕೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದೆ. ವಿಭಾಗೀಯ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಬೋರ್ಡ್ ಎಕ್ಸಾಂ ಸೂಕ್ತವಲ್ಲ ಎಂದು ಏಕಸದಸ್ಯ ಪೀಠ ಆದೇಶ ಮಾಡಿತ್ತು. ಇದೀಗ ಬೋರ್ಡ್ ಪರೀಕ್ಷೆ ಸೂಕ್ತವೋ..? ಅಲ್ಲವೋ ಅನ್ನೋ ಬಗ್ಗೆ ವಿಭಾಗೀಯ ಪೀಠ ನಿರ್ಧಾರ ಪ್ರಕಟ ಮಾಡಲಿದೆ. ಆ ತೀರ್ಪಿನ ಬಳಿಕ ಪರೀಕ್ಷೆ ಭವಿಷ್ಯ ನಿರ್ಧಾರ ಆಗಲಿದೆ.
#karnataka #bengaluru #boardexam #highcourt #government