ವೀರಶೈವ ಲಿಂಗಾಯತ ಸಭೆಯನ್ನು ಡಿಢೀರ್ ರದ್ದು..! ರಾಜ್ಯ ರಾಜಕಾರಣದಲ್ಲಿ ಸದ್ಯ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ (Nationl parties) ಬಣ ಬಡಿದಾಟ, ಭಿನ್ನಮತ,ಒಳಬೇಗುದಿ ನಿರಂತರವಾಗಿ ಮುಂದುವರೆದಿದ್ದು, ಬಿಜೆಪಿಯಲ್ಲಿ (Bjp) ಕೊಂಚ ಹೆಚ್ಚಾಗಿಯೇ ಗೊಂದಲವಿದೆ ಅಂದ್ರೆ ತಪ್ಪಿಲ್ಲ. 

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಬಣಕ್ಕೆ ಬಿಜೆಪಿ ಹೈಕಮಾಂಡ್ (Bjp highcommand) ಶಾಕ್ ಕೊಟ್ಟಿದೆ. ಹೊಸಪೇಟೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ (Renukacharya) ನೇತೃತ್ವದಲ್ಲಿ ನಡೆಯಬೇಕಿದ್ದ ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದ ಸಭೆಯನ್ನು ಡಿಢೀರ್ ರದ್ದುಗೊಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಲಿಂಗಾಯತ ಸಮುದಾಯದವರು ಅಲ್ಲವೇ ಅಲ್ಲ ಎಂಬ ಬಸನಗೌಡ ಪಾಟೀಲ್ ಯತ್ನಾಳ್ & ಬಣದ ಹೇಳಿಕೆಗೆ ಕೌಂಟರ್ ಕೊಡಲು ರಾಜ್ಯದ ವಿವಿಧ ಭಾಗಗಳಲ್ಲಿ ವೀರಶೈವ ಲಿಂಗಾಯತ ಸಭೆ ನಡೆಸಲು ರೇಣುಕಾಚಾರ್ಯ ಬಣ ನಿರ್ಧಾರ ಮಾಡಿತ್ತು. 

ಹೀಗಾಗಿ ಇಂದು ಹೊಸಪೇಟೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದೊಡ್ಡ ಸಭೆಗೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಹೈಕಮಾಂಡ್ ನಿಂದ ಸೂಚನೆ ಬಂದ ಬೆನ್ನಲ್ಲೇ ಈ ಸಭೆ ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ .ಈ ಮೂಲಕ ಹೈಕಮಾಂಡ್ ವಿಜಯೇಂದ್ರ ಹಾಗೂ ಅವರ ಬಣದ ಮುಖಂಡರಿಗೆ ಕಡಿವಾಣ ಹಾಕಿದೆ ಎಂಬ ಚರ್ಚೆ ಜೋರಾಗಿದೆ.
 
			
 
                                 
                                 
                                