ಬೆಂಗಳೂರಿನಲ್ಲಿ ಯಾವ ಏರಿಯಾ..? ಯಾವ ಸರ್ಕಲ್‌ಗೆ ಹೋದರೂ ಸಿಸಿಟಿವಿಗಳು ನಮ್ಮನ್ನು ಸೆರೆ ಹಿಡಿಯುತ್ತವೆ. ನಿರ್ಭಯ ಯೋಜನೆ ಅಡಿತಲ್ಲಿ ಏಳು ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನ ಸೇಫ್ ಸಿಟಿ ಪ್ರಾಜೆಕ್ಟ್‌ನಲ್ಲಿ ಅಳವಡಿಸಲಾಗಿದೆ.. ಇದೀಗ ಯಾವುದೇ ಸಿಸಿಟಿವಿ ದೃಶ್ಯವನ್ನು ಪೊಲೀಸ್ರು ಕ್ಷಣಾರ್ಧದಲ್ಲಿ ಪಡೆಯುವತ್ತ ಹೆಜ್ಜೆ ಹಾಕಿದ್ದಾರೆ.
ಈ ಹಿಂದೆ ಯಾವುದೇ ಅಪರಾಧ ನಡೆದರೂ ಸಿಸಿಟಿವಿ ದೃಶ್ಯದ ಅವಶ್ಯಕತೆ ಇದ್ದರೆ ಕಮಾಂಡ್ ಸೆಂಟರ್‌ಗೆ ಹೋಗಿ ದೃಶ್ಯಗಳನ್ನ ಪಡೆಯಲು ಮನವಿ ಸಲ್ಲಿಸಬೇಕಿತ್ತು.. ಆದರೀಗ ತ್ವರಿತವಾಗಿ ಮೊಬೈಲ್ ಆ್ಯಪ್ ‘ಆಪರೇಷನ್ ಪ್ಲಾಟ್ ಫಾರ್ಮ್’ ಮೂಲಕ ಸಿಸಿಟಿವಿ ದೃಶ್ಯ ಪಡೆಯುವ ವ್ಯವಸ್ಥೆ ಜಾರಿ ಆಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಹಿರಿಯ ಅಧಿಕಾರಿಗಳು ಬಳಕೆ ಮಾಡ್ತಿದ್ದು, ಪೊಲೀಸ್ ಇಲಾಖೆಗೆ ಸದ್ಬಳಕೆ ಆಗುವಂತೆ ಎಲ್ಲಾ ಸಿಬ್ಬಂದಿಗೂ ವಿಸ್ತರಣೆ ಮಾಡುವ ಚಿಂತನೆ ನಡೆದಿದೆ.
‘ಆಪರೇಷನ್ ಪ್ಲಾಟ್ ಫಾರ್ಮ್’ ಆ್ಯಪ್ ಮೂಲಕ ತನಿಖಾಧಿಕಾರಿ ಅಥವಾ ಪೊಲೀಸ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ತನಿಖೆಗೆ ಅಗತ್ಯವಿರುವ ಸ್ಥಳದ ಕ್ಯಾಮೆರಾ ನಂಬರ್ ನೀಡಬಹುದು.. ನಿಗದಿತ ಸಮಯದ ಹದಿನೈದು ನಿಮಿಷದ ದೃಶ್ಯಕ್ಕಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮನವಿ ಸಲ್ಲಿಸಬಹುದಾಗಿದೆ.. ಮನವಿ ಸಲ್ಲಿಸಿದ ಒಂದು ಗಂಟೆಯೊಳಗೆ ಕಮಾಂಡ್ ಸೆಂಟರ್‌ನಿಂದ ಅವಶ್ಯಕ ಸಿಸಿಟಿವಿ ದೃಶ್ಯಗಳು ಆ್ಯಪ್ ಮೂಲಕವೇ ರವಾನೆ ಆಗುತ್ತವೆ..
ಮೊಬೈಲ್0 ಆಪ್ ಮೂಲಕ ತನ್ನ ವ್ಯಾಪ್ತಿಯ ಸಿಸಿಟಿವಿ ದೃಶ್ಯಗಳನ್ನ ನೋಡಲು ಸಹಕಾರಿಯಾಗುತ್ತದೆ.. ಆ್ಯಂಡ್ರಾಯ್ಡ್ ಹಾಗು ಐಓಎಸ್ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ.. ಎಸಿಪಿ ಹಂತದ ಅಧಿಕಾರಿಗಳು ಈಗಾಗಲೇ ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಆ್ಯಪ್ ಬಳಕೆ ವಿಸ್ತರಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವುದೇ ಗಲಾಟೆ ಅಥವಾ ಅಪಘಾತ, ಕಳ್ಳತನ ನಡೆದಾಗಲ ಕೂಡಲೇ ಪೊಲೀಸನ್ನು ಸಂಪರ್ಕಿಸಿದ್ರೆ, ಪೊಲೀಸ್ರು ಆರೋಪಿಗಳ ದೃಶ್ಯವನ್ನು ಕೆಲವೇ ನಿಮಿಷಗಳಲ್ಲಿ ಪಡೆದುಕೊಳ್ಳಲು ಅನುಕೂಲ ಆಗುತ್ತದೆ. ಇದು ಅಪರಾಧ ಪ್ರಕರಣ ನಿಯಂತ್ರಣಕ್ಕೆ ಸಹಕಾರಿ ಆಗುವ ಲೆಕ್ಕಾಚಾರ ಆರಕ್ಷರದ್ದಾಗಿದೆ.
ಈಗಾಗಲೇ ಬೆಂಗಳೂರಿನ ಜನರು ಸಿಸಿಟಿವಿ ಕಣ್ಗಾವಲಿನಲ್ಲೇ ಬದುಕುತ್ತಿದ್ದಾರೆ. ಆದರೂ ಜನರಲ್ಲಿ ಭಯಭೀತಿ ಇಲ್ಲದೆ ನಡೆದುಕೊಳ್ತಿರೋದು ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಆಪರೇಷನ್ ಪ್ಲಾಟ್ ಫಾರ್ಮ್ ಆ್ಯಪ್ ಮೂಲಕ ವಿಡಿಯೋ ಸಿಕ್ಕರೆ ಪೊಲೀಸ್ರ ತನಿಖೆಗೆ ಅನುಕೂಲ ಆಗಬಹುದು. ಆದಷ್ಟು ಬೇಗ ವಿಡಿಯೋ ಸಿಕ್ಕರೆ ಸೆರೆ ಹಿಡಿಯುವುದಕ್ಕೆ ಅನುಕೂಲ ಆಗಬಹುದು. ಎಷ್ಟೊಂದು ಪರಿಣಾಮಕಾರಿ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.