ಬೆಂಗಳೂರಲ್ಲಿ ಈಗಾಗಲೇ ಸಂಜೆಯಿಂದ ಆಗಿದ್ದಾಂಗೆ ಭಾರೀ ಮಳೆ ಆಗಿದೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ, ಇಂದು ರಾತ್ರಿ ಕೂಡ ಬೆಂಗಳೂರಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ.
![](https://pratidhvani.com/wp-content/uploads/2024/05/WhatsApp-Image-2024-05-06-at-11.12.21-PM.jpeg)
ಮಳೆ ಜೊತೆಗೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಅಪ್ಪಳಿಸುವ ಸಾಧ್ಯತೆಯೂ ಇದೆ. ಆಂಧ್ರಪ್ರದೇಶ ಕಡಲ ತೀರದಲ್ಲಿ ಭಾರೀ ಮೋಡ ಕವಿದ ವಾತಾವರಣ ಇದ್ದು, ಬಿರುಗಾಳಿಗೆ ಮೋಡಗಳು ಕರ್ನಾಟಕ, ತಮಿಳುನಾಡು ಕಡೆಗೆ ಚಲಿಸಲಿವೆ ಎನ್ನಲಾಗಿದೆ.
![](https://pratidhvani.com/wp-content/uploads/2024/05/WhatsApp-Image-2024-05-06-at-11.12.22-PM.jpeg)
ಆಂಧ್ರಪ್ರದೇಶದ ಬಹುಭಾಗ ಮೋಡಗಳು ಕರ್ನಾಟಕಕ್ಕೆ ಮಳೆ ತರುವ ಸಾಧ್ಯತೆ ಇದೆ. ಆಂಧ್ರದ ಪರಿಣಾಮ ಬೆಂಗಳೂರಲ್ಲೂ ಎಫೆಕ್ಟ್ ಆಗುವ ಸಾಧ್ಯತೆ ಇದೆ. ಬೆಂಗಳೂರು ಹಾಗು ತಮಿಳುನಾಡು ಕಡೆಗೆ ಚಲಿಸುವ ಮಾರುತಗಳು ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ತರುವ ಮುನ್ಸೂಚನೆ ಸಿಕ್ಕಿದೆ.