ಗರ್ಭಿಣಿಯಾಗಿದ್ದಾಗ ತಮ್ಮ ಬಗ್ಗೆ ತಾವು ಕಾಳಜಿ ವಹಿಸುವುದು ಅತ್ಯಂತ ಅವಶ್ಯಕ.ಹಾಗೂ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ, ಆರೋಗ್ಯದಲ್ಲಿ ಏರುಪೇರಾಗುವುದು ಸಹಜ..ಇನ್ನು ಇದೆಲ್ಲದರ ಜೊತೆಗೆ ವಾಕ್ ಮಾಡುವುದು ಕೂಡ ಅತ್ಯವಶ್ಯಕ.

ಗರ್ಭವಸ್ಥೆಯಲ್ಲಿ ಮೊದಲ ಮೂರು ತಿಂಗಳು ಅತ್ಯಂತ ಜಾಗರೂಕರರಾಗಿರಬೇಕು, ಕಾರಣ ಮೊದಲ ಮೂರು ತಿಂಗಳಲ್ಲಿ ಅಬ್ಬರ್ಶನ್ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ. ಬಾರದ ವಸ್ತುಗಳನ್ನು ಎತ್ತಬಾರದು,ಅತಿಯಾಗಿ ನಡೆದಾಡಬಾರದು,ಟ್ರಾವೆಲ್ ಮಾಡಬಾರದು.

ನಂತ್ರ ಸೆಕೆಂಡ್ ಟ್ರೈಮಿಸ್ಟರ್ ವೈದರು ಸೂಚಿಸುವ ಪ್ರಕಾರ ದಿನಕ್ಕೆ ೩೦ ನಿಮಿಷಗಳ ವಾಕ್ ತುಂಬಾನೆ ಮುಖ್ಯ. ವಾಕ್ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.ಹಾಗೂ ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನವಾಗಿರುತ್ತದೆ ಮತ್ತು ನಡೆಯುವ ವೇಗವು ಮಧ್ಯಮ, ನಿಯಮಿತ ಮತ್ತು ಲಯಬದ್ಧವಾಗಿರಬೇಕು. ನೀವು ಉಸಿರಾಟದ ತೊಂದರೆ, ಆಯಾಸ ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ, ನಿಮ್ಮ ವೇಗವನ್ನು ಕಡಿಮೆ ಮಾಡಿ ಅಥವಾ ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.

ಇನ್ನು ೮ ತಿಂಗಳ ನಂತರ ದಿನಕ್ಕೆ ೧ ಗಂಟೆಗಳ ಕಾಲ ವಾಕ್ ಮಾಡುವುದು ತುಂಬಾನೆ ಮುಖ್ಯ ಇದು ಡೆಲಿವರಿಗೆ ಈಜಿ ಆಗುತ್ತದೆ. ಇದೆಲ್ಲದಕ್ಕಿಂತ ಮುಂಚೆ ನಿಮ್ಮ ವೈದ್ಯರನ್ನು ಕನ್ಸ್ಲಟ್ ಮಾಡುವುದು ಒಳಿತು.