ಬೇಸಿಗೆಯಲ್ಲಿ ತರಕಾರಿಗಳನ್ನ ಹೆಚ್ಚು ತಿನ್ನೋದ್ರಿಂದ ದೇಹದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು..ಅದರಲ್ಲೂ ಕೂಡ ಸೊಪ್ಪುಗಳನ್ನು ನಾವು ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುತ್ತದೆ ಸೋ ಯಾವೆಲ್ಲ ಸೊಪ್ಪುನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ಇಲ್ಲಿ ನೋಡ್ತಾ ಹೋಗೋಣ..
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ,ಕಬ್ಬಿನಾಂಶ ಹೆಚ್ಚಿದ..ಇದು ನಮ್ಮ ದೇಹದ ಚಯಾಪಚಯವನ್ನು ಉತ್ತಮಗೊಳಿಸುತ್ತೆ ..ಜೊತೆಗೆ ತೂಕ ಇಳಿಸುವವರಿಗೆ ಇದು ತುಂಬಾನೇ ಒಳ್ಳೆಯದು , ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ, ದೇಹದಲ್ಲಿನ ರಕ್ತದ ಸಂಚಲನಕ್ಕೆ ಉತ್ತಮ,ಬ್ಲಡ್ ಬ್ಲಾಕ್ ಆಗದಂತೆ ಕೂಡ ಇದು ತಡೆಗಟ್ಟತ್ತೆ. ಇನ್ನು ಡಯಾಬಿಟೀಸ್ ಇದ್ದವರು ಪಾಲಕ್ ಸೊಪ್ಪನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ದೇಹದ ಬ್ಲಡ್ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡೋದಕ್ಕೆ ಸಹಕಾರಿ.. ಪಾಲಕ್ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶವು ಹೆಚ್ಚಿರುತ್ತದೆ ಹಾಗಾಗಿ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ ಚರ್ಮದ ಕಾಂತಿಯನ್ನ ಹೆಚ್ಚಿಸುತ್ತದೆ ಜೊತೆಗೆ ಏಜಿಂಗ್ ಪ್ರಾಬ್ಲಮ್ ಅನ್ನ ಕೂಡ ನಿವಾರಿಸುತ್ತದೆ..
ಮೆಂತ್ಯ ಸೊಪ್ಪು
ಮೆಂತ್ಯ ಸೊಪ್ಪನ್ನ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಾಗುತ್ತೆ ಹಾಗೂ ಮೆಂತ್ಯ ತಂಪು ಅಂಶವನ್ನು ಹೊಂದಿದ್ದು ಬೇಸಿಗೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ..ಇದರ ಜೊತೆಗೆ ಹೊಟ್ಟೆ ನೋವಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೇ. ಮೆಂತ್ಯ ಸೊಪ್ಪಿನಲ್ಲಿ ಸಾಕಷ್ಟು ಔಷಧಿ ಅಂಶಗಳಿದ್ದು ಕೊಲೆಸ್ಟ್ರಾಲ್ ಅನ್ನ ಕಮ್ಮಿ ಮಾಡೋದಿಕ್ಕೆ ಸಹಾಯಕಾರಿ ಹಾಗೂ ಡಯಾಬಿಟಿಸ್ ಪೇಷಂಟ್ ಗೆ ಮೆಂತೆ ಉತ್ತಮ ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ.. ಚರ್ಮದ ಆರೋಗ್ಯಕ್ಕೂ ಮೆಂತ್ಯ ತುಂಬಾನೇ ಒಳ್ಳೆಯದು ಚರ್ಮದ ಹೊಳಪನ್ನಾ ಹೆಚ್ಚಿಸುವುದರ ಜೊತೆಗೆ ಯಾವುದೇ ಒಂದು ಕಲೆ ಇದ್ದರೂ ಕೂಡ ನಿವಾರಣೆ ಆಗುತ್ತದೆ..
ನುಗ್ಗಿ ಸೊಪ್ಪು
ದೇಹದ ಆರೋಗ್ಯಕ್ಕೆ ಉತ್ತಮ ನುಗ್ಗೆ ಸೊಪ್ಪನ್ನ ತಿನ್ನೋದ್ರಿಂದ ದೇಹದ ಉಷ್ಣತೆ ಹೆಚ್ಚಾಗುತ್ತೆ ಹಾಗೂ ಇದರಲ್ಲಿ ಕ್ಯಾಲ್ಸಿಯಂ ಕಬ್ಬಿನಾಂಶ ಪ್ರೋಟೀನ್ ಪೋಟಂಶಿಯಂ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಹಾಗೂ ಸಾಕಷ್ಟು ಪೋಷಕಾಂಶಗಳ ಅಂಶವಿರುತ್ತದೆ .. ನುಗ್ಗೆ ಸೊಪ್ಪು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಯಾವುದೇ ಒಂದು ಅಲರ್ಜಿ ಆದ್ರೂ ಕೂಡ ನುಗ್ಗೆ ಸೊಪ್ಪನ್ನ ಅರೆದು ಹಚ್ಚಿದರೆ ಬೇಗನೆ ಅಲರ್ಜಿ ಗುಳ್ಳೆಗಳು ಮಾಯವಾಗುತ್ತದೆ.. ಬಿಪಿಗೂ ಕೂಡ ತುಂಬಾನೇ ಒಳ್ಳೆಯದು ಬ್ಲಡ್ ಪ್ರೆಷರ್ ಅನ್ನ ಮ್ಯಾನೇಜ್ ಮಾಡುವಲ್ಲಿ ನುಗ್ಗೆಸೊಪ್ಪು ಉತ್ತಮ..
ಇಷ್ಟೇ ಅಲ್ಲದೆ ಇನ್ನು ಸಾಕಷ್ಟು ರೀತಿಯ ಸೊಪ್ಪುಗಳಿದ್ದು ಪ್ರತಿಯೊಂದು ಕೂಡ ಅದರದ್ದೇ ವೈಶಿಷ್ಟ್ಯತೆಯನ್ನು ಹೊಂದಿದೆ..ಬೇಸಿಗೆಯಲ್ಲಿ ಹಣ್ಣು ತರಕಾರಿಗಳ ಜೊತೆಗೆ ಸೊಪ್ಪನ್ನ ಹೆಚ್ಚಿನ ಮಟ್ಟದಲ್ಲಿ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು..