
ಥೈಲ್ಯಾಂಡ್:ಹಣ ಸಂಪಾದಿಸುವ ಆಸೆಯಿಂದ ಅಡ್ಡ ದಾರಿ ಹಿಡಿದ ಹುಮನಾಯ್ಡ್ ವೈದ್ಯರೊಬ್ಬರು ಮುಖವಾಡ ಬಯಲಾಗಿದೆ.. ಸುಮಾರು 20 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ನಕಲಿ ವೈದ್ಯನ ಬಂಡವಾಳ ಬಯಲಾಗಿದೆ. ಆತ ಓದಿದ್ದು 9ನೇ ತರಗತಿವರೆಗೆ ಮಾತ್ರ, ಆದರೆ ವೈದ್ಯರೆಂದು ಹೇಳಿಕೊಂಡು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ..

ಸೆಂಟ್ರಲ್ ಥೈಲ್ಯಾಂಡ್‌ನ(Thailand) ಸಮುತ್ ಸಖೋನ್ (Sakhon)ನಗರದ ಕಿಟ್ಟಿಕಾರ್ನ್ ಸಾಂಗ್ರಿ (Kittycorn sangri)(36) ತನ್ನದೇ ಆದ ಕ್ಲಿನಿಕ್ ಸ್ಥಾಪಿಸಿ ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೆಲಸವನ್ನು ಪ್ರಚಾರ ಮಾಡುತ್ತಿದ್ದ. ಆರಂಭದಲ್ಲಿ ಸಂಗ್ರಿ ಮಾಯಾ ಮಾತುಗಳನ್ನು ನಂಬಿದ ರೋಗಿಗಳು ಅವನ ಆಸ್ಪತ್ರೆಗೆ ಬರುತ್ತಿದ್ದರು.
ಆದರೆ ಇತ್ತೀಚೆಗೆ ಈತನಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಗಂಭೀರ ಸಿಲಿಕಾನ್ ಸೋಂಕು ಕಾಣಿಸಿಕೊಂಡಿತು. ವೈದ್ಯರ ವರ್ತನೆಯಿಂದ ಅನುಮಾನಗೊಂಡ ರೋಗಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕುಟುಕು ಕಾರ್ಯಾಚರಣೆಯ ಮೂಲಕ ನಕಲಿ ಶಸ್ತ್ರಚಿಕಿತ್ಸಕನ ಬಂಡಾರ ಭೇದಿಸಿದ್ದಾರೆ.
ನಕಲಿ ವೈದ್ಯನ ( fake doctor)ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.ತನಿಖೆಯ ಸಮಯದಲ್ಲಿ ಈತ, ವೈದ್ಯಕೀಯ ಅಧ್ಯಯನ ಮಾಡಿಲ್ಲ, ಪರವಾನಗಿಯನ್ನು ಪಡೆದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.. ಯಾವುದೇ ವೈದ್ಯಕೀಯ ಹಿನ್ನೆಲೆ ಅಥವಾ ಪರವಾನಗಿ ಇಲ್ಲದೇ ಪ್ರತಿ ತಿಂಗಳು ಕನಿಷ್ಠ ಎರಡು ಅಥವಾ ಮೂರು ಜನರಿಗೆ ಆಪರೇಷನ್ ಮಾಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
14ನೇ ವಯಸ್ಸಿನಲ್ಲಿ ಇಂಪ್ಲಾಂಟ್ ಮಾಡುವುದನ್ನು ಕಲಿತಿದ್ದ, ಅಂದಿನಿಂದ ಅನೇಕರಿಗೆ ಆಪರೇಷನ್ ಮಾಡಿದ್ದಾರನೆ.. ಪ್ರತಿ ಆಪರೇಷನ್ ಗೆ ರೂ.13 ಸಾವಿರದಿಂದ ರೂ.50 ಸಾವಿರ ವಸೂಲಿ ಮಾಡುತ್ತಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸಧ್ಯ ನಕಲಿ ವೈದ್ಯನ ಬಂಧನವಾಗಿದೆ..