ಇಂಧನ ದರ ಏರಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡಿ ಆಯ್ತು.ಸ್ಟಾಂಪ್ ಡ್ಯೂಟಿಯಲ್ಲಿ ಹೆಚ್ಚಳ ಮಾಡಿ ಆಯ್ತು.ಐದು ಗ್ಯಾರಂಟಿಗಾಗಿ ಹೆಚ್ಚಳ ಮಾಡಿದ್ದಾರೆ.ಎರಡು ಸಾವಿರ ಕೊಡಬೇಕು.ಸರ್ಕಾರದ ಬಳಿ ದುಡ್ಡಿಲ್ಲ.ಇದು ಜನ ಸಾಮಾನ್ಯರ ವಿರೋಧಿ ಸರ್ಕಾರ.ಟ್ರಾನ್ಸ್ ಪೋರ್ಟ್ ಮೇಲೆ ಹೊಡೆತ ಬೀಳುತ್ತೆ.ರೈತರಿಗೆ ತೊಂದರೆ ಅಗುತ್ತೆ.ಬಡವರ ಕಿಸೆಗೆ ಕೈ ಹಾಕುತ್ತಿದ್ದಾರೆ.ಕೇಂದ್ರದ ಬಗ್ಗೆ ಈ ಹಿಂದೆ ಮಾತನಾಡಿದ್ದರು.ಜನರೇ ತೀರ್ಮಾನ ಮಾಡುತ್ತಾರೆ.
ಜನರ ತೆರಿಗೆ ಹಣವನ್ನ ದುರ್ಬಳಕೆ ಮಾಡುವುದನ್ನ ತಡೆಗಟ್ಟದೇ ಈ ಸರ್ಕಾರ ಕುಳಿತಿದೆ.
ರಾಜ್ಯದ ಜನತೆ ದುಡ್ಡು ಯಾವ ಯಾವ ಇಲಾಖೆಯಲ್ಲಿ ಎಷ್ಟು ದೋಚಿದ್ದಾರೋ.ಎಷ್ಟು ದಿನ ಈ ಆಟ ಆಡುತ್ತೀರೋ.ಇನ್ನು ಹದಿನೈದು ದಿನ ಆದ ಮೇಲೆ ಏನು ಆಗುತ್ತೋ.ಹಣ ವಾಪಸ್ ಬರುತ್ತೋ ಇಲ್ವೋ ಕಾದು ನೋಡೋಣ ಅಂತ HDK ಹೇಳಿದ್ದಾರೆ.