ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುತ್ತುದ್ದಂತೆ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ತೆಲಂಗಾಣ ರಾಜ್ಯ ನಾಯಕರು ಮಾಡಿದ ಪ್ರಚಾರದಿಂದ ಗೆದ್ದಿಲ್ಲ, ಕರ್ನಾಟಕದಿಂದ ಹೋದ ಹಣದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, 2 ರಾಜ್ಯದಲ್ಲಿ ಕಾಂಗ್ರೆಸ್, 2 ರಾಜ್ಯದಲ್ಲಿ ಬಿಜೆಪಿ ಎಂದು ಏಕ್ಸಿಟ್ ಪೋಲ್ ಹೇಳಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಶಕ್ತಿ ಇಲ್ಲವೇ ಇಲ್ಲ ಎಂದರು. ಆದರೆ ತೆಲಂಗಾಣದಲ್ಲಿ ಈಗ ಕಾಂಗ್ರೆಸ್ ಗೆದ್ದಿದೆ ಅದಕ್ಕೆ ರಾಜ್ಯದ ನಾಯಕರು ಮತ್ತು ಅಲ್ಲಿನ ನಾಯಕರು ಪ್ರಚಾರ ಕಾರಣ ಅಲ್ಲ. ಬದಲಾಗಿ ಇಲ್ಲಿನ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಆರೋಪಿಸಿದ್ದಾರೆ.

ಐದಕ್ಕೆ ಐದು ರಾಜ್ಯಗಳನ್ನ ಆವರಿಸಿಕೊಂಡು ಬಿಡ್ತೀವಿ ಅನ್ನೊ ಕಾಂಗ್ರೆಸ್ ನಾಯಕರ ಮಾತಿಗೆ ಜನ ತೀರ್ಮಾನ ಮಾಡಿದ್ದಾರೆ. ಆದರೆ ತೆಲಂಗಾಣದಲ್ಲಿ ಇವರ ಸಮಾಜಸೇವೆ, ಅಭಿವೃದ್ಧಿಗೆ ಪೂರಕವಾದ ಜನ ಸೇವೆ ನೋಡಿ ಜನ ತೆಲಂಗಾಣದಲ್ಲಿ ಜನ ತೀರ್ಮಾನ ಮಾಡಿದ್ದಲ್ಲ ಎಂದು ಟೀಕಿಸಿದ್ದಾರೆ.