ಚಿಕ್ಕಮಗಳೂರು : ಜೆಡಿಎಸ್ನಿಂದ ಪಕ್ಷಾಂತರಗೊಂಡು ಕಾಂಗ್ರೆಸ್ಗೆ ಸೇರಿ ಅಲ್ಲಿ ಟಿಕೆಟ್ ವಂಚಿತರಾಗಿರುವ ವೈ.ಎಸ್.ವಿ ದತ್ತಾ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಚಿಕ್ಕಮಗಳೂರಿನ ಕಡೂರಿನಲ್ಲಿ ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ನನಗೆ ವೈಎಸ್ವಿ ದತ್ತಾ ಎಂದರೆ ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ವೈಎಸ್ವಿ ದತ್ತಾ ಎಂದರೆ ಯಾರು..? ಅವರು ತುಂಬಾ ದೊಡ್ಡ ಮನುಷ್ಯರು. ನಮ್ಮದು ಸಣ್ಣ ಪಕ್ಷ . ನಮ್ಮ ಪಕ್ಷಕ್ಕೆಲ್ಲ ಅವರು ಏಕೆ ಬರ್ತಾರೆ..? ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡವರು. ನಮ್ಮ ಸಣ್ಣ ಪಕ್ಷದಿಂದ ಅವರಿಗೆ ಏನು ಸಿಗುತ್ತೆ ಎಂದು ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಡೂರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ವೈಎಸ್ವಿ ದತ್ತಾ ಸೋಲನ್ನು ಕಂಡಿದ್ದರು. ಇದಾದ ಬಳಿಕ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ದತ್ತಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಡೂರು ಕ್ಷೇತ್ರದ ಟಿಕೆಟ್ನ್ನು ದತ್ತಾಗೆ ಕೊಡದೇ ಆನಂದ್ರಿಗೆ ನೀಡಲಾಗಿದ್ದು ಟಿಕೆಟ್ಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ದತ್ತಾ ಇದೀಗ ಅತಂತ್ರರಾಗಿದ್ದಾರೆ.