ನಿರಂತರ ಚುನಾವಣಾ ಚಟುವಟಿಕೆಗಳಿಂದ ಅನಾರೋಗ್ಯಕ್ಕೀಡಾಗಿರುವ ಮಾಜಿ ಸಿಎಂ ಹೆಚ್ಡಿಕೆ ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ, ಆದರೆ ಚಿಕಿತ್ಸೆಯ ನಡುವೆಯೂ ಹೆಚ್ಡಿಕೆ ಆಸ್ಪತ್ರೆ ಬೆಡ್ನಲ್ಲಿಯೇ ಕುಳಿತು ಪಕ್ಷ ಸಂಬಂಧಿ ಚಟುವಟಿಕೆಗಳನ್ನು ಮಾಡುತ್ತಿದ್ದು ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್ ಸೇರಿರುವ ನಾಯಕರು ಇರುವ ಕ್ಷೇತ್ರಗಳನ್ನು ಜೆಡಿಎಸ್ ಟಾರ್ಗೆಟ್ ಮಾಡಿದ್ದು ಈ ಕ್ಷೇತ್ರಗಳಲ್ಲಿ ತಮ್ಮ ಪ್ರಚಾರ ಯಾವ ರೀತಿ ಇರಬೇಕೆಂದು ಸ್ಕೆಚ್ ಹಾಕುತ್ತಿದ್ದಾರೆ.
ಯಾವ್ಯಾವ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಹೇಗೆ ಇರಬೇಕು…? ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿ ಹಾಕಬಹುದು..? ಈ ಎಲ್ಲದರ ಬಗ್ಗೆ ಕುಮಾರಸ್ವಾಮಿ ಪ್ಲಾನಿಂಗ್ ನಡೆಸಿದ್ದಾರೆ.






