ಚನ್ನಪಟ್ಟಣ ಉಪಚುನಾವಣೆಯ (Channapattana Bl election) ಅಖಾಡ ರಂಗೇರಿದ್ದು, ಮೈತ್ರಿ ಟಿಕೆಟ್ ಗೊಂದಲ ಮಾತ್ರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಈ ಬಗ್ಗೆ ಎರಡೆರಡು ಮೀಟಿಂಗ್ ಮಾಡಿದ್ರೂ ಇದುವರೆಗೂ ಟಿಕೆಟ್ ಗೊಂದಲ ಮಾತ್ರ ಬಗೆಹರಿದಿಲ್ಲ.
ಹೀಗಾಗಿ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಜೆಡಿಎಸ್‌ನಿಂದ (Jds) ಮತ್ತೊಂದು ಸುತ್ತಿನ ಸಭೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD kumaraswamy) ಜೆಡಿಎಸ್‌ನ ಹಾಲಿ,ಮಾಜಿ ಶಾಸಕರರೊಂದಿಗೆ ಚರ್ಚಿಸಲಿದ್ದಾರೆ.
ಈ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ದೆಹಲಿಗೆ (Delhi) ಹೋಗಿ ಹೈಕಮಾಂಡ್ (Highcommand) ನಾಯಕರ ಜೊತೆ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ. ಹಾಗಾಗಿ ಹೆಚ್‌ಡಿಕೆ ನಡೆ ತೀವ್ರ ಕುತೂಹಲ ಮೂಡಿಸಿದೆ ಅಂತಾ ಹೇಳಲಾಗ್ತಿದೆ.