• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ತಿಕ್ಕಾಟದಲ್ಲಿ ಚರ್ಚೆ ಇಲ್ಲದೆ ಬಿಲ್ ಪಾಸ್: ಮಾಜಿ ಪ್ರಧಾನಿ ದೇವೇಗೌಡ ಬೇಸರ

ಪ್ರತಿಧ್ವನಿ by ಪ್ರತಿಧ್ವನಿ
August 22, 2021
in ಕರ್ನಾಟಕ
0
ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ತಿಕ್ಕಾಟದಲ್ಲಿ ಚರ್ಚೆ ಇಲ್ಲದೆ ಬಿಲ್ ಪಾಸ್: ಮಾಜಿ ಪ್ರಧಾನಿ ದೇವೇಗೌಡ ಬೇಸರ
Share on WhatsAppShare on FacebookShare on Telegram

ಚಳಿಗಾಲದಲ್ಲಿ ಅಧಿವೇಶನದಲ್ಲಿ ಭಾಗವಹಿಸಿದ್ದೆ.
ಮಾತಾಡಲು ಅವಕಾಶ ಸಿಗಬಹುದು ಅಂತ ಕೊನೆಯವರೆಗೂ ಕಾದೆ ಆದರೆ ದುರಂತ ಅಧಿವೇಶನ ನಡೆಯಲು ಬಿಡಲಿಲ್ಲ ಆಳುವ ಪಕ್ಷ ಮತ್ತು ವಿಪಕ್ಷಗಳ ನಡುವಿನ ತಿಕ್ಕಾಟಕ್ಕೆ ಸದನ ಹೀಗೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಅವರ ಸುದ್ದಿಘೋಷ್ಠಿಯಲ್ಲಿ ಮಾತಾಡಿದ ಅವರು,ಗಲಾಟೆ ಇದ್ದರು ಕೇಂದ್ರ ಸರ್ಕಾರ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಿದೆ ಸಂವಿಧಾನ ತಿದ್ದುಪಡಿ ಬಿಲ್ ಗೆ ಮಾತ್ರ 3 ಗಂಟೆ ಚರ್ಚೆಗೆ ನಿಗಧಿ ಮಾಡಿದ್ರು ನಾನು ಅದರಲ್ಲು ಭಾಗವಹಿಸಿದೆ. ಅದನ್ನು ಬಿಟ್ಟು ಯಾವುದರಲ್ಲೂ ನನಗೆ ಮಾತಾಡಲು ಅವಕಾಶವೇ ಸಿಗಲಿಲ್ಲ ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಾಯಿತು ಎಂದಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿಗೆ ಶಕ್ತಿ ಇದೆ.
ಯಾವುದೇ ಕಾರ್ಯಕಲಾಪ ಇಲ್ಲದೆ ಕಲಾಪ ಮುಕ್ತಾಯ ಆಯ್ತು ನಾನು ವಿಪಕ್ಷದ ನಾಯಕರಿಗೆ ಕರೆದು ಮಾತಾಡಿದೆ. ಪೆಟ್ರೊಲ್ ಡಿಸೇಲ್ ಸೇರಿದಂತೆ ಯಾವುದೇ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ನಾವು ಮಾತಾನಾಡಲು ಆಗಲಿಲ್ಲ ನನ್ನ ಪ್ರಕಾರದಲ್ಲಿ ಈ ಸಲದ ಕಲಾಪ ವ್ಯರ್ಥವಾಗಿದೆ ಎಂದಿದ್ದಾರೆ.

ಈ ತರಹದ ರಾಜ್ಯಸಭೆಯ ನಡಾವಳಿಗಳನ್ನ ಇತಿಹಾಸದಲ್ಲಿ ನಾನು ನೋಡಿರಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ನಮ್ಮ ವಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ನನಗೆ ಅಸಮಾಧಾನ ಇದೆ. ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು ನಾನು ನೋಡಿರಲಿಲ್ಲ ಸಂಸದರ ಈ ತರಹದ ವರ್ತನೆಗೆ ತೀವ್ರ ನೋವುಂಟಾಗಿದೆ . ಪ್ರಜಾಪ್ರಭುತ್ವ ವ್ಯವಸ್ಥೆ ಹಳಿತಪ್ಪಿದಂತಾಗಿದೆ . ಇದನ್ನ ಸರಿ ಮಾಡಬೇಕಾದ್ರೆ ಎಲ್ಲರು ಸೇರಿಯೇ ಮಾಡಬೇಕು . ಇಂತಹ ವರ್ತನೆಗಳು ಸಮಾಜಕ್ಕೆ ಒಳ್ಳೆ ಲಕ್ಷಣ ಅಲ್ಲ ಎಂದಿದ್ದಾರೆ.

ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಡುತ್ತಿದ್ದೇವೆ. ಮಹಾನುಭಾವರು ಸ್ವಾತಂತ್ರ್ಯ ತಂದು ಕೊಟ್ಟರು. ಅನೇಕರು ದೇಶಕ್ಕೆ ಆತ್ಮ ಅರ್ಪಣೆ ಮಾಡಿಕೊಂಡಿದ್ದಾರೆ ಇನ್ನು ಮುಂದಾದರು ಇದನ್ನು ನಾವು ಅರಿತು ಕೊಳ್ಳಬೇಕಾಗಿದೆ ಎಂದಿದ್ದಾರೆ.

ನಾವು ನಮ್ಮ ಪಕ್ಷದ ಚಟುವಟಿಕೆಗಳನ್ನ ಮುಂದುವರೆಸುತ್ತೇವೆ ಶೀಘ್ರವೇ ಪಕ್ಷದ ನಾಯಕರ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ಕೃಷ್ಣ ನದಿ ನೀರು ವಿಚಾರವಾಗಿ ಸಿಎಂ ನಿನ್ನೆ ಮಹಾರಾಷ್ಟ್ರದ ಅವರ ಪಕ್ಷದ ನಾಯಕರ ಜೊತೆ ಮಾತಾಡ್ತೀನಿ ಅಂತ ಹೇಳಿದ್ದಾರೆ . ಸಮಸ್ಯೆ ಬಗೆಹರಿಸೋದಾಗಿ ಸಿಎಂ ಹೇಳಿದ್ದಾರೆ. ಸಮಸ್ಯೆ ಪರಿಹಾರ ಆದ್ರೆ ಒಳ್ಳೆಯದು. ಸರಿ ಹೋಗದೆ ಇದ್ದರೆ ನಮ್ಮ ಪಕ್ಷದಿಂದ ಹೋರಾಟ ಮಾಡ್ತೀವಿ ಕೃಷ್ಣ ತೀರದಿಂದ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟು ವಿಚಾರವಾಗಿ ಕೂಡ ಹೋರಾಟ ಮಾಡುತ್ತೇವೆ. ಮಹದಾಯಿ ವಿಚಾರವನ್ನು ಬಿಡುವುದಿಲ್ಲ ನಮ್ಮ ಪಕ್ಷ ಹೋರಾಟ ಮಾಡುತ್ತೆ ಎಂದಿದ್ದಾರೆ.

ನಮ್ಮ ಜೀವನದಿಗಳಾದ ಕೃಷ್ಣ ಮೇಲ್ಡಂಡೆ, ಮೇಕದಾಟು, ಮಹದಾಯಿ ವಿಚಾರವಾಗಿ ಜೆಡಿಎಸ್ ನಿಂದ ಹೋರಾಟ ನಿರಂತರವಾಗಿರುತ್ತದೆ. ಪಾದಯಾತ್ರೆ ಮೂಲಕ ಹೋರಾಟ ಮಾಡಲು ಜೆಡಿಎಸ್ ತೀರ್ಮಾನ ಮಾಡುತ್ತೇವೆ , ಈ ಹೋರಾಟದ ಬಗ್ಗೆ ಇದೆ ಅಧಿಕೃತ ಘೋಷಣೆ ಎಂದಿದ್ದಾರೆ.

ಹೋರಾಟಕ್ಕೆ ದಿನಾಂಕವನ್ನು ನಿಗಧಿ ಮಾಡುತ್ತೇವೆ.
ನಮ್ಮ ರಾಜ್ಯದ ಹಿತ ಕಾಪಾಡೋದಕ್ಕಾಗಿ ಈ ಹೋರಾಟ ಅನಿವಾರ್ಯವಾಗಿದೆ , ಪ್ರಾದೇಶಿಕ ಪಕ್ಷವಾಗಿ ನಮ್ಮ ರಾಜ್ಯದ ಹಿತಾಸಕ್ತಿಗೋಸ್ಕರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್-ಬಿಜೆಪಿಗೆ ಹೋರಾಟ ಮಾಡಲು‌ ಕಷ್ಟ ಇದೆ. ಅವ್ರು ಹೋರಾಟ ಮಾಡಲು ‌ಆಗೊಲ್ಲ. ಎಲ್ಲರೂ ಸರ್ಕಾರ ಮಾತ್ರ ‌ಮಾಡಿದ್ದಾರೆ. ಅವ್ರಿಂದ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಾವೇ ಹೋರಾಟ ಮಾಡುತ್ತೇವೆ. ಸಾಂಕೇತಿಕವಾಗಿ ನಾನು ಒಂದು ದಿನ ಹೋರಾಟದಲ್ಲಿ ಭಾಗವಹಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಯುತ್ತೆ ಎಂದು ಹೇಳಿದ್ದಾರೆ.

ಕೃಷ್ಣ ಮೇಲ್ಡಂಡೆ ಯೋಜನೆಗೆ ಹಣ ನಾನು ಮೀಸಲಿಟ್ಟಷ್ಠೆ ಇದೆ. ಅದನ್ನ ಈಗ ಕಡಿಮೆ ಮಾಡಲಾಗಿದೆ. ಇದಕ್ಕೂ ನ್ಯಾಯ ಸಿಗಬೇಕು. ಮೇಕೆದಾಟು ಮತ್ತು ಮಹದಾಯಿ ವಿಚಾರವಾಗಿ ನಮಗೆ ನ್ಯಾಯ ಸಿಗಬೇಕು. ಇದಕ್ಕಾಗಿ ನಾವು ಹೋರಾಟ ‌ಮಾಡ್ತೀವಿ. ಆಗಲೇ ಹೇಳಿದ ಆಗೇ ಪಾದಯಾತ್ರೆ ಮೂಲಕ ಹೋರಾಟ ಮಾಡ್ತೀವಿ ಎಂದಿದ್ದಾರೆ.

ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅಂತಾರೆ.
2023 ಕ್ಕೆ ಜೆಡಿಎಸ್ ಇರಲ್ಲ ಅಂತಾರೆ. ಯಾರ್ ಮಾತಾಡಿದ್ರು ಅಂತ ನಾನು ಮಾತಾಡೊಲ್ಲ. ಆದ್ರೆ ಹಾಗೆ ಹೇಳಿರೋರಿಗೆ ಎಚ್ಚರಿಕೆ ಕೊಡ್ತೀನಿ. ಹೋರಾಟ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರೋಕೆ ಕೆಲಸ ಮಾಡ್ತೀವಿ. ವಿರೋಧಿಗಳಿಗೆ ಈ ಮೂಲಕ ತಿಳಿಸುತ್ತೇನೆ. ನಾನು ಹೋರಾಟದಲ್ಲಿ ಭಾಗಿಯಾಗ್ತೀನಿ. ಆದರೆ ಪಾದಯಾತ್ರೆ ಮಾಡೋದು ನನಗೆ ಈ ವಯಸ್ಸಿನಲ್ಲಿ ಕಷ್ಟ. ಆದ್ರೆ ಸಮಾರಂಭದಲ್ಲಿ, ಇನ್ನಿತರ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ ಎಂದಿದ್ದಾರೆ.

ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡ್ತೀವಿ. ನವೆಂಬರ್ ಅಧಿವೇಶನದ ವರೆಗೂ ನಾನು ಕುಳಿತುಕೊಳ್ಳೊಲ್ಲ. ಹೋರಾಟ ಮಾಡ್ತೀನಿ. ನಾನೇ ಎಲ್ಲಾ ಜಿಲ್ಲೆಗಳಿಗೂ ಹೋಗ್ತೀನಿ. ಹಳೆ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸಿಮೀತ ಅಂತಾರೆ. ಆದ್ರೆ ನಾನು‌ ಸಿಎಂ ಆಗಿದ್ದಾಗ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶಾಸಕರು ಗೆದ್ದಿದ್ದರು. ಆದ್ರು ಯಾವ್ ಯಾವ್ ಜಿಲ್ಲೆಗೆ ಹೋಗಬೇಕು ಅಂತ ನಿರ್ಧಾರ ಮಾಡಿ ಪ್ರವಾಸ ಮಾಡ್ತೀನಿ ಎಂದಿದ್ದಾರೆ.

ಕೊರೊನಾ ಅಂತ ಹೋರಾಟ ನಿಲ್ಲುವುದಿಲ್ಲ .
ಕಾಂಗ್ರೆಸ್ ಅವ್ರು ಸಭೆ ಮಾಡ್ತಾರೆ. ಬಿಜೆಪಿ ಅವ್ರು ಸಭೆ ಮಾಡ್ತಾರೆ. ಇದಕ್ಕೆಲ್ಲ ಕೊರೊ‌ನಾ‌ ಇಲ್ಲವಾ?
ಕೊರೊನಾ ನೆಪ ಹೇಳಿ ನಾನು ಕುಳಿತುಕೊಳ್ಳೊಲ್ಲ.
ನಮ್ಮ ಹೋರಾಟ ನಡದೇ ನಡೆಯುತ್ತೆ ಎಂದಿದ್ದಾರೆ.

ಪಾದಯಾತ್ರೆ ಮುಗಿದ ಬಳಿಕ ಪ್ರಧಾನಿ ಬಳಿಗೆ ನಿಯೋಗ ಹೋಗಿ ಮನವಿ ಕೊಡ್ತೀವಿ. ಒಂದು ವೇಳೆ ರಾಜ್ಯ ಸರ್ಕಾರವೇ ಪ್ರಧಾನಿ ಬಳಿಗೆ ನಿಯೋಗ ಹೋಗ್ತೀವಿ ಅಂತ ಅಂದ್ರೆ ಅವ್ರ ಜತೆಯೂ ಹೋಗೋಕೆ ನಮ್ಮ‌ ಪಕ್ಷ ಸಿದ್ದ ಇದೆ. ಬಿಜೆಪಿ ಎರಡು ವರ್ಷಗಳಿಂದ ಏನು ಮಾಡಿದೆ. ತಮಿಳುನಾಡು ಮಾತುಕೇಳಿ ಮೇಕೆದಾಟು ಗೆ ಕೇಂದ್ರ ವಿಳಂಬ ಮಾಡ್ತದೆ. ಈ ವಿಷಯದಲ್ಲಿ ಬಿಜೆಪಿ ಸರ್ಕಾರದ ಬೆಗ್ಗೆ ನನಗೆ ಬೇಸರ ಇದೆ. ನಮ್ಮ ಪಕ್ಷ ನೆಲ, ಜಲ, ಭಾಷೆ ಪರವಾಗಿ ಇದೆ. ನಮ್ಮ ರಾಜ್ಯದ ವಿಚಾರಗಳ ಬಗ್ಗೆ ನಮ್ಮ ಹೋರಾಟ ನಿರಂತರವಾಗಿ ಇರುತ್ತೆ ಎಂದಿದ್ದಾರೆ.

ನೆಹರು, ವಾಜಪೇಯಿ ಹೆಸರಿನಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ಕಿತ್ತಾಟ ವಿಚಾರ ಯಾರು ಹಾಗೆ ಮಾತನಾಡಬಾರದು. ನೆಹರು, ವಾಜಪೇಯಿ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಅವರ ಬಗ್ಗೆ ಮಾತಾಡಿದ್ರೆ ಪಕ್ಷಕ್ಕೆ ಹೆಚ್ಚು ಶಕ್ತಿ‌ ಬರುತ್ತೆ ಅನ್ನೋ ಭ್ರಮೆಯಲ್ಲಿ ಯಾರು‌ ಇರಬಾರದು. ನೆಹರು, ವಾಜಪೇಯಿ ಬಗ್ಗೆ ಮಾತಾಡಿದ ನಾಯಕರಿಗೆ ಈ ಮೂಲಕ ಮನವಿ ಮಾಡುತ್ತೀನಿ ಎಂದಿದ್ದಾರೆ.

ಮೋದಿ ವಿರುದ್ದ ವಿಪಕ್ಷಗಳು ಹೋರಾಟ ಕಟ್ಟಿ ಹಾಕುವ ವಿಚಾರ. ಯಾರು ಯಾರನ್ನು ಕಟ್ಟಿ ಹಾಕಲು‌ ಸಾಧ್ಯವಿಲ್ಲ.
ಆಯಾ ರಾಜ್ಯದ ಪ್ರಾದೇಶಿಕ ಪಕ್ಷಗಳು ಅಲ್ಲಿ ಸ್ಟ್ರಾಂಗ್ ಇರುತ್ತವೆ. ರಾಹುಲ್ ಗಾಂಧಿ‌ ಕೂಡಾ ಹೋರಾಟ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಇನ್ನು ಸ್ವಲ್ಪ ದೂರ ಹೋಗಬೇಕು. ಮೋದಿ ವಿರೋಧ ಬಣದ ನಾಯಕತ್ವ ಹೇಗೆ ಇರುತ್ತೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಅಫ್ಘಾನಿಸ್ತಾನ ಗಲಾಟೆ ವಿಚಾರ, ಅಮೆರಿಕಾ ಅಧ್ಯಕ್ಷ ಘಟನೆ ಬಗ್ಗೆ ಪರಾಮರ್ಶೆ ಮಾಡಿ ಮುಂದೆ ಏನಾಗುತ್ತೆ ಅಂತ ಅರ್ಥ ಮಾಡಿಕೊಂಡಿ ಬೈಡನ್ ಸೇನೆ ವಾಪಸ್ ಪಡೆಯಬೇಕಿತ್ತು. ಟ್ರಂಪ್ ಮತ್ತು ಬೈಡನ್ ನಡುವೆ ವ್ಯತ್ಯಾಸ ಇದೆ. ಬೈಡನ್ ಅವರ ದಿಢೀರ್ ಅಂತ ನಿರ್ಧಾರ ಮಾಡಿದ್ದು ಇಷ್ಟಕ್ಕೆ ಕಾರಣವಾಗಿರಬಹುದು. ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತಾಡೊಲ್ಲ. ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ ತಾಲಿಬಾನ್ ಪರ ಇದೆ ಹೇಳುತ್ತಾರೆ.

ನನ್ನ ಕಾಲದಲ್ಲಿ ಅಫ್ಘಾನಿಸ್ತಾನ ಪ್ರಧಾನಿಯನ್ನ ತಾಲಿಬಾನ್ ಗಳು ಓಡಿಸೇ ಬಿಟ್ಟಿದ್ದರು. ಬಿನ್ ಲಾಡೆನ್ ನನ್ನ ಒಮಾಮಾ ಸರ್ಕಾರ ಹೊಡೆದು ಹಾಕಿತ್ತು. ಆದಾದ ಬಳಿಕ ಸೇನೆ ಅಲ್ಲಿ ನೆಲೆಸಿತ್ತು. ತಾಲಿಬಾನ್ ಅಲ್ಲಲ್ಲಿ ಇದ್ದರು. ಅಮೇರಿಕಾ ಸೇನೆ ವಾಪಸ್ ಕರೆಸಿದಾಗ ತಾಲಿಬಾನ್ ಮತ್ತೆ ಆಟಾಟೋಪ ಶುರು ಮಾಡಿದ್ದಾರೆ ಅನ್ನಿಸುತ್ತೆ . ಇವೆಲ್ಲ ಅಂತಾರಾಷ್ಟ್ರೀಯ ವಿಚಾರಗಳು. ವಿಶ್ವ ಸಂಸ್ಥೆ ಕೂಡಾ ತಾಲಿಬಾನ್ ವಿರುದ್ದ ಪ್ರಬಲವಾಗಿ ವಿರೋಧ ಮಾಡಿದೆ ಎಂದು ಮಾಜಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

Tags: H D DevegowdaJDS KarnatakaModi GovernmentParliment sessionRahul Gandhi
Previous Post

ಮೈಸೂರು-ಬೆಂಗಳೂರು ಎಕ್ಸ್‌‌‌‌ಪ್ರೆಸ್‌‌‌ ಹೈವೇ ಯೋಜನೆ UPA ಸರ್ಕಾರ ಮಾಡಿದ್ದು, ಬಿಜೆಪಿ ಅಲ್ಲ: ಪ್ರತಾಪ್ ಸಿಂಹ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

Next Post

ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಪಟ್ಟಿಯಲ್ಲಿನ ಮೂವರು ಮಹಿಳಾ ನ್ಯಾಯಮೂರ್ತಿಗಳ ಕಿರು ಪರಿಚಯ!

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post
ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಪಟ್ಟಿಯಲ್ಲಿನ ಮೂವರು ಮಹಿಳಾ ನ್ಯಾಯಮೂರ್ತಿಗಳ ಕಿರು ಪರಿಚಯ!

ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಪಟ್ಟಿಯಲ್ಲಿನ ಮೂವರು ಮಹಿಳಾ ನ್ಯಾಯಮೂರ್ತಿಗಳ ಕಿರು ಪರಿಚಯ!

Please login to join discussion

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada