‘ಶೀಷ್ಮಹಲ್’ ವಿಚಾರವಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೂಲೆಗುಂಪು ಮಾಡಿದ ರೇಖಾ ಗುಪ್ತಾ ಈಗ ಸಿಎಂ ಆದ ಬಳಿಕ 50 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದಾರಾ? ಈ ಹೇಳಿಕೆಯೊಂದಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೀಡಿಯೊ ಕುರಿತು ಸ್ವಲ್ಪ ಸಂಶೋಧನೆ ನಡೆಸಿದ ನಂತರ, ಫೆಬ್ರವರಿ 20 ರಂದು ಸುದ್ದಿ ಸಂಸ್ಥೆ IANS ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವುದು ನಮಗೆ ತಿಳಿದು ಬಂದಿದೆ. ರೇಖಾ ಗುಪ್ತಾ ಅವರನ್ನು ಕರೆದೊಯ್ಯಲು ದೆಹಲಿ ಸಿಎಂ ಭದ್ರತಾ ತಂಡ ಆಗಮಿಸಿದೆ ಎಂದು ಬರೆಯಲಾಗಿದೆ. ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

‘DL11CM0001’ ಸಂಖ್ಯೆಯ ಅದೇ ಕಪ್ಪು ಕಾರಿನಲ್ಲಿ ಅರವಿಂದ್ ಕೇಜ್ರಿವಾಲ್ ಕುಳಿತುಕೊಂಡಿರುವ ಹಳೆಯ ವೀಡಿಯೊಗಳನ್ನು ಅನೇಕ ಜನರು ಹಂಚಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ.

ಅದೇ ಕಾರಿನಲ್ಲಿ ಕೇಜ್ರಿವಾಲ್ ಕುಳಿತುಕೊಂಡಿರುವ ಅನೇಕ ಹಳೆಯ ವೀಡಿಯೊಗಳು ಮತ್ತು ಚಿತ್ರಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.
ಕೇಜ್ರಿವಾಲ್ ಮಾತ್ರವಲ್ಲ, ಅತಿಶಿ ಮರ್ಲೆನಾ (Athishi Marlena) ಅವರು ಸಿಎಂ ಆಗಿದ್ದಾಗಲೂ ಈ ಕಾರನ್ನು ಬಳಸಿದ್ದರು.

“RTO ವೆಹಿಕಲ್ ಮಾಹಿತಿ” ವೆಬ್ಸೈಟ್ನಲ್ಲಿ ಈ ವಾಹನದ ಸಂಖ್ಯೆಯನ್ನು ಹುಡುಕಿದಾಗ, ಈ ವಾಹನವು ಏಪ್ರಿಲ್ 22, 2022 ರಂದು ನೋಂದಾಯಿಸಲ್ಪಟ್ಟಿದೆ ಎಂದು ಕಂಡುಬಂದಿದೆ. ಇಲ್ಲಿ ವಾಹನದ ಹೆಸರನ್ನು “MG GLOSTER” ಎಂದು ನಮೂದಿಸಲಾಗಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಕಾರು ಕೂಡ ಎಂಜಿ ಗ್ಲೋಸ್ಟರ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವ ಕಾರನ್ನು ಅರವಿಂದ್ ಕೇಜ್ರಿವಾಲ್ (Arvind Kejrival) ಸಿಎಂ ಆಗಿದ್ದಾಗ ಖರೀದಿಸಿದ್ದು, ರೇಖಾ ಗುಪ್ತಾ (Rekha Gupta) ಸಿಎಂ ಆದ ನಂತರ ಖರೀದಿಸಿಲ್ಲ ಎಂಬುದು ಸ್ಪಷ್ಟವಾಗಿದೆ.