ಬೇಸಿಗೆ ಬಂತು ಅಂತ ಹೇಳಿದ್ರೆ ಊಟ ತಿಂಡಿ ಸರಿಯಾಗಲ್ಲ ಇಂತಹ ಸಂದರ್ಭದಲ್ಲಿ ನಮಗೆ ಕಾಣಿಸಿಕೊಳ್ಳುವಂತ ಸಮಸ್ಯೆ ಅಂತ ಹೇಳಿದೆ ಹೊಟ್ಟೆ ಉಬ್ಬರ ಅಥವಾ ಬ್ಲೂಟಿಂಗ ಈ ಬ್ಲೋಟಿಂಗ್ ಯಾಕ್ ಆಗುತ್ತೆ ಅಂದ್ರೆ ಒಂದು ನಾವು ತುಂಬಾನೇ ಊಟ ಮಾಡಿದಾಗ ಡೈಜೆಶನ್ ಸರಿ ಆಗದೆ ಇದ್ದಾಗ ಅದರ ಜೊತೆಗೆ ನಾವೇನಾದ್ರೂ ಟೈಮಿಗೆ ಸರಿಯಾಗಿ ಊಟವನ್ನು ಮಾಡದೆ ಇದ್ದಾಗ ಗ್ಯಾಸ್ಟಿಕ್ ಸಮಸ್ಯೆ ಶುರುವಾಗಿ ಹೊಟ್ಟೆ ಉಬ್ಬರ ಕೂಡ ಆಗುತ್ತೆ..

ನಿಮಗೆ ಏನಾದ್ರೂ ಬ್ಲೋಟಿಂಗ್ ಸಮಸ್ಯೆ ಕಾಡ್ತಾ ಇದೆ ಅಂತ ಹೇಳಿದ್ರೆ ಮುಖ್ಯವಾಗಿ ನೀವು ಸಮ್ಮರ್ ಆಗಿರೋದ್ರಿಂದ ಲಿಕ್ವಿಡ್ ಐಟಮ್ಸ್ ನ ಹೆಚ್ಚಿನ ಮಟ್ಟದಲ್ಲಿ ತಗೋಳಿ ಅದರ ಜೊತೆಗೆ ಟೈಮ್ ಗೆ ಸರಿಯಾಗಿ ಊಟ ತಿಂಡಿನಾ ಮಾಡಬೇಕು ಕೆಲವರು ಬೆಳಿಗ್ಗೆ ತಿಂಡಿಯನ್ನು 11 ಗಂಟೆ ಸಮಯಕ್ಕೆ ತಿನ್ನುತ್ತಾರೆ. ಅಥವಾ ಮಧ್ಯಾಹ್ನದ ಊಟವನ್ನ ಮೂರು ಗಂಟೆ ನಾಲ್ಕು ಗಂಟೆಗೆ ತಿನ್ನುತ್ತಾರೆ.

ತಜ್ಞರ ಪ್ರಕಾರ ಬೆಳಿಗ್ಗೆ ತಿಂಡಿಯನ್ನ ನಾವು ಎಂಟರಿಂದ ಒಂಬತ್ತು ಗಂಟೆ ಒಳಗೆ ತಿನ್ನಬೇಕು ಹಾಗೂ ಮಧ್ಯಾಹ್ನದ ಊಟ ಒಂದರಿಂದ ಎರಡು ಗಂಟೆ ಒಳಗೆ ಮುಗಿಸಬೇಕು. ಹಾಗೂ ರಾತ್ರಿ ಊಟ ಎಂಟು ಗಂಟೆಯಿಂದ 9 ಗಂಟೆ ಒಳಗೆ ಮುಗಿಸಬೇಕು ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಡೈಜೆಶನ್ ಗು ಕೂಡ ಯಾವುದೇ ರೀತಿ ಸಮಸ್ಯೆ ಆಗಲ್ಲ ಜೊತೆಗೆ ಬ್ಲೋಟಿಂಗ್ ಸಮಸ್ಯೆ ಕೂಡ ಎದುರಾಗಲ್ಲ.. ನಿಮಗೇನಾದ್ರೂ ಹೊಟ್ಟೆ ಉಬ್ಬರ ಹೆಚ್ಚಾಗಿದ್ದರೆ ಹೀಗೆ ಮಾಡಿ.
ಶುಂಠಿ
ನಿಮ್ಮ ಊಟದಲ್ಲಿ ಶುಂಠಿಯನ್ನು ಬಳಸುವುದರಿಂದ ಅಥವಾ ಬ್ಲೂಟಿಂಗ ಸಮಸ್ಯೆ ಆದಾಗ ಶುಂಠಿ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಆಗಿರಬಹುದು. ಹೊಟ್ಟೆ ಉಬ್ಬರ ಜೊತೆಗೆ ನಿಮಗೆ ಗ್ಯಾಸ್ಟಿಕ್ ಸಮಸ್ಯೆ ಆಗಿದ್ದರೂ ಕೂಡ ನಿವಾರಣೆಯನ್ನು ಮಾಡುತ್ತೆ .. ಯಾಕಂತ ಹೇಳಿದ್ರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತೆ .. ಹಾಗೂ ಶುಂಠಿಯೂ ಉತ್ಕರ್ಷಣ ನಿರೋಧಕಗಳನ್ನ ಹೊಂದಿರುತ್ತದೆ..

ಮೊಸರು
ಊಟದ ನಂತರ ಮೊಸರನ್ನ ಸೇವನೆ ಮಾಡುವುದರಿಂದ ಪ್ರೊಬ್ಯಾಟಿಕ್ ಅಂಶಗಳು ನಮ್ಮ ದೇಹಕ್ಕೆ ಸೇರುತ್ತೆ ಜೊತೆಗೆ ಇದರಲ್ಲಿರುವಂತಹ ಬ್ಯಾಕ್ಟೀರಿಯಗಳು ನಮ್ಮ ಬ್ಲೂಟಿಂಗ ಸಮಸ್ಯೆಯನ್ನು ಕಡಿಮೆ ಮಾಡುತ್ತೆ ಹಾಗೂ ಪೊಟ್ಯಾಶಿಯಂ ಅಂಶ ಇರುವುದರಿಂದ ಸೋಡಿಯಂ ಅಂಶ ಕೂಡ ಕಡಿಮೆಯಾಗುತ್ತೆ ಹಾಗೂ ಜೀರ್ಣಕ್ರಿಯೆಗೆ ಇದು ಉತ್ತಮ.

ನಿಂಬೆ ರಸ
ಲೆಮನ್ ಜ್ಯೂಸ್ ನ ಕುಡಿಯೋದ್ರಿಂದ ಡೈಜೆಶನ್ ಚೆನ್ನಾಗಿ ಆಗುತ್ತೆ ಹಾಗೂ ಎದೆ ಉರಿಯಾಗುವುದು ಅಥವಾ ಬ್ಲೋಟಿಂಗ್ ಸಮಸ್ಯೆಗೆ ಇದು ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ.
