ಹಾಸನಾಂಬೆ ದರ್ಶನದ ಟಿಕೆಟ್ ಮಾರಾಟ ಮತ್ತೆ ಪ್ರಾರಂಭ ಮಾಡಲಾಗಿದೆ. ನಿನ್ನೆ ಅವ್ಯವಸ್ಥೆಗಳ ಆಗರ ಆದ ಬಳಿಕ ಸ್ಥಗಿತ ಆಗಿದ್ದ ಟಿಕೆಟ್ ವ್ಯವಸ್ಥೆ ಮತ್ತೆ ಪ್ರಾರಂಭ ಮಾಡಲಾಗಿದೆ. ಭಕ್ತರ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ ₹1000 ಹಾಗೂ ₹300 ಬೆಲೆಯ ಟಿಕೆಟ್ ಮಾರಾಟ ಪ್ರಾರಂಭ ಮಾಡಲಾಗಿದೆ.
ಟಿಕೆಟ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರ ಮನವಿ ಹಿನ್ನಲೆಯಲ್ಲಿ ಟಿಕೆಟ್ ಮಾರಾಟಕ್ಕೆ ಮರು ಚಾಲನೆ ಕೊಟ್ಟಿದೆ ಜಿಲ್ಲಾಡಳಿತ. ಈಗಾಗಲೇ ವಿದೇಶಗಳಿಂದಲೂ ಟಿಕೆಟ್ ಬುಕ್ ಮಾಡಿರೋ ಭಕ್ತರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಹಾಸನಾಂಬೆ ದರ್ಶನಕ್ಕೆ ಬರುವ ಸಾಧ್ಯತೆ ಇದೆ. ಸಮಸ್ಯೆ ಆಗಬಾರದು ಎಂದು ಶೀಘ್ರ ದರ್ಶನ ಮುಂದುವರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಗೇಟ್ ನಂ.1ರಲ್ಲಿ ₹1000 ಬೆಲೆಯ ಟಿಕೆಟ್ ಹಾಗು ದೇವಾಲಯದ ಹಿಂಭಾಗದಲ್ಲಿ ₹300 ಬೆಲೆಯ ಟಿಕೆಟ್ ಮಾರಾಟ ಪ್ರಾರಂಭ ಆಗಿದೆ. ಆದರೆ ವಿವಿಐಪಿ, ವಿಐಪಿ ಪಾಸುಗಳಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತ ನೀಡಿದ್ದ ಪಾಸುಗಳ ಬಳಕೆಯನ್ನು ರದ್ದುಗೊಳಿಸಲಾಗಿದೆ. ಗಣ್ಯರ ಪಾಸುಗಳ ದರ್ಶನ ಹೆಚ್ಚಾದ ಹಿನ್ನಲೆ ಪಾಸುಗಳ ವ್ಯವಸ್ಥೆ ರದ್ದು ಮಾಡಲಾಗಿದೆ.