ನೆನ್ನೆ ಹಾಸನದಲ್ಲಿ (Hassan) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಗ್ರಾಮಾಂತರ (Bangalore rural) ಜಿಲ್ಲೆಯ ಕಾರಹಳ್ಳಿ ಗ್ರಾಮದ 6 ಮಂದಿ ಮೃತ ಪಟ್ಟಿದ್ದರು.ಇದೀಗ ಮೃತರ ನಿವಾಸಕ್ಕೆ ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದ ಎಂಎಲ್‌ಎ ಪ್ರದೀಪ್ ಈಶ್ವರ್ (Pradeep estiwar) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು.

ಮೃತರ ಪೈಕಿ ಸುನಂದ (Sunanda) ಹಾಗೂ ನೇತ್ರ ಇಬ್ಬರೂ ಕೂಡ ಅಕ್ಕತಂಗಿಯರಾಗಿದ್ದು, ಇವರ ತವರು ಮನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಳ್ಳಿ ಗ್ರಾಮ ಆಗಿತ್ತು. ಮೃತ ನೇತ್ರ ಹಾಗೂ ರವಿಕುಮಾರ್ ದಂಪತಿಗೆ ಮೂವರು ಮಕ್ಕಳಿದ್ದರು.
ಅಪಘಾತದ ವೇಳೆ ಮಗ ಚೇತನ್ ಕೂಡ ಮೃತಪಟ್ಟಿದ್ದು ತಮ್ಮ ಇನ್ನಿಬ್ಬರು ಮಕ್ಕಳಾದ ಪಲ್ಲವಿ ಹಾಗೂ ಪೂರ್ಣಿಮಾರನ್ನ ಚಿಕ್ಕಬಳ್ಳಾಪುರದ ತವರು ಮನೆಯಲ್ಲಿ ಬಿಟ್ಟು ಹೋಗಿದ್ರು. ಇದೀಗ ಕಾಂಗ್ರೆಸ್ ಶಾಸಕ (Congress) ಪ್ರದೀಪ್ ಈಶ್ವರ್ (Pradeep eshwar) ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದು, ಇಬ್ಬರು ಮಕ್ಕಳ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ ತಾನೇ ನೋಡಿಕೊಳ್ಳೋದಾಗಿ ತಿಳಿಸಿದ್ದಾರೆ.





