ಹಾಸನದ ಅಧಿ ದೇವತೆ ಹಾಸನಾಂಬೆಯ (Hasanambe) 10 ದಿನಗಳ ದರ್ಶನೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಆದ್ರೆ ಇಂದು ಭಕ್ತಾದಿಗಳ ದರ್ಶನಕ್ಕೆ ಯಾವುದೇ ರೀತಿಯ ಅಕಾಶಗಳಿರೋದಿಲ್ಲ. ಅಕ್ಟೋಬರ್ 24ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. 2ನೇ ದಿನದಿಂದ ಅಂದ್ರೆ ಅಕ್ಟೋಬರ್ 25ರಿಂದ ಇವತ್ತು ಮುಂಜಾನೆ 4 ಗಂಟೆವರೆಗೂ ಭಕ್ತರು ಹಾನಸಾಂಬೆಯ ದರ್ಶನ ಪಡೆದಿದ್ದಾರೆ.

ಇಂದು ದೇಗುಲದ ಗರ್ಭಗುಡಿಯಲ್ಲಿ ಪೂಜಾ ವಿಧಿವಿಧಾನಗಳು ಸಂಪ್ರದಾಯದಂತೆ ನಡೆಯುತ್ತಿದೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಶಾಸ್ತೋಸ್ತ್ರವಾಗಿ ಪೂಜೆ ನೆರವೇರಿಸಿ, ದೀಪ ಹಚ್ಚಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ ಹಾಕಲಾಗುತ್ತೆ.
ಈ ಬಾರಿ ಗರ್ಭಗುಡಿಯಲ್ಲಿ ದೇವಿಗೆ ಅಲಂಕರಿಸಿದ ಹೂವು ಮತ್ತು ಇಂದು ಹಚ್ಚಿಡುವ ದೀಪ, ಮುಂದಿನ ವರ್ಷ ಗರ್ಭಗುಡಿಯ ಬಾಗಿಲು ತೆರೆಯುವವರೆಗೂ ಹಾಗೆಯೇ ಇರಲಿದೆ ಎಂಬುದು ಇಲ್ಲಯ ನಂಬಿಕೆ. ಹೀಗಾಗಿ ಇಂದು ಇಶೇಷ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.