ಇಂದು ಹರಿಯಾಣ ಚುನಾವಣೆಯ ಫಲಿತಾಂಶ (haryana election result) ಪ್ರಕಟಗೊಳ್ಳಲಿದ್ದು, ಈ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರಂತೆ ಚುನಾವಣಾ ಮತ ಎಣಿಕೆಯಲ್ಲಿ ಭಾರೀ ಹಾವು ಏಣಿ ಆಟ (Snake & lader) ಜೋರಾಗಿದೆ.

ಆರಂಭದಲ್ಲಿ 52 ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮುನ್ನಡೆ ಕಾಯ್ದುಗೊಂಡು ಗೆಲುವಿನ ವಿಶ್ವಾಸದಲ್ಲಿತ್ತು. ಆದ್ರೆ ನಂತರದ ಮತ ಎಣಿಕೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿ (Bjp) ಕಾಂಗ್ರೆಸ್‌ನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಫಲಿತಾಂಶದ ಕುರಿತು ಸ್ಪಷ್ಟ ಚಿತ್ರಣಗಳ ಲಭ್ಯವಾಗಲಿದೆ.
ಸದ್ಯ ಫಲಿತಾಂಶ ರೋಚಕ ಘಟ್ಟ ತಲುಪಿದ್ದು, ಬಿಜೆಪಿ ಮ್ಯಾಜಿಕ್ ನಂಬರ್ (Magic number) ಅನ್ನ ದಾಟಿ ಹಲು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನತ್ತ (Hatrick win) ಬಿಜೆಪಿ ದಾಪುಗಾಲಿಡ್ತಿದೆ. ಬಿಜೆಪಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ.ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.










