
ಹರಪನಹಳ್ಳಿ: ತಾಲ್ಲೂಕಿನ ತೊಗರಿಕಟ್ಟೆಯಲ್ಲಿ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೊಲ್ ಎರಚಿ ರಾಸುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಜರುಗಿದೆ.ತೊಗರಿಕಟ್ಟೆ ಗ್ರಾಮದ ಹನುಮಂತಪ್ಪ ಅವರಿಗೆ ಸೇರಿದ ಎತ್ತುಗಳು ಗಾಯಗೊಂಡಿವೆ. ತಗಡಿನ ಮೇಲ್ಛಾವಣಿ ಹೊಂದಿದ್ದ ದನದ ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಲಾಗಿತ್ತು.ತಗಡಿನ ಚಾವಣಿಗೆ ಪೆಟ್ರೊಲ್ ಸುರಿದ ಬೆಂಕಿ ಹಚ್ಚಿರುವ ಪರಿಣಾಮ ಎತ್ತುಗಳು ಗಾಯಗೊಂಡಿವೆ. ಅವುಗಳನ್ನು ಸಾಯಿಸುವ ದುರುದ್ದೇಶದಿಂದ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಹಿಡಿದು ಶಿಕ್ಷಿಸಬೇಕು’ ಎಂದು ಹನುಮಂತಪ್ಪ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಪೊಲೀಸರು ಬೇಟಿ ನೀಡಿದ್ದು, ಸೋಮವಾರ ಪ್ರಕರಣ ದಾಖಲಾಗಿದೆ.





