• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹರಕುಬಾಯಿ ಈಶ್ವರಪ್ಪ ಚುನಾವಣೆಗೆ ನಿಲ್ಲಬಾರದು : SDPI

Any Mind by Any Mind
March 15, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ಹರಕುಬಾಯಿ ಈಶ್ವರಪ್ಪ ಚುನಾವಣೆಗೆ ನಿಲ್ಲಬಾರದು : SDPI
Share on WhatsAppShare on FacebookShare on Telegram

ಶಿವಮೊಗ್ಗ:ಮಾ.15: ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಷಣ ಮಾಡುತ್ತಿದ್ದ ಕೆ.ಎಸ್.ಈಶ್ವರಪ್ಪ ಆಝಾನ್ ಶಬ್ಧಕ್ಕೆ ಸಿಡಿಮಿಡಿಗೊಂಡು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು, ಮೈಕ್ ನಲ್ಲಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ ಎಂದು ಬೇಸರ ವ್ಯಕ್ತಪಡಿಸಿದ್ದರು. ಹಾಗೂ ಈ ಕುರಿತು ಸಮರ್ಥನೆ ಕೂಡ ನೀಡಿದ್ದರು.
ಈಶ್ವರಪ್ಪ ಹೇಳಿಕೆಯನ್ನ ಖಂಡಿಸಿ ಮುಸ್ಲಿಂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿವೆ. ಶಿವಮೊಗ್ಗ SDPI ಘಟಕ ನಗರದಲ್ಲಿಂದು ಪ್ರತಿಭಟನೆ ನಡೆಸಿ ಹರಕುಬಾಯಿ ಈಶ್ವರಪ್ಪ ರಾಜೀನಾಮೆ ಪಡೆದು ಚುನಾವಣೆಗೆ ನಿಲ್ಲದಂತೆ ಭಹಿಷ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ನೀಡಿದರು. ಪ್ರತಿಭಟನೆ ಬಳಿಕ ಮಾತನಾಡಿದ SDPI ಮುಖಂಡ ಸಲೀಂ ಖಾನ್, ಈಶ್ವರಪ್ಪ ಹಾಗೂ ಅವರ ಕುಟುಂಬಕ್ಕೆ ರಾಜಕೀಯದಲ್ಲಿ ಬೆಂಬಲ ನೀಡಬಾರದು ಎಂದು ಕರೆ ನೀಡಿದರು.

ADVERTISEMENT

ಕಳೆದ ಮೂರು ದಿನಗಳ ಹಿಂದೆ, ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಲ್ಲಿ ಮಾಜಿ ಸಚಿವ ಹಾಗೂ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ತಮ್ಮ ಹರಕು ನಾಲಗೆಯಿಂದ ಮುಸ್ಲಿಂರ ಆರಾಧ್ಯ ದೈವ ಅಲ್ಲಾಹುವಿನ ನಿಂದನೆ ಮಾಡಿದ್ದಾರೆ. ಇವರ ಹತಾಶೆ ಎಷ್ಟರಮಟ್ಟಿಗೆ ಇದೆ ಎಂದರೆ ಕೇವಲ ಟಿಕೆಟ್ ಗಿಟ್ಟಿಸಿಕೊಳ್ಳಲು ಮುಸ್ಲಿಂ ಸಮುದಾಯದವರನ್ನ ಟಾರ್ಗೆಟ್ ಮಾಡಿದ್ದಾರೆ. ಈ ಹೇಳಿಕೆಯಿಂದ ಪ್ರಚೋದನೆಗೊಂಡ ಕೆಲವರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ನಾಚಿಗೆಗೇಡಿನ ಸಂಗತಿ. ಇವರ ಹೇಳಿಕೆಯಿಂದ ಕರ್ನಾಟಕ ಹೊತ್ತಿ ಉರಿವ ಹಂತಕ್ಕೆ ಬಂದಿದೆ. ಈ ಸರ್ಕಾರದ ಮೇಲೆ ನಮಗಷ್ಟೇ ಅಲ್ಲ ಯಾರಿಗೂ ನಂಬಿಕೆ ಇಲ್ಲ. ಬಿಜೆಪಿ ಕಾರ್ಯಕರ್ತ ಬೆಳಗಾವಿ ಕಾಂಟ್ರ್ಯಾಕ್ಟರ್ ಸಂತೋಷ್ ಎಂಬಾತ ಇವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ. ಆದರೂ ಆತನ ಮೇಲೆ ಯಾವುದೇ ಕ್ರಮವಾಗಲಿಲ್ಲ. ಹಾಗಾಗಿ ಈ ದೇಶದ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ತಕ್ಷಣ ಈಶ್ವರಪ್ಪ ಮೇಲೆ ಕ್ರಮವಾಗಬೇಕು ಹಾಗೂ ಯಾವುದೇ ಚುನಾವಣೆಯಲ್ಲಿ ನಿಲ್ಲದ ಹಾಗೆ ಶಿಕ್ಷೆ ನೀಡಬೇಕು ಎಂದು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈಶ್ವರಪ್ಪನವರಿಗೂ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಈ ಶಿವಮೊಗ್ಗ ಜಿಲ್ಲೆ ಹಲವು ಹೆಮ್ಮೆಗೆ ಪ್ರತೀಕದಂತಿರುವ ಶಿವಮೊಗ್ಗದಲ್ಲಿ ಈಶ್ವರಪ್ಪ ಹೇಳಿಕೆ ಚಿಂತಿಗೀಡು ಮಾಡಿದೆ. ಕುವೆಂಪು ಅಂತ ಮಹಾನ್ ಲೇಖಕರ ನಾಡಿನಲ್ಲಿ ಹರಕಲು ಬಾಯಿಯಿಂದ ಈ ತರಹದ ಹೇಳಿಕೆ ನೀಡಬೇಡಿ. ಇಲ್ಲಿ ಸುಖ-ಶಾಂತಿಯಿಂದ ಬದುಕುತ್ತಿದ್ದೇವೆ. ಇದೇ ತರಹ ಮುಂದುವರಿದರೆ ಈಶ್ವರಪ್ಪ ಅಷ್ಟೇ ಅಲ್ಲ ಅವರ ಕುಟುಂಬಕ್ಕೂ ಸಹ ಜ‌ನ ಇಲ್ಲಿ ಬೆಂಬಲ ನೀಡೋದಿಲ್ಲ. ನಾವು ಈಶ್ವರಪ್ಪ ಅವರನ್ನ ಕ್ಷಮಿಸೋದಿಲ್ಲ. ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈಶ್ವರಪ್ಪ ಅವರನ್ನ ಸಂಪುಟದಿಂದ ತೆಗೆದುಹಾಕಬೇಕು ಎಂದು ಎಸ್.ಡಿ.ಪಿಐ ರಾಜ್ಯ ಸಂಚಾಲಕ ಸಲೀಂ ಖಾನ್ ಒತ್ತಾಯಿಸಿದ್ದಾರೆ..

Tags: BJPBJP GovernmentbjpmlaCongress PartyKS EshwarappaprotestSDPIಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘ಸಿದ್ದರಾಮಯ್ಯ, ಜನಾರ್ದನರೆಡ್ಡಿ ವಿರುದ್ಧ ಕಣಕ್ಕಿಳಿಯುವ ಮಾತೇ ಇಲ್ಲ’ : ಹೀಗ್ಯಾಕೆ ಅಂದ್ರು ಶ್ರೀರಾಮುಲು?

Next Post

‘ಕಾಂಗ್ರೆಸ್​ಗೆ ಗ್ಯಾರಂಟಿಯಿಲ್ಲ, ರಾಜ್ಯದ ಜನತೆಗೆ ಏನು ಗ್ಯಾರಂಟಿ ಕಾರ್ಡ್ ಕೊಡ್ತಾರೆ’ : ಸಿಎಂ ಬೊಮ್ಮಾಯಿ ವ್ಯಂಗ್ಯ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post
‘ಕಾಂಗ್ರೆಸ್​ಗೆ ಗ್ಯಾರಂಟಿಯಿಲ್ಲ, ರಾಜ್ಯದ ಜನತೆಗೆ ಏನು ಗ್ಯಾರಂಟಿ ಕಾರ್ಡ್ ಕೊಡ್ತಾರೆ’ : ಸಿಎಂ ಬೊಮ್ಮಾಯಿ ವ್ಯಂಗ್ಯ

‘ಕಾಂಗ್ರೆಸ್​ಗೆ ಗ್ಯಾರಂಟಿಯಿಲ್ಲ, ರಾಜ್ಯದ ಜನತೆಗೆ ಏನು ಗ್ಯಾರಂಟಿ ಕಾರ್ಡ್ ಕೊಡ್ತಾರೆ’ : ಸಿಎಂ ಬೊಮ್ಮಾಯಿ ವ್ಯಂಗ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada