• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬ್ಯಾಕ್ ಬೆಂಚರ್ಸ್‍ಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ

ಪ್ರತಿಧ್ವನಿ by ಪ್ರತಿಧ್ವನಿ
July 25, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ನಿರ್ದೇಶಕ ರಾಜಶೇಖರ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಯ ಮೂಡಿನಲ್ಲಿದೆ. ಒಂದು ಹೊಸಬರ ತಂಡ ಕಟ್ಟಿಕೊಂಡು `ಬ್ಯಾಕ್ ಬೆಂಚರ್ಸ್’ ಚಿತ್ರವನ್ನು ರೂಪಿಸುವ ಸಾಹಸ ಮಾಡಿದ್ದವರು ರಾಜಶೇಖರ್. ಇದೀಗ ಈ ಚಿತ್ರ ಬಿಡುಗಡೆಗೊಂಡು ವಾರ ಕಳೆಯುವ ಮುನ್ನವೇ, ರಾಜ್ಯದ ನಾನಾ ಭಾಗಗಳಲ್ಲಿ ಭರ್ಜರಿ ಓಪನಿಂಗ್ ಸಿಗಲಾರಂಭಿಸಿದೆ. ಹೊಸತವನ್ನೇ ಆತ್ಮವಾಗಿಸಿಕೊಂಡಂತಿರುವ ಈ ಕಾಲೇಜು ಕೇಂದ್ರಿತ ಕಥೆಗೆ ನೋಡುಗರೆಲ್ಲ ಫಿದಾ ಆಗಿದ್ದಾರೆ. ಬಾಯಿಂದ ಬಾಯಿಗೆ ಹಬ್ಬಿಕೊಳ್ಳುತ್ತಿರುವ ಸದಭಿಪ್ರಾಯಗಳೇ ಸಿನಿಮಾ ಮಂದಿರಗಳು ಭರ್ತಿಯಾಗುವಂಥಾ ಕಮಾಲ್ ಮಾಡುತ್ತಿವೆ.

ADVERTISEMENT

ಇದೇ ರೀತಿ ಮುಂದುವರೆದರೆ ಬ್ಯಾಕ್ ಬೆಂಚರ್ಸ್‍ಗೆ ನಿರೀಕ್ಷೆಗೂ ಮೀರಿದ ಗೆಲುವು ದಕ್ಕುವುದರಲ್ಲಿ ಯಾವ ಸಂಶಯವೂ ಇಲ್ಲ.ಅಷ್ಟಕ್ಕೂ ಆರಂಭದಲ್ಲಿ ಈ ಚಿತ್ರ ೨೩ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತ್ತು. ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲೇ ಈ ಚಿತ್ರ ತೆರೆಗಂಡಿತ್ತು. ಅಲ್ಲೆಲ್ಲ ದಾಖಲೆ ಮಟ್ಟದಲ್ಲಿ ಬ್ಯಾಕ್ ಬೆಂಚರ್ಸ್ ಚಿತ್ರ ಪ್ರದರ್ಶನ ಕಂಡಿದೆ.

ಬ್ಯಾಕ್ ಬೆಂಚರ್ಸ್‍ಗೆ ಆರಂಭದಿಂದ ಸಿಗುತ್ತಿರುವ ಪ್ರತಿಕ್ರಿಯೆ, ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂದಣಿ ಹೆಚ್ಚಾಗುತ್ತಿರುವ ರೀತಿ ಕಂಡು ವಿತರಕರಿಗೆ ಸಂತೋಷವಾಗಿದೆ. ಅಂಥಾದ್ದೊಂದು ಸಮ್ಮೋಹಕ ಚೇತರಿಕೆ ಬ್ಯಾಕ್ ಬೆಂಚರ್ಸ್ ಕಡೆಯಿಂದ ಕಂಡು ಬರುತ್ತಿದೆ.ಇನ್ನುಳಿದಂತೆ, ರಾಯಚೂರು, ಧಾರವಾಡ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದೆಡೆಗಳಲ್ಲಿಯೂ ಬ್ಯಾಕ್ ಬೆಂಚರ್ಸ್ ಅಕ್ಷರಶಃ ಕಮಾಲ್ ಮಾಡಿದ್ದಾರೆ. ಈ ಭಾಗಗಳಲ್ಲಿ ಹೊಸಬರ ಚಿತ್ರಗಳು ಅದೇನೇ ಪ್ರಯತ್ನ ಪಟ್ಟರೂ ಓಪನಿಂಗ್ ಪಡೆದುಕೊಳ್ಳುತ್ತಿರಲಿಲ್ಲ. ಇಂಥಾ ವಾತಾವರಣದಲ್ಲಿ ಬ್ಯಾಕ್ ಬೆಂಚರ್ಸ್ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

ದಿನ ಕಳೆದಂತೆ ಶೋಗಳು ತುಂಬಿಕೊಳ್ಳುತ್ತಿವೆ. ಮೈಸೂರಿನಲ್ಲಿ ಮುದಲ ದಿನ ಒಂದು ಶೋ ಅಷ್ಟೇ ಆಯೋಜಿಸಲಾಗಿತ್ತು. ಎರಡು ಮೂರು ದಿನ ಕಳೆಯುವಷ್ಟರಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಬಿಟ್ಟಿದೆ. ಗುರುವಾರದಂದು ಆರು ಶೋಗನ್ನು ನಿಗಧಿಪಡಿಸಲಾಗಿದೆ.

ಇದು ನಿಜಕ್ಕೂ ಕನ್ನಡ ಚಿತ್ರರಂಗದ ದೃಷ್ಟಿಯಿಂದಲೂ ಸಕಾರಾತ್ಮಕ ಬೆಳವಣಿಗೆ.ಕಾಲೇಜು ಕೇಂದ್ರಿತ ಕಥೆಗಳು ಕನ್ನಡದಲ್ಲಿ ಹಿಟ್ ಆಗಿವೆ. ನಿರ್ದೇಶಕ ರಾಜಶೇಖರ್ ಕಾಲೇಜು ಬೇಸಿನ ಈ ಕಥೆಯನ್ನು ಕಟ್ಟಿ ಕೊಟ್ಟಿರುವ ರೀತಿ, ಹೊಸಬರ ತಂಡ ಅದರಲ್ಲಿ ತಲ್ಲೀನವಾದ ಪರಿಗಳೆಲ್ಲವೂ ಪ್ರೇಕ್ಷಕರನ್ನು ಸೆಳೆದಿವೆ.

ಒಂದು ಶೋಗೆ ಒಬ್ಬರು ಬಂದರೆ, ಮತ್ತೊಂದು ಶೋಗೆ ಹತ್ತದಿನೈದು ಮಂದಿಯ ಸಮೇತ ಬರಲಾರಂಭಿಸಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡ ಸಿನಿಮಾಗಳಿಗೆ ಹೇಳಿಕೊಳ್ಳುವಂಥಹ ಪ್ರತಿಕ್ರಿಯೆ ಸಿಗುತ್ತಿಲ್ಲ. ಅಂಥಹುದರಲ್ಲಿ ಬ್ಯಾಕ್ ಬೆಂಚರ್ಸ್ ಭಾರೀ ಸಂಚಲನ ಸೃಷ್ಟಿಸುತ್ತದೆ. ಪಿ.ಪಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಮ್ಯಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'#[pratidhvanidigital#kabza #sandalwood #newmovie #kannadafilm #upendra #shivarajkumar #sudeep #pratidhvani #pratidhvanidigital #prtidhvaninews
Previous Post

ವಿಧಾನಸಭೆ ಅಧಿವೇಶನ ನೇರಪ್ರಸಾರ..!

Next Post

ಮೂಕನಾಗಬೇಕು ನಾವು ಮುಡಾದಲ್ಲಿ ಜ್ವಾಕ್ಯಗಿರಬೇಕು ಬಿಜೆಪಿ..!

Related Posts

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
0

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉದ್ಯಮ ವಲಯದ ಸಾಧಕ ಕಂಪನಿಗಳಿಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ ಪ್ರದಾನ ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪರಿಸರ...

Read moreDetails
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

June 26, 2025
ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು

ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು

June 26, 2025
ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

June 26, 2025

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

June 26, 2025
Next Post

ಮೂಕನಾಗಬೇಕು ನಾವು ಮುಡಾದಲ್ಲಿ ಜ್ವಾಕ್ಯಗಿರಬೇಕು ಬಿಜೆಪಿ..!

Recent News

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು
Top Story

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

by ಪ್ರತಿಧ್ವನಿ
June 26, 2025
ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು
Top Story

ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು

by ಪ್ರತಿಧ್ವನಿ
June 26, 2025
ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 26, 2025
Top Story

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

by Pratidhvani
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

June 26, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!