ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಮಂದಿ ಆರೋಪಿತರ ಪಟ್ಟಿ ಮಾಡಿದ್ದು, ಇವರ ಚಲನ-ವಲನದ ಮೇಲೆ ಪೊಲೀಸರು ವಿಶೇಷ ನಿಗಾ . ತಾಲೂಕಿನಾದ್ಯಂತ ಮೂರು ದಿನ “ಮದ್ಯ ಮಾರಾಟ ನಿಷೇಧಿಸಲಾಗಿದೆ” ಎಂದು ಎಸ್ಪಿ ಹೇಳಿದರು
ಹುಣಸೂರು: ಡಿ.7ರಂದು ಹನುಮ ಜಯಂತಿ ಶೋಭಾಯಾತ್ರೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಎಸ್‌ಪಿ ಆರ್.ಚೇತನ್, ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್, ಡಿವೈಎಸ್‌ಪಿ ರವಿಪ್ರಸಾದ್ ಮತ್ತಿತರ ಅಧಿಕಾರಿಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಯುವ ಮಾರ್ಗಗಳ ಪರಿಶೀಲನೆ ನಡೆಸಿ, ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ನಂತರ ಡಿವೈಎಸ್‌ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಿದ್ಧತೆ ಕುರಿತು ಮಾಹಿತಿ ನೀಡಿದರು. ”ಈಗಾಗಲೇ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಎರಡೂ ಕಡೆಯವರಿಗೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಎರಡು ಕಡೆಯವರಿಂದ ಸಾಮರಸ್ಯದ ಮೆರವಣಿಗೆಗೆ ಸಹಕರಿಸುವ ಭರವಸೆ ಸಿಕ್ಕಿದೆ” ಎಂದರು
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಮಂದಿ ಆರೋಪಿತರ ಪಟ್ಟಿ ಮಾಡಿದ್ದು, ಇವರ ಚಲನ-ವಲನದ ಮೇಲೆ ಒಬ್ಬರಿಗೆ ಒಬ್ಬ ಪೊಲೀಸರು ವಿಶೇಷ ನಿಗಾ . ತಾಲೂಕಿನಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ” ಎಂದು ಎಸ್ಪಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪೌರಾಯುಕ್ತೆ ಮಾನಸ, ತಹಸೀಲ್ದಾರ್ ಡಾ.ಅಶೋಕ್, ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸ್, ಸಿ.ವಿ.ರವಿ, ಚಿಕ್ಕಸ್ವಾಮಿ ಇದ್ದರು. ಶೋಭಾಯಾತ್ರೆ ನಡೆಯುವ ಡಿ.7ರಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ನಗರದ ಜನನಿಬಿಡ ಜೆಎಲ್‌ಬಿ-ಬಜಾರ್ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟ ನಿಷೇಧಿಸಲಾಗುವುದು. ಅನುಮತಿ ಪಡೆದ ವಾಹನಗಳಿಗೆ ಮಾತ್ರ ಮೆರವಣಿಗೆಗೆ ಅವಕಾಶ ನೀಡಲಾಗುವುದು. ವಾಹನಗಳ ಮೇಲೆ ಹತ್ತುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡಿ.ಜೆ. ಬಳಕೆಗೆ ಅವಕಾಶವಿಲ್ಲ. ಸಂಜೆ 5ರವರೆಗೆ ಮಾತ್ರ ಮೆರವಣಿಗೆಗೆ ಅವಕಾಶ ನೀಡಲಾಗಿದೆ”ಎಂದು ಎಸ್ಪಿ ಹೇಳಿದರು.