ಮಂಡ್ಯದ ಶ್ರೀರಂಗಪಟ್ಟಣದಲ್ಲಿ (Hanuman jayanti) ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಕೊನೆಗೂ ಸಮಾಪ್ತಿಯಾಗಿದೆ.ಆದ್ರೆ ಯಾತ್ರೆಯ ಅಂತಿಮ ಹಂತದಲ್ಲಿ ಕೆಲ ಕ್ಷಣ ಹೈ ಡ್ರಾಮ (High drama) ಸೃಷ್ಟಿಯಾಗಿ ಆತಂಕ ಮನೆಮಾಡಿತ್ತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದ ಸಂಕೀರ್ತನ ಯಾತ್ರೆಯಲ್ಲಿ ಸಾವಿರಾರು ಸಂಖೆಯಲ್ಲಿ ಸಾಗಿ ಬಂದ ಮಾಲಾಧಾರಿಗಳು, ಮೆರವಣಿಗೆ ಜಾಮಿಯಾ ಮಸೀದಿ (Jamiya masjid) ಬಳಿ ಬರುತಿದ್ದಂತೆ ಅಬ್ಬರ ಶುರು ಮಾಡಿದ್ದಾರೆ. ಮಸೀದಿಯ ಪಕ್ಕವೇ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಜಮಾಯಿಸಿ ಕುಣಿದು ಕುಪ್ಪಳಿಸಿ, ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಆದ್ರೆ ಮೊದಲೇ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಜಮಾಯಿಸಿದ್ದರಿಂದ ಮಾಲಾಧಾರಿಗಳನ್ನ ಜಾಮಿಯಾ ಮಸೀದಿ ವೃತ್ತದಿಂದ ಮುಂದಕ್ಕೆ ಕಳುಹಿಸಲು ಯಶಸ್ವಿಯಾಗಿದ್ದಾರೆ.
ಈ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನ್ನು ಗಮನಿಸಿ,ಅನುಮಾನದಲ್ಲಿ ಅಪರಿಚಿತ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಈ ಸಂಕೀರ್ತನ ಯಾತ್ರೆ ಸಮಾಪ್ತಿಯ ಸಂದರ್ಭದಲ್ಲಿ ಜಾಮಿಯಾ ಮಸೀದಿ ಸ್ಥಳದಲ್ಲೇ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣ ಮಾಡಬೇಕು ಎಂದು ಹನುಮ ಮಾಲಾಧಾರಿಗಳು ಆಗ್ರಹಿಸಿದ್ದಾರೆ.