ಭಾರಿ ಕೂತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಹಾನಗಲ್ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲೂ ಕೂಡ ಜೆಡಿಎಸ್ ತೀವ್ರ ಮುಖಭಂಗಕ್ಕೀಡಾಗಿದೆ. ಬಿಜೆಪಿ ಅಬ್ಬರದ ಪ್ರಕಾರಕ್ಕೆ ಕ್ಯಾರೆ ಅನ್ನದೆ ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಹೌದು, ಹಾನಗಲ್ ಕ್ಷೇತ್ರ ಉಪ ಚುನಾವಣೆ ಮತ ಎಣಿಕೆಯ ಎಲ್ಲಾ ಸುತ್ತುಗಳು ಮುಗಿದಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 87300 ಮತ ಪಡೆದು 7426 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 79,874 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್‌ನ ನಯಾಜ್ ಶೇಖ್ 923ಮತ ಪಡೆದು ಸೋತು ಸುಣ್ಣವಾಗಿದ್ದಾರೆ.