ಹೆಣ್ಣು ಮಕ್ಕಳಿಗೆ ಮೆಹಂದಿಯನ್ನು ಕೈಗೆ ಹಚ್ಚಿಕೊಳ್ಳುವುದೆಂದರೆ ತುಂಬಾನೇ ಇಷ್ಟ.ಅದರಲ್ಲೂ ಮದುವೆ ಸಮಾರಂಭದಲ್ಲಿ ಹಬ್ಬ ಹರಿದಿನಗಳಲ್ಲಿ ಚಿಕ್ಕ ಹುಡುಗಿಯರಿಂದ ಹಿಡಿದು ಮಹಿಳೆಯರು ತಪ್ಪದೇ ಮೆಹೆಂದಿಯನ್ನು ಹಾಕಿಕೊಳ್ಳುತ್ತಾರೆ.. ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿ ಇದ್ರೆ ಕೈಗೆ ಹಚ್ಚಿರುವ ಗೋರಂಟಿಯ ಬಣ್ಣ ತುಂಬಾನೇ ಗಾಢವಾಗಿ ಬರುತ್ತದೇ.. ಇಲ್ಲವಾದಲ್ಲಿ ಲೈಟ್ ಕಲರ್ ಆಗುತ್ತದೆ.. ಕೆಲವರಿಗೆ ಗೋರಂಟಿ ಹಾಕಿ ಒಂದೆರಡು ದಿನ ಆದ್ಮೇಲೆ ಬಣ್ಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಧುವಿನ ಕೈಯಲ್ಲಿ ಗೋರಂಟಿಯ ಬಣ್ಣ ಜಾಸ್ತಿ ಇದ್ದರೆ ವರನ ಮೇಲೆ ತುಂಬಾನೇ ಪ್ರೀತಿ ಎಂಬ ಅರ್ಥ ಅಂತಾರೆ..ಈ ಮಾತು ಬಹಳ ಹಿಂದಿನಿಂದಲು ಇದೆ. ನೀವು ಗೋರಂಟಿ ಹಾಕಿದಾಗ ಬಣ್ಣ ಜಾಸ್ತಿ ಆಗಬೇಕು ಅಂತ ಬಯಸಿದರೆ ಈ ಒಂದು ನ್ಯಾಚುರಲ್ ಸಜೆಶನ್ ನ ಫಾಲೋ ಮಾಡಿ.
ಕೋನ್
ಮೆಹಂದಿಯ ಕೋನ್ ಬಳಸುವಾಗ ನೀವು ಯಾವ ಬ್ರಾಂಡಿನ ಮೆಹಂದಿಯನ್ನು ಹಚ್ಚುತ್ತಾ ಇದ್ದೀರಾ ಅನ್ನುವ ಅರಿವು ನಿಮಗಿರಬೇಕು.ಕೆಲವೊಂದು ಬ್ರಾಂಡ್ ಅಲ್ಲಿ ಮೆಹಂದಿಯ ಬಣ್ಣ ತುಂಬಾನೇ ಲೈಟ್ ಆಗಿ ಬರುತ್ತದೆ ಇನ್ನು ಕೆಲವು ಬಂದು ಬ್ರಾಂಡ್ ಅಲ್ಲಿ ಮೆಹಂದಿ ಬಣ್ಣ ತುಂಬಾನೆ ಡಾರ್ಕ್ ಆಗುತ್ತದೆ. ಡಾರ್ಕ್ ಆಗುವಂಥ ಮೆಹಂದಿಯನ್ನು ನೀವು ಖರೀದಿ ಮಾಡಬೇಕು.
ನಿಂಬೆ ರಸ ಮತ್ತು ಸಕ್ಕರೆ
ಈ ಒಂದು ಮೆಥಡ್ ಅನ್ನ ತುಂಬಾ ಹಿಂದಿನಿಂದಲೂ ಫಾಲೋ ಮಾಡಿಕೊಂಡು ಬಂದಿದ್ದಾರೆ. ಒಂದು ಬೌಲ್ ಅಲ್ಲಿ ಎರಡು ಟೇಬಲ್ ಸ್ಪೂನ್ ನಷ್ಟು ನಿಂಬೆರಸ ಹಾಕಿ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು, ನಂತರ ಒಂದು ಕಾಟನ್ನಿಂದ ಆ ನಿಂಬೆರಸ ಮತ್ತೆ ಸಕ್ರಿಯ ಮಿಶ್ರಣವನ್ನು ಮೆಹಂದಿಯ ಮೇಲೆ ಹಚ್ಚುತ್ತಾ ಹೋಗ್ಬೇಕು ಅದು ಸ್ಪ್ರೆಡ್ ಆಗೋದಿಕ್ಕೆ ಬಿಡ್ಬಾರ್ದು ಜಸ್ಟ್ ಟಾಪ್ ಮಾಡ್ತಾ ಹೋಗ್ಬೇಕು ಹೀಗೆ ಅರ್ಧ ಗಂಟೆಗೊಂದು ಸಲ ಮಾಡುವುದರಿಂದ ಮೆಹಂದಿಯ ಬಣ್ಣ ಹೆಚ್ಚು ಡಾರ್ಕ್ ಆಗುತ್ತೆ.
ಲವಂಗ
ಮೆಹಂದಿ ಹಚ್ಚಿ ಅರ್ಧ ಗಂಟೆ ಆದ್ಮೇಲೆ ಒಂದು ಪ್ಯಾನ್ ಅಲ್ಲಿ ಎಂಟರಿಂದ ಹತ್ತು ಲಂಗವಂಗವನ್ನು ಹಾಕಿ ಬಿಸಿ ಆಗೋದಕ್ಕೆ ಬಿಡಬೇಕು… ಲವಂಗ ಬಿಸಿ ಆಗ್ತಾ ಹೋದಂತೆ ಅದರಿಂದ ಬರುವಂತಹ ಹೊಗೆ ಅಥವಾ ಸ್ಮೋಕ್ ಏನಿರುತ್ತೆ ಅದರ ಮೇಲೆ ನಾವು ಕೈಗಳನ್ನ ಇಡಬೇಕು.. ಆ ಪ್ಯಾನ್ ಗೆ ಕೈ ತಾಗಿದ್ರೆ ಸುಡೋದಂತು ಪಕ್ಕ. ಹಾಗಾಗಿ ಹೊಗೆ ಹತ್ರ ಅಥವಾ ಹೊಗೆಯ ಮೇಲೆ ಕೈಯನ್ನು ಆಡಿಸಬೇಕು, ಲವಂಗದಲ್ಲಿ ಉಷ್ಣತೆ ಅಂಶ ಹೆಚ್ಚಿರುವುದರಿಂದ ಮೆಹಂದಿಯ ಬಣ್ಣ ತುಂಬಾನೇ ಗಾಢವಾಗಿ ಬರುತ್ತೆ.
ಸಾಸಿವೆ ಎಣ್ಣೆ
ಕೈಗಳಿಗೆ ಹಚ್ಚಿದ ಮೆಹಂದಿಯನ್ನು ತೆಗೆದ ನಂತರ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಮೆಹಂದಿಯ ಬಣ್ಣ ಹೆಚ್ಚಾಗುತ್ತದೆ ಜೊತೆಗೆ ತುಂಬಾ ದಿನಗಳ ಕಾಲ ಮೆಹಂದಿ ಹಾಗೆ ಉಳಿಯುತ್ತದೆ ಇದನ್ನು ಸಾಕಷ್ಟು ಜನ ಕಾಮನ್ ಆಗಿ ಮಾಡುವಂತಹ ಒಂದು ಸಿಂಪಲ್ ಟ್ರಿಕ್ ಆಗಿದೆ..
ಮೆಹಂದಿ ಒಣಗಿದ ಮೇಲೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮೆಹಂದಿಯನ್ನು ತೆಗೆಯುವುದರಿಂದ ನಿಮ್ಮ ಮೆಹಂದಿ ಬಣ್ಣ ಗಾಢವಾಗಿ ಬರುತ್ತದೆ ನಂತರ ಮೆಹಂದಿ ಹಚ್ಚಿದ ಜಾಗಕ್ಕೆ ಎಣ್ಣೆಯನ್ನು ಹಚ್ಚಿ ಹಾಗೆ ಬಿಡುವುದರಿಂದ ಲಾಂಗ್ ಲಾಸ್ಟಿಂಗ್ ಮೆಹಂದಿ ನಿಮ್ಮದಾಗುತ್ತದೆ