ಕೇಂದ್ರ ಸರ್ಕಾರವು ವಿದೇಶಗಳಿಗೆ ರಕ್ಷಣಾ ರಫ್ತುಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ದ್ವೀಪ ರಾಷ್ಟ್ರದ ಪೊಲೀಸ್ ಪಡೆಗೆ ಒಂದು ಸುಧಾರಿತ ಲಘು ಹೆಲಿಕಾಪ್ಟರ್ (ALH Mk-III) ರಫ್ತುಗಾಗಿ ಮಾರಿಷಸ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
HAL ನಿರ್ಮಿತ ALH ಮತ್ತು ಡೋರ್ನಿಯರ್-228 ವಿಮಾನಗಳನ್ನು ನಿರ್ವಹಿಸುತ್ತಿರುವ ಮಾರಿಷಸ್ ಸರ್ಕಾರವು ಮೂರು ದಶಕಗಳಿಂದ ದೀರ್ಘಾವಧಿಯ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದು ಬೆಂಗಳೂರು ಪ್ರಧಾನ ಕಚೇರಿ ಬುಧವಾರ ತಿಳಿಸಿದೆ.
ಹೆಲಿಕಾಪ್ಟರ್ ವಿಭಾಗ-ಎಚ್‌ಎಎಲ್‌ನ ಜನರಲ್ ಮ್ಯಾನೇಜರ್ ಬಿ ಕೆ ತ್ರಿಪಾಠಿ ಮತ್ತು ಗೃಹ ವ್ಯವಹಾರಗಳ ಕಾರ್ಯದರ್ಶಿ, ಪ್ರಧಾನ ಮಂತ್ರಿ ಕಚೇರಿ, ಮಾರಿಷಸ್ ಸರ್ಕಾರ, ಒ ಕೆ ದಾಬಿದಿನ್ ಅವರು ಕಾನ್ಪುರದಲ್ಲಿರುವ ಎಚ್‌ಎಎಲ್‌ನ ಸಾರಿಗೆ ವಿಮಾನ ವಿಭಾಗದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿಸಿದೆ.
ALH Mk-III ವಿಶೇಷತೆ
ಬಹು-ಮಿಷನ್ ಹೆಲಿಕಾಪ್ಟರ್ ಇದಾಗಿದ್ದು, 5.5 ಟನ್ ತೂಕವಿದೆ. HAL ಪ್ರಕಾರ “ಭಾರತ ಮತ್ತು ವಿದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳ ವೇಳೆ ಹಲವಾರು ಜೀವ ರಕ್ಷಣಾ ಕಾರ್ಯಾಚರಣೆಗೆ ಇದರ ಉಪಯುಕ್ತತೆ ಇದ್ದು, ಈಗಾಗಲೇ ಇದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈ ಹೆಲಿಕಾಪ್ಟರ್‌ನ ಲೈಫ್ ಗಮನಿಸಿದರೆ ಈವರೆಗೂ ಸುಮಾರು 3.40 ಲಕ್ಷ ಗಂಟೆಗಳ ವರೆಗೂ ಹಾರಾಟ ನಡೆಸಿದೆ, ಎಂದು ಎಂದಿದೆ.