ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಅಂದ್ರೆ ಕೂದಲನ್ನು ಆರೋಗ್ಯವಾಗಿ ಇಡಬೇಕು,ಪ್ರತಿದಿನ ಕಾಳಜಿಯನ್ನ ವಹಿಸುವುದು ಕೂಡ ಪ್ರಮುಖ ಪಾತ್ರವಾಗಿರುತ್ತದೆ. ಆದ್ರೆ ಕೆಲವು ಹೆಣ್ಣು ಮಕ್ಕಳು ಕೂದಲು ತುಂಬಾನೇ ಉದ್ದವಾಗಿರಬೇಕೆಂದು ಟ್ರಿಮ್ ಮಾಡಿಸುವುದನ್ನು ಕೂಡ ಬಿಟ್ಟುಬಿಡುತ್ತಾರೆ ಆದರೆ ಮೂರು ತಿಂಗಳಿಗೊಮ್ಮೆ ಕನಿಷ್ಠ ಆರು ತಿಂಗಳಿಗೊಮ್ಮೆ ಕೂದಲನ್ನು ಮಾಡಿಸಲೇಬೇಕು. ಹೀಗೆ ಟ್ರಿಮ್ ಮಾಡಿಸುವುದರಿಂದ ಕೂದಲಿಗೆ ಸಾಕಷ್ಟು ಪ್ರಯೋಜನಗಳಿವೆ.
- ಕೆಲವರು ಸ್ಪ್ಲಿಟ್ ಎಂಡ್ಸ್ ತೆಗಿಸುವುದು ಕಡಿಮೆ. ಆದರೆ ಕೂದಲನ್ನು ಟ್ರಿಮ್ ಮಾಡಿಸುವುದರಿಂದ ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತದೆ ಜೊತೆಗೆ ಫ್ರಿಜ್ಜಿ ಹೇರ್ ಕೂಡ ಇರುವುದಿಲ್ಲ. ಸ್ಪ್ಲಿಟ್ ಎಂಡ್ಸ್ ಹೆಚ್ಚಿದ್ದರೆ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ.
- ಕೂದಲು ಬೆಳೆಯುತ್ತಾ ಬಳಿಯುತ್ತಾ, ಮೈನ್ಟೈನ್ ಸರಿಯಾಗಿ ಮಾಡದಿದ್ದಲ್ಲಿ ಬ್ರೇಕೆಜಸ್ ಹಾಗೂ ಡ್ಯಾಮೇಜ್ ಜಾಸ್ತಿ ಆಗುತ್ತದೆ ಹಾಗಾಗಿ ಟ್ರಿಮ್ ಮಾಡಿಸುವುದು ಅತ್ಯಗತ್ಯ ಇದರಿಂದ ಕೂದಲು ಚೆನ್ನಾಗಿರುತ್ತೆ.
- ಟ್ರಿಮ್ ಮಾಡುವುದರಿಂದ ಕೂದಲಿನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ, ಒಡೆಯುವ ಅಪಾಯವನ್ನು ಕಡಿಮೆ ಮಾಡುತ್ತದೆ.
- ಮೂರು ತಿಂಗಳಿಗೊಮ್ಮೆ ಟ್ರಿಮ್ ಮಾಡಿಸುವುದರಿಂದ ಕೂದಲಿನ ಟೆಕ್ಸ್ಚರ್ ಹಾಗೂ ಶೈನ್ ಹೆಚ್ಚಾಗುತ್ತದೆ ಹಾಗೂ ಮೇಂಟೇನ್ ಮಾಡಲು ಸುಲಭ.