ಮದುವೆ(Marriage) ಸಂಭ್ರಮ ಬಂತು ಅಂದ್ರೆ ನಮ್ಮ ಹೆಣ್ಣು ಮಕ್ಕಳು ಯಾವ ರೇಂಜಿಗೆ ರೆಡಿಯಾಗುತ್ತಾರೆ ಕೇಳ್ತೀರಾ ದುಬಾರಿ ಸೀರೆ ಅದಕ್ಕೆ ಮ್ಯಾಚ್ ಆಗುವಂತ ಜೆವೆಲ್ಸ್(Jewels) ಸಕ್ಕತ್ತ ಲುಕ್ಕು ಕೊಡುವ ಮೇಕಪ್(Make Up) ಇಷ್ಟೆಲ್ಲಾ ಮಾಡಿಸಿದ ಮೇಲೆ ಹೇರ್ ಸ್ಟೈಲ್(Hair Style) ಮಾಡಿಸ್ದೆ ಹಾಗೆ ಇರುವುದಕ್ಕೆ ಆಗುತ್ತಾ ಅದು ಕೂಡ ತುಂಬಾನೇ ವಿಭಿನ್ನವಾಗಿರುತ್ತೆ(Different).
ಹೇರ್ ಸ್ಟೈಲ್ ಅಂತ ಬಂದಾಗ ಮುಖ್ಯವಾದ ವಿಚಾರವನ್ನು ಹೇಳಬೇಕಿತ್ತು.ಮೊದಲೆಲ್ಲಾ ಹೆಣ್ಣುಮಕ್ಕಳಿಗೆ ಉದ್ಧವಾದ ಕೂದಲು ಇರ್ತಾ ಇತ್ತು .ಯಾವ ರೀತಿ ಹೇರ್ ಸ್ಟೈಲ್ ಬೇಕಾದ್ರು ಮಾಡಿಸಿಕೊಳ್ಳಬಹುದಿತ್ತು. ಆದರೆ ಈಗ ಹಾಗಿಲ್ಲ ಹೆಚ್ಚಿನ ಜನಕ್ಕೆ ಶಾರ್ಟ್ ಹೇರ್(Short Hair) ಇರುತ್ತೆ ಮದುವೆಗೆ ಅದರಲ್ಲೂ ಟ್ರೆಡಿಷನಲ್ ವೇರ್(Traditional Wear) ಗೆ ಉದ್ದ ಕೂದಲು ಚೆಂದ. ಹಾಗಾಗಿ ಹೆಣ್ಣು ಮಕ್ಕಳು ಹೇರ್ ಎಕ್ಸ್ಟೆಂಶನ್(Hair Extension) ನ ಬಳಸ್ತಾರೆ. ಸದ್ಯಕ್ಕೆ ಮಾರ್ಕೆಟ್ ನಲ್ಲಿ ವೆರೈಟಿಸ್(varieties) ಆಫ್ ಹೇರ್ ಎಕ್ಸ್ಟೆಂಶನ್ಸ್ ಬಂದಿದೆ.ಯಾವ ರೀತಿ ಇದೆ ಅನ್ನೋದರ ಡಿಟೇಲ್ಸ್(Details) ಹೀಗಿದೆ..
ಎಂಥಿಕ್ ಹೇರ್ ಎಕ್ಸ್ಟೆಂಶನ್
ಹೆಣ್ಣು ಮಕ್ಕಳಿಗೆ ಶಾರ್ಟ್ ಹೇರ್(Short Hair) ಇದ್ರೆ ಜಡೆ ಹಾಕೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ. ಹಾಗಾಗಿ ಮಾರ್ಕೆಟ್(Market) ನಲ್ಲಿ ನಿಮಗೆ ಉದ್ದವಾದ ಚವಲಿ ಸಿಗುತ್ತೆ. ಅದನ್ನ ತಂದು ನೀವು ನಿಮ್ಮ ಕೂದಲಿನ ಜೊತೆ ಹೆಣದು ಜಡೆಯನ್ನು ಹಾಕಬಹುದು ಇಲ್ಲವಾದಲ್ಲಿ ಕಂಪ್ಲೀಟ್ ಆಗಿ ರೆಡಿಯಾಗಿರುವ ಜೆಡೆ ಕೂಡಾ ಸಿಗತ್ತೆ ಅದನ್ನ ಜಸ್ಟ್ ಫಿಕ್ಸ್(Just Fix) ಮಾಡಿದ್ರೆ ಸಾಕು ಸೂಪರ್ ಲುಕ್ ನೀಡುತ್ತದೆ.
ಕ್ಲಿಪ್ ಹೇರ್ ಎಕ್ಸ್ಟೆಂಶನ್(Clip Hair Extension)
ಇದೊಂದು ಕಾಮನ್(Common) ಅಂಡ್ ಈಜಿ(Easy) ಹೇರ್ ಎಕ್ಸ್ಟೆಂಶನ್ ನಿಮ್ಮ ಕೂದಲನ್ನು ಎರಡು ಭಾಗಗಳಾಗಿ ವಿಭಜಿಸಿ ಈ ಕ್ಲಿಪ್ ಗಳನ್ನು(Clip) ನಿಮ್ಮ ಕೂದಲು ಉದ್ದವಾಗಿ ಕಾಣಿಸುತ್ತದೆ ಅದನ್ನು ವೇರ್ ಮಾಡೋದಕ್ಕೂ ಹಾಗೂ ರಿಮೂವ್(Remove) ಮಾಡೋದಕ್ಕೂ ತುಂಬಾನೇ ಸುಲಭ ಈ ಹೇರ್ ಎಕ್ಸ್ಟೆಂಶನ್ ಅನ್ನ ಹಾಕಿಕೊಂಡು ನಿಮಗೆ ಬೇಕಾದ ಹೇರ್ ಸ್ಟೈಲ್ ಅನ್ನ ನೀವು ಮಾಡಿಕೊಳ್ಳಬಹುದು. ಶಾರ್ಟ್ ಹೇರ್ ಇದ್ದವರಿಗೆ ತಮ್ಮ ಕೂದಲು ಉದ್ದವಾಗಿ ಕಾಣಿಸುವುದಕ್ಕೆ ಹಾಗೂ ತುಂಬಾ ನ್ಯಾಚುರಲ್(Natural) ಆಗಿ ಕಾಣಿಸೋದಕ್ಕೆ ಈ ಕ್ಲಿಪ್ ಹೇರ್ ಎಕ್ಸ್ಟೆಂಶನ್ ತುಂಬಾನೆ ಹೆಲ್ಪ್ ಫುಲ್(Helpful).
ವೇವಿ ಹೇರ್ ಎಕ್ಸ್ಟೆಂಶನ್
ಈ ವೇವಿ ಹೇರ್ ಎಕ್ಸ್ಟೆಂಶನ್ ನೋಡೋದಕ್ಕೆ ಅದ್ಭುತವಾಗಿ ಕಾಣಿಸುತ್ತದೆ. ಜೊತೆಗೆ ನ್ಯಾಚುರಲ್ ಲುಕ್ಕನ್ನು ನೀಡುತ್ತಿದೆ. ಲಾಂಗ್ ಟರ್ಮ್(Long Term) ವೇರ್ ಇದು ಅಂತ ಹೇಳಿದ್ರು ತಪ್ಪಾಗಲ್ಲ. ಈ ವೇವಿ ಹೇರ್ ಇಂಡೊ ವೆಸ್ಟರ್ನ್ ಡ್ರೆಸ್(Western Wear) ಗಳಿಗೆ ಅದ್ಬುತವಾಗಿ ಲುಕ್ ನೀಡುತ್ತೆ ಹಾಗೂ ಮದುವೆ ಸಮಾರಂಭಗಳಲ್ಲಿ ರಿಸೆಪ್ಶನ್ ಲುಕ್(Reception Look) ಗೆ ಹೇಳಿ ಮಾಡಿಸಿದಂತಹ ಹೇರ್ ಸ್ಟೈಲ್ ನಿಮ್ಮದಾಗುತ್ತೆ.
ಇದರ ಜೊತೆಗೆ ಮೆಸ್ಸಿ ಹೇರ್(Messy Hair) ಎಕ್ಸ್ಟೆಂಶನ್ . ಕರ್ಲಿ ಎಕ್ಸ್ಟೆಂಶನ್(Curly Extension), ಕ್ರಿಸ್ಟಲ್(Crystal) ಅಂಡ್ ಪರ್ಲ್ ಡಿಸೈನ್(Pearl Design) ಅನ್ನು ಹೊಂದಿರುವಂತಹ ಎಕ್ಸ್ಟೆಂಶನ್. ಹೀಗೆ ಸಾಕಷ್ಟು ಹೇರ್ ಎಕ್ಸ್ಟೆಂಶನ್ ಗಳು ಮಾರ್ಕೆಟ್ನಲ್ಲಿ(Market) ಟ್ರೆಂಡ್ ಕ್ರಿಯೇಟ್(Trend Create) ಮಾಡಿದೆ. ನಿಮ್ಮ ಮೇಕಪ್ ಹಾಗೂ ಜ್ಯುವೆಲ್ಸ್ ಗೆ ಮ್ಯಾಚ್ ಆಗುವಂಥ ಹೇರ್ ಎಕ್ಸ್ಟೆಂಶನ್ ಗಳನ್ನು(Hair Extension) ನೀವು ಸೆಲೆಕ್ಟ್(Select) ಮಾಡಬಹುದು.