ಹೆಚ್ಚಿನ ಹೆಣ್ಣು ಮಕ್ಕಳಿಗೆ ಉದ್ಧವಾದ ದಟ್ಟವಾದ ಹಾಗೂ ಕಪ್ಪು ಕೂದಲು ಇರಬೇಕು ಎಂಬ ಆಸೆ ಇರುತ್ತದೆ ಆದರೆ ಕೆಲವೊಬ್ಬರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಕೂದಲು ಬಿಳಿಯಾದಾಗ ಹೇರ್ ಡೈ ಗಳನ್ನ ಬಳಸುತ್ತಾರೆ. ಕೂದಲಿಗೆ ಬಣ್ಣವನ್ನ ಹಚ್ಚುತ್ತಾರೆ ಇದರಿಂದಾಗಿ ತಕ್ಷಣಕ್ಕೆ ಕೂದಲು ಕಪ್ಪಾಗಬಹುದು ನಿಮಗೆ ಖುಷಿ ಸಿಗಬಹುದು ಆದರೆ ಇದರಲ್ಲಿ ಬಳಸಿರುವಂತಹ ಕೆಮಿಕಲ್ ನಿಂದ ಕೂದಲು ಹಾಳಾಗುತ್ತದೆ. ನ್ಯಾಚುರಲ್ ಆಗಿ ನಿಮ್ಮ ಕೂದಲು ಕಪ್ಪಾಗಿ ಹಾಗೂ ದಟ್ಟವಾಗಿ ಬೆಳೆಯಲು ಈ ಮದ್ದುಗಳನ್ನ ಟ್ರೈ ಮಾಡಿ..
ಬ್ಲಾಕ್ ಟೀ
ಬ್ಲಾಕ್ ಟೀ ಯಲ್ಲಿ ಟ್ಯಾನಿಸ್ ಎಂಬ ಅಂಶವಿರುತ್ತದೆ.ಇದು ನ್ಯಾಚುರಲ್ ಆಗಿ ನಿಮ್ಮ ಕೂದಲನ್ನು ತಪ್ಪು ಮಾಡಿತ್ತದೆ ಹಾಗೂ ಹಾಗೂ ಕೂದಲ ಶೈನ್ ಜಾಸ್ತಿ ಆಗುತ್ತದೆ .ಮುಖ್ಯವಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.
ರೋಸ್ ಮೇರಿ
ರೋಸ್ ಮೇರಿಯಾ ಸುಹಾಸನೆ ಅದ್ಭುತ, ಇದರ ಬೇರಿನಿಂದ ತ್ವಚೆಗೆ ಹಾಗೂ ಕೂದಲಿಗೆ ಬೇಕಾದ ಸಾಕಷ್ಟು ಪ್ರಾಡಕ್ಟ್ ಗಳನ್ನ ತಯಾರಿಸಲಾಗುತ್ತದೆ. ರೋಸ್ಮರಿ ಬೇರನ್ನು ಎಣ್ಣೆಯೊಂದಿಗೆ ಚೆನ್ನಾಗಿ ಕುದಿಸಿ ಬೆಚ್ಚಗಾದ ನಂತರ ಕೂದಲು ಹಾಗೂ ತಲೆಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಚೆನ್ನಾಗಿ ಮಸಾಜ್ ಮಾಡಿ ನಂತರ ತಲೆಗೆ ಸ್ನಾನ ಮಾಡುವುದರಿಂದ ಸ್ಕ್ಯಾಲ್ಪ್ ನಲ್ಲಿ ಬ್ಲಡ್ ಸರ್ಕ್ಯುಲೇಶನ್ ಆಗುತ್ತದೆ ಕಪ್ಪು ಹಾಗೂ ದಟ್ಟವಾದ ಕೂದಲು ನಿಮ್ಮದಾಗುತ್ತದೆ.
ಮೆಹಂದಿ
ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕಪ್ಪು ಹಾಗೂ ದಟ್ಟವಾದ ಕೂದಲು ನಿಮ್ಮದಾಗುತ್ತದೆ ಜೊತೆಗೆ ಶೈನ್ ಬರುತ್ತದೆ.ಕೂದಲ ಬೆಳವಣಿಗೆಗೆ ಮೆಹಂದಿ ಉತ್ತಮ ರೆಮಿಡಿ.
ನೆಲ್ಲಿಕಾಯಿ
ಹಿಂದಿನ ಕಾಲದಿಂದಲೂ ನೆಲ್ಲಿಕಾಯಿಯನ್ನ ಎಣ್ಣೆಯೊಂದಿಗೆ ಚೆನ್ನಾಗಿ ಕುದಿಸಿ ನಂತರ ಕೂದಲಿಗೆ ಹಚ್ಚುತ್ತಿದರು. ಇದರಿಂದ ನ್ಯಾಚುರಲ್ ಆಗಿ ಕೂದಲು ಕಪ್ಪಾಗುತ್ತದೆ ಹಾಗೂ ಸ್ಟ್ರಾಂಗ್ ಹೇರ್ ನಿಮ್ಮದಾಗುತ್ತದೆ..