ನಿಮ್ಮ ತಲೆ ಕೂದಲು ಉದ್ದವಾಗಿ ಹಾಕಿ ಹಾಗೂ ಸಮೃದ್ಧವಾಗಿ ಬೆಳೆಯಬೇಕು ಅಂದ್ರೆ ಎಷ್ಟೇ ಕಾಳಜಿ ವಹಿಸಿದ್ದರು ಸಾಕಾಗುವುದಿಲ್ಲ. ಗುಂಗುರು ಕೂದಲಿದ್ರು ಅಥವಾ ಸ್ಟ್ರೇಟ್ ಹೇರ್ ಇದ್ರೂ ಪ್ರತಿಯೊಂದು ಹಂತದಲ್ಲೂ ಕೂಡ ನೀವು ನಿಮ್ಮ ಕೂದಲ ಬಗ್ಗೆ ಕಾಳಜಿ ವಹಿಸುವುದು ಒಳಿತು.

ವಾರಕ್ಕೆ ಎರಡರಿಂದ ಮೂರು ಬಾರಿ ತಲೆಗೆ ಸ್ನಾನವನ್ನು ಮಾಡ್ತಾರೆ, ಇಂತಹ ಸಂದರ್ಭದಲ್ಲಿ ಸ್ನಾನದ ಮೊದಲು ಮತ್ತು ನಂತರ ಯಾವ ರೀತಿ ಪ್ರಿಕಾಶನ್ಸ್ ನ ತಗೋಬೇಕು ಅನ್ನೋದರ ಡೀಟೇಲ್ಸ್ ಹೀಗಿದೆ.ಈ ಪ್ರಿಕಾಶನ್ಸ್ ತಗೋಳೋದ್ರಿಂದ ಈ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಯಾವುದೇ ರೀತಿಯ ಡ್ಯಾಂಡ್ರಫ್ ಇಲ್ಲದೆ ಉದುರುವ ಸಮಸ್ಯೆ ಇಲ್ಲದೆ ಸಮೃದ್ಧವಾಗಿ ಬೆಳೆಯುತ್ತದೆ.
ಎಣ್ಣೆ
ತಲೆಗೆ ಸ್ನಾನ ಮಾಡುವ ಮೊದಲು ತಲೆಗೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದು ಉತ್ತಮ. ಎಣ್ಣೆ ಹಾಕದೆ ಹಾಗೆ ಸ್ನಾನ ಮಾಡಿದರೆ ನಿಮ್ಮ ಕೂದಲು ರಫ್ ಆಗುತ್ತದೆ ಹಾಗೂ ಡ್ಯಾಂಡ್ರಫ್ ಕೂಡ ಶುರುವಾಗುತ್ತದೆ ಮತ್ತು ಕೂದಲು ರಫ್ ಮತ್ತು ಡ್ಯಾಮೇಜ್ ಆಗುತ್ತದೆ. ನೀವು ತಲೆಗೆ ಸ್ನಾನ ಮಾಡುವ ಒಂದು ಗಂಟೆ ಅಥವಾ ಎರಡು ಗಂಟೆ ಮೊದಲು ತಲೆಗೆ ಎಣ್ಣೆಯನ್ನು ಹಚ್ಚಿ ಹಾಗೆ ಬಿಟ್ಟು ನಂತರ ಸ್ನಾನ ಮಾಡಿ.

ಸಾಬೂನು ಅಥವಾ ಶಾಂಪು
ತಲೆಗೆ ಸ್ನಾನ ಮಾಡುವಾಗ ಕೆಲವೊಬ್ಬರು ದಿನಕ್ಕೊಂದು ಸೋಪ್ ಅಥವಾ ಶಾಂಪೂವನ್ನು ಬಳಸುತ್ತಾರೆ ಹೀಗೆ ಮಾಡುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ನೀವು ನಿಮ್ಮ ಕೂದಲಿಗೆ ಸೆಟ್ ಆಗುವಂಥ ಒಂದು ಶಾಂಪೂವನ್ನು ಬಳಸುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ. ಹಾಗೂ ಟ್ರಾವೆಲ್ ಮಾಡುವಾಗ ನಿಮ್ಮ ಸೋಪು ಅಥವಾ ಶಾಂಪೂವನ್ನು ಕ್ಯಾರಿ ಮಾಡುವುದು ಉತ್ತಮ.ಇತರರು ಬಳಸಿದ ಸೋಪನ್ನ ಬಳಸುವುದರಿಂದ ಕೂಡ ನಿಮ್ಮಲ್ಲಿ ಡ್ಯಾಂಡ್ರಫ್ ಆಗುವಂತ ಚಾನ್ಸಸ್ ಹೆಚ್ಚಿರುತ್ತದೆ.

ಬಿಸಿನೀರು
ತಲೆಗೆ ಸ್ನಾನ ಮಾಡುವಾಗ ಹೆಚ್ಚು ಜನ ಅತಿಯಾದ ಬಿಸಿ ನೀರನ್ನು ಬಳಸ್ತಾರೆ ಕೆಲವರಿಗೆ ಬಿಸಿ ನೀರನ್ನ ಬಳಸುವುದು ಅಭ್ಯಾಸವಾಗಿರುತ್ತದೆ ಇನ್ನು ಕೆಲವರು ತಲೆಯ ಎಣ್ಣೆಯನ್ನ ಹೋಗಲಾಡಿಸುವುದಕ್ಕೆ ಹೆಚ್ಚು ಬಿಸಿ ನೀರನ್ನು ಬಳಸ್ತಾರೆ. ನಮ್ಮ ತ್ವಚೆಯಾಗಲಿ ಕೂದಲಿಗಾಗಲಿ ಹೆಚ್ಚು ಬಿಸಿ ನೀರನ್ನ ಬಳಸುವುದರಿಂದ ಡ್ಯಾಮೇಜ್ ಆಗುವುದು ಖಂಡಿತ, ಕೂದಲು ಉದುರುವುದು ಸಹಜ ಹಾಗಾಗಿ ಉಗುರು ಬೆಚ್ಚ ನೀರನ್ನ ಬಳಸಿ ತಲೆಗೆ ಸ್ನಾನ ಮಾಡುವುದರಿಂದ ದಟ್ಟವಾದ ಕೂದಲು ನಿಮ್ಮದಾಗುತ್ತದೆ.

ಕೂದಲನ್ನು ಒಣಗಿಸುವುದು
ತಲೆಗೆ ಸ್ನಾನ ಮಾಡಿದ ನಂತರ ಕೂದಲನ್ನು ಸರಿಯಾದ ರೀತಿಯಲ್ಲಿ ಒಣಗಿಸುವುದು ಉತ್ತಮ. ನಿಮ್ಮ ಕೂದಲು ವೆಟ್ ಇದ್ರೆ ಹೇರ್ ಫಾಲ್ ಆಗುವಂತದ್ದು ಜಾಸ್ತಿ, ಇದರ ಜೊತೆಗೆ ಕೂದಲಿನಲ್ಲಿ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗುತ್ತದೆ. ತಲೆಗೆ ಸ್ನಾನ ಮಾಡಿದಾಗ ನಿಮ್ಮ ಕೂದಲಿನ ಬುಡ ತುಂಬಾನೇ ಮೃದುವಾಗಿರುತ್ತದೆ,ಹಾಗಾಗಿ ಚೆನ್ನಾಗಿ ಒಣಗಿಸ ಬೇಕು.. ಎಷ್ಟೋ ಜನ ಕೂದಲನ್ನು ಒಣಗಿಸಲು ಡ್ರೈಯರನ್ನು ಬಳಸುತ್ತಾರೆ ಕೆಲವು ಬಾರಿ ಬಳಸಿದರೆ ತೊಂದರೆ ಇಲ್ಲ ,ಯಾವಾಗಲೂ ಕೂಡ ಡ್ರೈಯರನ್ನೇ ಬಳಸ್ತಾ ಇದ್ರೆ ಕೂದಲು ಹಾಳಾಗುತ್ತದೆ. ಬದಲಿಗೆ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಒಣಗಿಸುವುದು ಉತ್ತಮ.

ಈ ಸ್ಟೆಪ್ಸ್ ಗಳನ್ನ ಫಾಲೋ ಮಾಡುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ನಿಮ್ಮ ಕೈಯಿಂದಲೇ ನಿಮ್ಮ ಕೂದಲನ್ನು ಹಾಳು ಮಾಡಿಕೊಳ್ಳುತ್ತೀರಾ.