ಏಪ್ರಿಲ್ ತಿಂಗಳ ಎರಡನೇ ವಾರ ಫೆಸ್ಟಿವ್ ವೀಕ್ ಅಂದ್ರೆ ತಪ್ಪಾಗಲ್ಲ .. ಆ ವಾರದಲ್ಲಿ ಮೊದಲಿಗೆ ಯುಗಾದಿ ಹಬ್ಬ ಬಂದ್ರೆ ನಂತರ ರಂಜಾನ್ ಹಬ್ಬ.. ಒಂದರ ಹಿಂದೆ ಒಂದು ಹಬ್ಬ ಬಂದಿರುವುದೇ ಒಂದು ರೀತಿಯ ಸಂಭ್ರಮ.. ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರು ಇಷ್ಟಪಟ್ಟು ಧರಿಸುವಂತದ್ದು ಸಾಂಪ್ರದಾಯಿಕ ಉಡುಗೆಯನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಎಥ್ನಿಕ್ ಕಲೆಕ್ಷನ್ ಲಗ್ಗೆ ಇಟ್ಟಿವೆ..ಇಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಾಗಿರಬಹುದು ವಯಸ್ಸಾದವರಿಗೆ ಹಾಗೂ ಪುಟಾಣಿ ಮಕ್ಕಳಿಗೂ ಕೂಡ ವೆರೈಟಿ ಬಟ್ಟೆಗಳು ರಾರಾಜಿಸುತ್ತಿವೆ..
ಯುಗಾದಿ ಹಬ್ಬದ ವಿಶೇಷವಾಗಿ ಮಾರುಕಟ್ಟೆಯಲ್ಲಿ ಹೆಣ್ಣು ಮಕ್ಕಳಿಗಂತೂ ಆಪ್ಷನ್ಸ್ ತುಂಬಾನೇ ಇದೆ ಅದರಲ್ಲೂ ಸಿಲ್ಕ್ ಸಾರಿ,ಸಿಂಪಲ್ ಸಾರಿ, ಬಾರ್ಡರ್ ಸಾರಿ , ಉದ್ದ ಲಂಗ, ಲೆಹೆಂಗಾ, ಗ್ರಾಂಡ್ ಚೂಡಿದಾರ್ ದವಣಿ ಲಂಗ , ರೇಷ್ಮೆ ಲಂಗ ಹೀಗೆ ಸಾಕಷ್ಟು ಬಗೆಯ ಬಟ್ಟೆಗಳಿದ್ರ… ನಮ್ ಗಂಡು ಮಕ್ಕಳಿಗೆ ರೇಷ್ಮೆ ಪಂಚೆ ,ಶಲ್ಯ ,ಶರ್ಟ್ ಗಳು ಗ್ರಾಂಡ್ ಹಾಗೂ ಸಿಂಪಲ್ ಕುರ್ತಾಗಳು ಹಾಗೂ ಹೊಸ ಪ್ಯಾಟರ್ನ್ ಶೇರ್ವಾನಿಗಳು ಕೂಡ ಮಾರುಕಟ್ಟೆಯಲ್ಲಿವೆ..
ಇನ್ನು ರಾಮ್ಜಾನ್ ಹಬ್ಬದ ಪ್ರಯುಕ್ತ ಹೆವಿ ವರ್ಕ್ ಇರುವಂತ ಬಟ್ಟೆಗಳು ಮಾರ್ಕೆಟ್ ಗೆ ಹೊಸ ಮೆರಗು ನೀಡಿದೆ..ಡಾರ್ಕ್ ಅಂಡ್ ಹೆವಿ ಡಿಸೈನರ್ ಲೆಹಂಗಾ , ಶರಾರ ,ಸಲ್ವಾರ್ ಕಮೀಜಾ ಸೆಟ್ ,ಅನಾರ್ಕಲಿ ಕುರ್ತಾಸ್ ಹಾಗೂ ಸೀರೆ..ಪುರುಷರಿಗೆ ಗ್ರಾಂಡ್ ಕುರ್ತಾಗಳಿವೆ..
ಇನ್ನು ಮಕ್ಕಳ ಬಟ್ಟೆನ ನೋಡದೆ ಒಂದು ರೀತಿಯ ಖುಷಿ ಅದರಲ್ಲೂ ಕೂಡ ಪುಟ್ಟು ಪುಟ್ಟದಾಗಿ ಇರುವಂತ ಉದ್ದ ಲಂಗ ,ಗ್ರಾಂಡ್ ಫ್ರಾಕ್ ,ಕ್ರಾಪ್ ಟಾಪ್ ಹಾಗೂ ಸ್ಕರ್ಟ್ ಗಳು ಜಗಮಗಿಸ್ತಾಯಿವೆ..
ಎನೇ ಅಂದ್ರು ಈ ಫೆಸ್ಟಿವ್ ಸೀಸನ್ ಅಲ್ಲಿ ಬರುವಂತಹ ಕಲೆಕ್ಷನ್ ಗಳು ಬೇರೆ ಯಾವ ಸೀಸನ್ ಅಲ್ಲೂ ಕೂಡ ಕಾಣೋದಿಕ್ಕೆ ಸಿಗಲ್ಲ.. ಯಾವ ಅಂಗಡಿಗಳಲ್ಲಿ ಅಥವಾ ಮಾರ್ಕೆಟ್ ಗಳಲ್ಲಾಗ್ಲಿ, ಸಾಕಷ್ಟು ಬಗೆಯ ಬಟ್ಟೆಗಳನ್ನ ನಾವು ನೋಡಬಹುದು ಜನರು ಕೂಡ ಕರೀದಿಸ್ತಿದ್ದಾರೆ.