ಕೋವಿಡ್ ಆತಂಕ ಕಡಿಮೆಯಾಯ್ತು ಅಂತಾ ಎಂದುಕೊಳ್ಳುವಷ್ಟರಲ್ಲಿ ಎಚ್3ಎನ್2 ವೈರಸ್ ದೇಶಕ್ಕೆ ವಕ್ಕರಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ 3ಎನ್2 ಪ್ರಕರಣಗಳಲ್ಲಿ ಏರಿಕೆ ಕಂಡು ಬರ್ತಿದೆ.ಇತ್ತ ಕೋವಿಡ್ ಪ್ರಕರಣಗಳು ಏರಿಕೆ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಹೆಚ್ 3 ಎನ್ 2 ಲಕ್ಷಣಗಳು :
-ಚಳಿ ಜ್ವರ
-ವಾಕರಿಕೆ
-ವಾಂತಿ
-ಕೀಲು ನೋವು
-ಗಂಟಲು ನೋವು
-ಅತಿಯಾದ ಕೆಮ್ಮು
-ಮಲಗಲು ತೊಂದರೆ
-ಉಸಿರಾಟದ ತೊಂದರೆ
-ಆಯಾಸ
-ಅತಿಸಾರ

ಮುನ್ನೆಚ್ಚರಿಕಾ ಕ್ರಮಗಳು :
ಹೆಚ್ಚು ಬೆಚ್ಚನೆಯ ನೀರು ಸೇವನೆ ಮಾಡಿ.
ಆಹಾರದಲ್ಲಿ ಪ್ರೋಟಿನ್, ಜೀವಸತ್ವಗಳು ಹೆಚ್ಚಾಗಿ ಇರಲಿ.
ಹೊರಗಿನ ಆಹಾರಗಳ ಸೇವನೆ ನಿಲ್ಲಿಸಿ.
ಕೈಗಳನ್ನು ಆಗಾಗ ತೊಳೆಯುತ್ತಿರಿ. ಮನೆಯ ಸುತ್ತಲಿನ ಪರಸರ ಶುದ್ಧವಾಗಿಟ್ಟುಕೊಳ್ಳಿ/












